Cnewstv / 22.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ವಿಧಾನಸಭಾ ಚುನಾವಣೆ : ಶಿವಮೊಗ್ಗ ನಗರ ಕ್ಷೇತ್ರದ ಕೋಟೆಯಲ್ಲಿ ಆಯನೂರು ಮಂಜುನಾಥ್ ಕಂಪನ..!!??
–Chaitra Sajjan.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಶಿವಮೊಗ್ಗ ನಗರದಲ್ಲಿ ರಾಜಕೀಯ ಚಿತ್ರಣ ದಿನೇ ದಿನೇ ಬದಲಾಗುತ್ತಿದೆ. ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಇದೀಗ ಚರ್ಚೆಗೆ ಗ್ರಾಸವಾಗಿರುವುದು ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್.
ಆಯನೂರು ಮಂಜುನಾಥ್ ರವರು ಶಿವಮೊಗ್ಗ ನಗರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಆಕಾಂಕ್ಷಿಯಾಗಿದ್ದಾರೆ. ಆದರೆ ಯುಗಾದಿ ಹಬ್ಬಕ್ಕೆ ಶುಭಾಶಯ ಕೋರಿ ಹಾಕಿದ ಫ್ಲೆಕ್ಸ್ ಇದೀಗ ಆಯನೂರು ಮಂಜುನಾಥ್ ಮುಂದಿನ ನಡೆಯ ಬಗ್ಗೆ ನಾನಾ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಉತ್ತಮ ಸಂಘಟನಾಕಾರ, ವಾಗ್ಮಿ, ಚತುರ ಆಡಳಿತಗಾರನಾಗಿರುವ ಆಯನೂರು ಮಂಜುನಾಥ್ ಬಿಜೆಪಿ ಪಕ್ಷದಿಂದಲೇ ಬಂಡಾಯ ಎದ್ದವರಂತೆ ತೋರುತ್ತಿದೆ. ಬಿಜೆಪಿ ಪಕ್ಷದ ನಾಯಕರು ತೀವ್ರವಾಗಿ ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದಾರೆ. ಮತ್ತೊಮ್ಮೆ ಆಯನೂರು ಮಂಜುನಾಥ್ ರವರ ಕೆಲವು ಹೇಳಿಕೆಗಳು, ಕೆಲವೇ ಮೌನ ಬಿಜೆಪಿಗೆ ನುಂಗಲಾದ ತುತ್ತಾಗುತ್ತಿದೆ.
ಪಕ್ಷ ಅವಕಾಶ ನೀಡಿದರೆ ಈ ಬಾರಿ ಶಿವಮೊಗ್ಗ ನಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ ಆದರೆ ಇದನ್ನೇ ಕಾಂಗ್ರೆಸ್ ಪಕ್ಷ ಬಳಸಿಕೊಳ್ಳಲು ನೋಡುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಮಾತುಗಳು ಕೂಡ ಹರಿದಾಡುತ್ತಿದೆ ಒಂದು ವೇಳೆ ಇದೇ ಮಾತು ಸತ್ಯವಾದರೇ, ಕಾಂಗ್ರೆಸ್ ಪಕ್ಷಕ್ಕೆ ಆಯನೂರು ಮಂಜುನಾಥ್ ವರದಾನವಾಗಲಿತ್ತಾರೆ.
ಶಿವಮೊಗ್ಗ ನಗರ ವಿಧಾನಸಭಾ ಟಿಕೆಟ್ ಗಾಗಿ ಎಚ್ ಸಿ ಯೋಗೇಶ್, ಹೆಚ್ ಎಸ್ ಸುಂದರೇಶ್, ಎಸ್ ಪಿ ದಿನೇಶ್, ಕೆ ಬಿ ಪ್ರಸನ್ನ ಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದಿಂದ ಒಟ್ಟು 11 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಹೇಗಾದರೂ ಮಾಡಿ ಶಿವಮೊಗ್ಗ ನಗರದಲ್ಲಿ ಅಧಿಕಾರ ಚುಕ್ಕಾಣಿಯನ್ನು ಹಿಡಿಯಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕನಿಗೆ ಟಿಕೆಟ್ ಕೊಡುವ ನಿಟ್ಟಿನಲ್ಲಿ ಯೋಚನೆ ಸಹ ಮಾಡಿತ್ತು. ಸಮುದಾಯದ ದೃಷ್ಟಿಕೋನದಿಂದ ಯೋಚನೆ ಮಾಡಿದರೆ ಆಯನೂರು ಮಂಜುನಾಥ್ ತನ್ನದೇ ಆದಂತಹ ಪ್ರಾಬಲ್ಯವನ್ನು ಹೊಂದಿದ್ದಾರೆ.
ಈಗಾಗಲೇ ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನಪರಿಷ ಸದಸ್ಯರಾಗಿ ಮಂಜುನಾಥ್ ರವರು ಆಯ್ಕೆಯಾಗಿ ಸದನ ಕಲಾಪಗಳಲ್ಲಿ ಮೋದಿ ಪಕ್ಷದ ಸರ್ಕಾರವಿದ್ದರೂ ನೌಕರರ ಪರವಾಗಿ ಕಾರ್ಮಿಕರ ಪರವಾಗಿ ಜನರ ಧ್ವನಿಯಾಗಿ ಹಲವಾರು ವಿಚಾರಗಳನ್ನು ಸರ್ಕಾರಗಳಿಗೆ ಚಾಟಿ ಬೀಸಿದ್ದಾರೆ , ಈ ಹಿಂದೆ ಬಿಜೆಪಿ ಪಕ್ಷದಿಂದ ಹೊಸನಗರ ಹಾಗೂ ಭದ್ರಾವತಿಯಲ್ಲಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿದ್ದರು ವಿಧಾನಸಭೆಯ ಶಾಸಕರಾಗುವ ಕನಸು ನನಸಾಗಲಿಲ್ಲ ಆದರೆ ಈಗ ಶಿವಮೊಗ್ಗ ನಗರದ ರಾಜಕೀಯ ಚಟುವಟಿಕೆಯಲ್ಲಿ ಮಂಜುನಾಥ್ ಅವರು ಬಿಜೆಪಿ ಪಕ್ಷದ ಓರ್ವ ಪ್ರಬಲ ಆಕಾಂಕ್ಷಿಯಾಗಿದ್ದು ಮಾಧ್ಯಮದವರು ಅವರನ್ನು ಕೇಳಿದ ಪ್ರಶ್ನೆಗೆ ಮಂಜುನಾಥ್ ಅವರು ನಾನು ಶಿಕ್ಷಣ, ಕೆಲಸ ಮಾಡಿದ ಕ್ಷೇತ್ರ ಶಿವಮೊಗ್ಗ ನಗರ ಕ್ಷೇತ್ರದ ನನ್ನ ಕಾರ್ಯಕ್ಷೇತ್ರದ ಸೇವೆ ಮಾಡಬೇಕೆಂಬುದು ನನ್ನ ಹಂಬಲ ಅದಕ್ಕಾಗಿ ನಾನು ಬಿಜೆಪಿ ಪಕ್ಷದಿಂದ ಟಿಕೆಟ್ ಕೇಳುತ್ತಿದ್ದೇನೆ ಹೊರತು ನನ್ನ ಮಕ್ಕಳಿಗಾಗಲಿ ,ಮೊಮ್ಮಕ್ಕಳಿಗಾಗಲಿ ಟಿಕೆಟ್ ಕೇಳುತ್ತಿಲ್ಲ ಇಂತಹ ಮಂಜುನಾಥ್ ರವರ ಬ್ಯಾನರ್ ನಲ್ಲಿರುವ ಸಾಲುಗಳು ಹಾಗೂ ಅವರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಕುತೂಹಲಕ್ಕಿಂತ ಆಶ್ಚರ್ಯ ಹಾಗೂ ಹಲವು ಅನುಮಾನಗಳು ಮೂಡಿರುವುದಂತೂ ಅಕ್ಷರಾಂಶ ಸತ್ಯ, ಬಿಜೆಪಿ ಪಕ್ಷ ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಅವಕಾಶ ನೀಡುತ್ತಾ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಬಿಜೆಪಿಗೆ ಬಿಗ್ ಫೈಟ್ ಕೊಡ್ತಾರಾ ಎಂಬ ಪಿಸುಗುಡುವ ಮಾತುಗಳು ಸತ್ಯವ ಎಂಬುದನ್ನು ಕಾದು ನೋಡಬೇಕಿದೆ.
ಒಟ್ಟಿನಲ್ಲಿ ಯುಗಾದಿಯ ಸಂಭ್ರಮದಲ್ಲಿ ರಾಜಕೀಯ ವಿಶ್ಲೇಷಕರ ಹೊಸ ಹೊಸ ಚರ್ಚೆಗಳಿಗೆ ಶಿವಮೊಗ್ಗ ನಗರ ಕ್ಷೇತ್ರ ಸಾಕ್ಷಿಯಾಗಿದೆ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments