Breaking News

ಶಿವಮೊಗ್ಗ

ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬಹಿರಂಗ ಪತ್ರ – ಕೆ.ಎಸ್.ಈಶ್ವರಪ್ಪ

  ಶಿವಮೊಗ್ಗ ನಗರಕ್ಕೆ ಆಗಮಿಸುವಂತಹ ಮುಖ್ಯಮಂತ್ರಿಗಳಿಗೆ ವೈಯಕ್ತಿಕವಾಗಿ ಹಾಗೂ ಶಿವಮೊಗ್ಗ ಜನತೆಯ ಪರವಾಗಿ ಸ್ವಾಗತವನ್ನು ಕೋರಿದ ಈಶ್ವರಪ್ಪನವರು, ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಶಿವಮೊಗ್ಗದಿಂದ ಹೋಗುವುದರೊಳಗೆ ಉತ್ತರ ನೀಡಲಿ ಎಂದರು. *ರಾಜ್ಯಾದ್ಯಂತ ಪ್ರಮುಖ ನಗರಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ತಿಂಗಳುಗಳೇ ಕಳೆದರೂ ಇನ್ನೂ ಮೇಯರ್ ಉಪ ಮೇಯರ್ ಚುನಾವಣೆ ನಡೆದಿಲ್ಲ ಆದಷ್ಟು ಬೇಗ ಮೇಯರ್ ಉಪಮೇಯರ್ ಚುನಾವಣೆಯನ್ನು ನಡೆಸುವಂತೆ ಕೋರಲಾಗಿದೆ. *ವಿವಿಧ ಕಾರ್ಮಿಕರಿಗೆ ವಸತಿ ಕಲ್ಪಿಸಲು ಆದಾಯ ಮಿತಿ ಷರತ್ತನ್ನು ಸಡಿಲಗೊಳಿಸಿ, ಇಲ್ಲದಿದ್ದರೆ ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ನಿಗದಿಸಲಾಗಿರುವ ವಾರ್ಷಿಕ ಆದಾಯ ...

Read More »

ಬಿಜೆಪಿಯವರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ.

ಬಿಜೆಪಿಯವರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಯಡಿಯೂರಪ್ಪ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ ಸಿಎಂ ಆದ ಮೇಲೆ ಯಡಿಯೂರಪ್ಪ ಮಾತು ತಪ್ಪಿದ್ದಾರೆ. ಹೀಗಾಗಿ ಬಿಜೆಪಿಯವರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ. ಮಾನ್ಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೇಳಿದಂತೆ ನಡೆದಿದೆ. ಅದೇ ರೀತಿ ಹಿಂದಿನ ಯುಪಿಎ ಸರ್ಕಾರ ರೈತರ 74 ಸಾವಿರ ಕೋಟಿ ಹಣ, ಸಾಲ ಮನ್ನಾ ಮಾಡಿದೆ. ಹಾಗಾಗಿ ನಮಗೆ ಜನರ ಬಳಿ ಮತ ಕೇಳುವ ಹಕ್ಕಿದೆ. ಯುವಕರು ಈ ಬಾರಿ ಚುನಾವಣೆಯಲ್ಲಿ ಕೇಂದ್ರದ ವಿರುದ್ಧ ...

Read More »

ಯಡಿಯೂರಪ್ಪನವರಿಗೆ ಹೇಗಾದ್ರು ಮಾಡಿ ಮುಖ್ಯಮಂತ್ರಿಯಾಗಬೇಕು ಅನ್ನೋ ದುರಾಸೆ.

  ದೇಶದ ಅರ್ಥಿಕ ಪರಿಸ್ಥಿತಿ ಅದಗೆಟ್ಟಿದೆ. ದೇಶದ ಬೆಳವಣಿಗೆಗೆ ವಸ್ತುಗಳನ್ನ ರಫ್ತು ಮಾಡೋದು ಹೆಚ್ಚಾಗಬೇಕು. ಆದ್ರೆ ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ವಸ್ತು ಗಳ ಆಮದು ಹೆಚ್ಚಾಗಿದೆ. ದೇಶದಲ್ಲಿ ಪೆಟ್ರೋಲ್, ಡೀಸಲ್, ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಲೇ ಇದೆ. ಅಚ್ಚೆದಿನ್ ಅಂತ ಮೋದಿಯವರು ಹೇಳಿದ್ದು ಇದೇನಾ.?? ದೇಶದಲ್ಲಿ ಕಪ್ಪು ಹಣ ಹೆಚ್ಚಾಗಿದೆ. ಕೇಂದ್ರಸರ್ಕಾರಕ್ಕೆ ಇದುವರೆಗೂ ಎಷ್ಟು ಕಪ್ಪು ಹಣ ಸಿಕ್ಕಿದೆ ಎಂದು ಹೇಳಬೇಕು… ಚುನಾವಣೆ ಗೆಲ್ಲಲು ಕೊಟ್ಟ ಬರವಸೆಗಳಲ್ಲಿ ಯಾವುದನ್ನು ಬಿ.ಜೆ.ಪಿ ಈಡೇರಿಸಿಲ್ಲಾ. ಯಡಿಯೂರಪ್ಪ ಕೆ.ಜೆ.ಪಿ ಕಟ್ಟಿದಾದ ನಮ್ಮ ಅಪ್ಪನ ಆಣೆ ಬಿ.ಜೆ.ಪಿ ...

Read More »

ಮಲೆನಾಡಿನಲ್ಲಿ ಸಂಭ್ರಮದ‌ ಭೂಮಿ ಹುಣ್ಣಿಮೆ

ಭೂಮಿ ಹುಣ್ಣಿಮೆ ಒಂದು ಅಪರೂಪದ ವಿಶೇಷ ಹಬ್ಬ. ಇದನ್ನು ಸೀಗೆ ಹುಣ್ಣಿಮೆ ಎಂದೂ ಕರೆಯುತ್ತಾರೆ. ಭೂ ತಾಯಿಗೆ ಮಕ್ಕಳು ಈ ದಿನ ವಿಶೇಷ ಪೂಜೆ ಮಾಡುತ್ತಾರೆ. ಅದರಲ್ಲೂ ಮಲೆನಾಡಿನ ಪ್ರದೇಶಗಳಲ್ಲಿ ಹೆಚ್ಚಾಗಿ ಈ ಹಬ್ಬವನ್ನು ಆಚರಿಸುತ್ತಾರೆ..ವರ್ಷಪೂರ್ತಿ ಬೆಳೆ ನೀಡುವ ಭೂ ತಾಯಿಗೆ ರೈತರು ಈ ದಿನ ಪೂಜೆ ಮಾಡಿ ನಮಿಸುತ್ತಾರೆ.ಇನ್ನೂ ಕೆಲವರ ಪ್ರಕಾರ ಈ ಹಬ್ಬವು, ಭತ್ತ ಮೊಳಕೆಯೊಡೆದು ಪೈರು ಹಿಡಿಯುವ ಈ ಸಂದರ್ಭದಲ್ಲಿ ಭೂಮಿ ತಾಯಿಗೆ ಸೀಮಂತ ಮಾಡುವುದು ಎಂಬ ಪ್ರತೀತಿಯೂ ಇದೆ..ಭೂಮಿ ಹುಣ್ಣಿಮೆ ದಿನ ತೋಟದಲ್ಲಿ ಪೂಜೆ ಮಾಡುವ ಗಿಡದ ಬುಡ ...

Read More »

ಶಿವಮೊಗ್ಗ ದಸರಾ..

ಶಿವಮೊಗ್ಗ ದಸರಾ ಹಳೇ ಜೈಲು ಆವರಣದಲ್ಲಿ ಅದ್ಧೂರಿಯಾಗಿ ನೆರವೇರಿತು. ಪ್ರತಿ ವರ್ಷ ಬನ್ನಿ ಕಡಿಯುವ ಆಚರಣೆ ಎನ್ಇಎಸ್ ಮೈದಾನದಲ್ಲಿ ನಡೆಯುತ್ತಿತ್ತು. ಆದರೆ ಜಾಗದ ಕೊರತೆಯಿಂದಾಗಿ ಇದೇ ಮೊದಲ ಬಾರಿಗೆ ಹಳೇ ಜೈಲು ಆವರಣದಲ್ಲಿ ಬನ್ನಿ ಕಡಿಯಲಾಯಿತು. ಈ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಗಮಿಸಿದ್ದರು. ಬನ್ನಿ ಕಡಿಯುವ ಮೂಲಕ ತಹಶೀಲ್ದಾರ್ ಸತ್ಯನಾರಾಯಣ ಎಲ್ಲರಿಗೂ ಶುಭ ಹಾರೈಸಿದರು ಹಾಗೂ ರಾವಣನ ಪ್ರತಿಕೃತಿಯನ್ನು ದಹಿಸಿ, ರಂಗು ರಂಗಿನ ಪಟಾಕಿ ಸಿಡಿಸಲಾಯಿತು. ಉತ್ಸವದಲ್ಲಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಸೇರಿದಂತೆ ...

Read More »

ಮೀಟೂ ಪ್ರಕರಣ ಮೋದಿ ಸರ್ಕಾರದ ಮುಂದಿನ ದಿವಾಳಿಗೆ ಸಾಕ್ಷಿ: ಬೇಳೂರು ಗೋಪಾಲಕೃಷ್ಣ

ಈ ರಾಜ್ಯದಲ್ಲಿ ಎದುರಾಗಿರುವ ಉಪ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ಸುದ್ದಿಗೋಷ್ಟಿಯಲಿ ಹೇಳಿದರು. ಮೀಟೂ ಪ್ರಕರಣದಲ್ಲಿ ಕೇಂದ್ರದ ಒಂದು ವಿಕೆಟ್ ಪತನವಾಗಿರುವುದು ಮೋದಿ ಸರ್ಕಾರದ ಮುಂದಿನ ದಿವಾಳಿಗೆ ಸಾಕ್ಷಿಯಾಗಿದೆ. ತತ್ವ ಸಿದ್ಧಾಂತ ಹೇಳುವ ಬಿಜೆಪಿಯಲ್ಲಿ ಮಹಿಳೆಯರಿಗೆ ಗೌರವವಿಲ್ಲ. ಮೀಟೂ ಅಭಿಯಾನದಲ್ಲಿ ಹತ್ತಾರು ಮಹಿಳೆಯರು ಆರೋಪ ಮಾಡಿ ಇಷ್ಟು ದಿನಗಳ ಮೇಲೆ ಸಚಿವ ಅಕ್ಪರ್ ರಾಜೀನಾಮೆ ನೀಡಿದ್ದಾರೆ. ಇದು ಬಿಜೆಪಿ ಪಕ್ಷಕ್ಕೆ ಒಂದು ಪಾಠ. ಮೋದಿ ಸರ್ಕಾರದಲ್ಲಿ ಯಡಿಯೂರಪ್ಪ ಹಾಗೂ ಮಕ್ಕಳಿಗೆ ಮಾತ್ರ ಅಚ್ಛೆ ದಿನ್ ...

Read More »

.ದಸರಾಕ್ಕೆ ರಾಜ್ಯ ಸರ್ಕಾರದಿಂದ 1ಕೋಟಿ ಬಿಡುಗಡೆ: ಈಶ್ವರಪ್ಪ

ಹಳೆಯ ಜೈಲಿನ ಜಾಗದಲ್ಲಿ ವಿಜಯ ದಶಮಿ ಆಚರಿಸಲು ಈ ಬಾರಿ ಸಿದ್ಧತೆ ನಡೆಸಲಾಗಿದೆ. ನಗರದಲ್ಲಿ ವಿಜಯದಶಮಿ ಆಚರಿಸಲು ರಾಜ್ಯ ಸರ್ಕಾರಕ್ಕೆ 2 ಕೋಟಿರೂ. ಕೋರಲಾಗಿತ್ತು, ಸರ್ಕಾರ 1 ಕೋಟಿರೂಪಾಯಿ ಬಿಡುಗಡೆ ಮಾಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಕೆ.ಎಸ್. ಈಶ್ವರಪ್ಪ ತಿಳಿಸಿದರು..ಉತ್ಸವದಲ್ಲಿ 170 ದೇವರುಗಳು ಪಾಲ್ಗೊಳ್ಳಲು ತಲಾ 4 ಸಾವಿರರೂ.ಗಳನ್ನು ಪಾಲಿಕೆಯಿಂದ ನೀಡಲಾಗುತ್ತಿದೆ. ಈ ಬಾರಿಯೂ ಎಂದಿನಂತೆ ವಿಜೃಂಭಣೆಯಿಂದ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ. ಉಪ ಚುನಾವಣೆ ಎದುರಾಗಿದ್ದರಿಂದ ನಾವು ಅಂದುಕೊಂಡಂತೆ ದಸರಾ ಆಚರಣೆ ಸಾಧ್ಯವಾಗಿಲ್ಲ. ಆದರೂ ಪಾಲಿಕೆಯಿಂದ ಆಯೋಜಿಸಿರುವ ದಸರಾವನ್ನು ಆಕ್ಷೇಪಿಸುವುದಿಲ್ಲ ಎಂದರು ...

Read More »

ಸಮ್ಮಿಶ್ರ ಸರ್ಕಾರದಿಂದ ಪ್ರಜಾಪ್ರಭುತ್ವಕ್ಕೆ ದ್ರೋಹ..

  ಮೇಯರ್- ಉಪಮೇಯರ್ ಚುನಾವಣೆ ವಿಳಂಬ ಮಾಡುವ ಮೂಲಕ ಜನಪ್ರತಿನಿಧಿಗಳಿದ್ದರೂ ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಅವಕಾಶ ಮಾಡಿಕೊಡುವ ಮೂಲಕ ಸಮ್ಮಿಶ್ರ ಸರ್ಕಾರ ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗ, ತುಮಕೂರು, ಮೈಸೂರು ಪಾಲಿಕೆಗಳ ಮೇಯರ್ ಹಾಗೂ ಅನೇಕ ಸ್ಥಳಿಯ ಸಂಸ್ಥೆಗಳ ಚುನಾವಣೆಗಳು ನಡೆದು ಮೀಸಲಾತಿ ಘೋಷಿಸಿದ್ದರೂ ಚುನಾವಣೆ ನಡೆಸಲು ವಿಳಂಬ ಮಾಡಲಾಗುತ್ತಿದೆ. ಘೋಷಿತ ಮೀಸಲಾತಿ ಬಿಜೆಪಿಗೆ ಹೆಚ್ಚು ಅನುಕೂಲವಾಗುತ್ತಿದೆ. ಹೀಗಾಗಿ ಇದನ್ನು ಬದಲಿಸಲು ಕುತಂತ್ರ ರಾಜಕಾರಣ ಮಾಡುತ್ತಿದೆ. ಸರ್ಕಾರ ತಕ್ಷಣ ಮೇಯರ್- ಉಪಮೇಯರ್ ಚುನಾವಣೆ ...

Read More »

ರಸ್ತೆ ಸುರಕ್ಷತೆ ಕುರಿತು ಕಿರುಚಿತ್ರ ಸ್ಪರ್ಧೆ

ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ, ಅಂಬೆಗಾಲು, ಬೆಳ್ಳಿ ಮಂಡಲ ಇವರ ಸಂಯುಕ್ತಾಶ್ರಯದಲ್ಲಿ ರಸ್ತೆ ಸುರಕ್ಷತೆ ಕುರಿತು ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ೪ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಶಾಲಾ ಮಕ್ಕಳಿಗೆ ೧೧ ರಿಂದ ೧೮ ವರ್ಷದವರಿಗೆ, ೧೯ ರಿಂದ ೨೦ ವರ್ಷದ ಯುವಕ, ಯುವತಿಯರನ್ನು ಗುರಿಯಾಗಿಟ್ಟುಕೊಂಡು ಕಿರುಚಿತ್ರವನ್ನು ನಿರ್ಮಿಸಬಹುದಾಗಿದೆ. ಕಿರುಚಿತ್ರವು ಮೂರು ನಿಮಿಷ ಮೀರಿರಬಾರದು. ರಾಜ್ಯ ಮಟ್ಟದ ಸ್ಪರ್ಧೆ ಇದಾಗಿದ್ದು, ಕಿರುಚಿತ್ರ ತಯಾರಕರು, ನಿರ್ದೇಶಕರು, ತಂತ್ರಜ್ಞರು ಕೂಡ ಭಾಗವಹಿಸಬಹುದಾಗಿದೆ. ವಿಜೇತ ಕಿರುಚಿತ್ರಗಳಿಗೆ ಪ್ರಥಮ ಬಹುಮಾನ ೧೦ ಸಾವಿರ, ...

Read More »