Breaking News

Monthly Archives: January 2025

ಮಹಿಳಾ ಕಾನ್ಸ್​ಟೇಬಲ್​ಗೆ 18 ಲಕ್ಷ ರೂ. ವಂಚನೆ..

cnewstv | 31.01.2025  | ಬೆಂಗಳೂರು | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಮಹಿಳಾ ಕಾನ್ಸ್​ಟೇಬಲ್​ಗೆ 18 ಲಕ್ಷ ರೂ. ವಂಚನೆ.. ಬೆಂಗಳೂರು : ಇತ್ತೀಚೆಗೆ ಮ್ಯಾಟ್ರಿಮೋನಿ ತಾಣಗಳ ಮೂಲಕ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಕಾನ್ಸ್​ಟೇಬಲ್ ಮಹಿಳೆಯೊಬ್ಬರು ಮ್ಯಾಟ್ರಿಮೋನಿ ತಾಣದಲ್ಲಿ ಪರಿಚಯವಾದ ವ್ಯಕ್ತಿಯಿಂದ 18 ಲಕ್ಷ ರೂ. ವಂಚನೆಗೆ ಒಳಗಾಗಿದ್ದಾರೆ. ಸಂತ್ರಸ್ತೆಯು ಅವರು ಕನ್ನಡ ಮ್ಯಾಟ್ರಿಮೋನಿ ಮತ್ತು ಯಾದವ ಮ್ಯಾಟ್ರಿಮೋನಿ ತಾಣಗಳಲ್ಲಿ ಜೀವನ ಸಂಗಾತಿಯನ್ನು ಹುಡುಕುತ್ತಿರುವಾಗ ಅಶೋಕ್ ಮುಸ್ತಿ ಎಂಬಾತ ಪರಿಚಯವಾಗಿದ್ದಾನೆ. ತೆಲಂಗಾಣ ಮೂಲದವನಾದ ...

Read More »

ನೀರಿನ ಕಂದಾಯ ಕಟ್ಟಲು ಭಾನುವಾರ ವಿಶೇಷ ಕೌಂಟರ್.

cnewstv |  24.01.2025  | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ನೀರಿನ ಕಂದಾಯ ಕಟ್ಟಲು ಭಾನುವಾರ ವಿಶೇಷ ಕೌಂಟರ್. ಶಿವಮೊಗ್ಗ : 2024-25ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗದ ವತಿಯಿಂದ ಜ.26ರ ಭಾನುವಾರದಂದು ವಿಶೇಷ ವಸೂಲಾತಿ ಕೌಂಟರ್‌ಗಳನ್ನು ತರೆಯಲಾಗಿದೆ. ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿಗಾಗಿ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಗಾಂಧೀ ಬಜಾರ್ ಬಸವೇಶ್ವರ ದೇವಸ್ಥಾನದ ...

Read More »

ವಿಜಯನಗರದಲ್ಲಿ ಯುವತಿ ನೇಣಿಗೆ ಶರಣು

ಶಿವಮೊಗ್ಗ: ಆರೋಗ್ಯ ಸಮಸ್ಯೆಯಿಂದ ಮನನೊಂದಿದ್ದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿವಮೊಗ್ಗ ನಗರದ ನೇತಾಜಿ ಸರ್ಕಲ್ ಸಮೀಪದ ವಿಜಯನಗರ 4ನೇ ಮುಖ್ಯರಸ್ತೆಯಲ್ಲಿನ ಮನೆಯಲ್ಲಿ ಯುವತಿ ನೇಣಿಗೆ ಶರಣಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಸೌಮ್ಯ(25) ಮೃತ ಯುವತಿ. ವಿಜಯನಗರದಲ್ಲಿ ಪೋಷಕರೊಂದಿಗೆ ವಾಸವಿದ್ದ ಸೌಮ್ಯ, ಬಿಕಾಂ ವ್ಯಾಸಂಗದ ಬಳಿಕ ಕಳೆದ 3 ವರ್ಷದಿಂದ ಮಾಚೇನಹಳ್ಳಿಯಲ್ಲಿರುವ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಸೌಮ್ಯಳಿಗೆ ಪೋಷಕರು, ಶಿವಮೊಗ್ಗದ ಮೆಗ್ಗಾನ್ ಸೇರಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು.ಹೀಗಿದ್ದರೂ ಉಸಿರಾಟ ಸಮಸ್ಯೆ ಕಡಿಮೆಯಾಗಿರಲಿಲ್ಲ. ಇದರಿಂದ ಮನನೊಂದಿದ್ದ ಸೌಮ್ಯ, ನಿನ್ನೆ ...

Read More »

ಶೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ : ಆರ್.ಎಂ. ಮಂಜುನಾಥಗೌಡ.

cnewstv | 23.01.2025 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ : ಆರ್.ಎಂ. ಮಂಜುನಾಥಗೌಡ. ಶಿವಮೊಗ್ಗ : ಕಳೆದ ಸಾಲಿನಲ್ಲಿ ಮಂಡಳಿ ವತಿಯಿಂದ ಮಂಜೂರಾಗಿರುವ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕಿದೆ ಎಂದು ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡ ಹೇಳಿದರು. ಇಂದು ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಕಚೇರಿಯಲ್ಲಿ ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿಯ 2025-26ನೇ ಸಾಲಿನ ಹೊಸ ದಿನಚರಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಕಳೆದ ಸಾಲಿನಲ್ಲಿ ಮಂಜೂರಾದ 954 ಕಾಮಗಾರಿಗಳ ...

Read More »

ಶಿವಮೊಗ್ಗದಲ್ಲಿ ಪ್ರತ್ಯೇಕ ಸ್ಟುಡಿಯೋ ಸ್ಥಾಪಿಸಲಾಗುತ್ತದೆ – ಕೇಂದ್ರ‌ ಸಚಿವ ಡಾ.ಮುರುಗನ್.

cnewstv | 23.01.2025 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗದಲ್ಲಿ ಪ್ರತ್ಯೇಕ ಸ್ಟುಡಿಯೋ ಸ್ಥಾಪಿಸಲಾಗುತ್ತದೆ – ಕೇಂದ್ರ‌ ಸಚಿವ ಡಾ.ಮುರುಗನ್. ಶಿವಮೊಗ್ಗ : ಸಂಸದರ ನಿರಂತರ ಪ್ರಯತ್ನದ ಫಲವಾಗಿ ಮರು ಪ್ರಸಾರ ಟ್ರಾನ್ಸ್ ಮೀಟರ್ ಸ್ಥಾಪನೆ ಸಾಧ್ಯವಾಗಿದೆ. ಹಾಗಾಗಿ ಶಿವಮೊಗ್ಗದಲ್ಲಿ ಪ್ರತ್ಯೇಕ ಸ್ಟುಡಿಯೋ ಸ್ಥಾಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಅಗತ್ಯ ನೆರವು ನೀಡಲಿದೆ ಎಂದು ಕೇಂದ್ರ ಸಚಿವ ಡಾ.ಮುರುಗನ್ ಹೇಳಿದ್ದಾರೆ. ಇಂದಿ ಶಿವಮೊಗ್ಗದಲ್ಲಿ ದೂರದರ್ಶನ ಅಧಿಕ ಶಕ್ತಿ ಮರು ಪ್ರಸಾರ ಕೇಂದ್ರದಲ್ಲಿ ಭದ್ರಾವತಿ ಆಕಾಶವಾಣಿಯ ೧೦ ಕೆವಿ ಎಫ್ ...

Read More »

ಸುಮಾರು 10 ಕೋಟಿ ವೆಚ್ಚದ ಟ್ರಾನ್ಸ್ ಮೀಟರ್ ಕೆನಡಾದಿಂದ ಬಂದಿದೆ – ಸಂಸದ ಬಿ.ವೈ.ರಾಘವೇಂದ್ರ.

cnewstv | 23.01.2025 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಸುಮಾರು 10 ಕೋಟಿ ವೆಚ್ಚದ ಟ್ರಾನ್ಸ್ ಮೀಟರ್ ಕೆನಡಾದಿಂದ ಬಂದಿದೆ – ಸಂಸದ ಬಿ.ವೈ.ರಾಘವೇಂದ್ರ. ಶಿವಮೊಗ್ಗ : ಶಿವಮೊಗ್ಗ ದೂರದರ್ಶನ ಅಧಿಕ ಶಕ್ತಿ ಮರು ಪ್ರಸಾರ ಕೇಂದ್ರದಲ್ಲಿ ಭದ್ರಾವತಿ ಆಕಾಶವಾಣಿಯ ೧೦ ಕೆವಿ ಎಫ್ ಎಂ ಟ್ರಾನ್ಸ್ ಮಿಷನ್ ಅಳವಡಿಕೆ ಕಾರ್ಯಕ್ರಮ ಇಂದು ನೆರವೆರಿತು.‌ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಡಾ.ಎಲ್.ಮುರುಗನ್ ರಿಂದ ನೂತನ ಟ್ರಾನ್ಸ್ ಮಿಷನ್ ಗೆ ಪೂಜೆ ಸಲ್ಲಿಸಲಾಯಿತು. ಸುಮಾರು 10 ಕೋಟಿ ...

Read More »

ಜಮೀನಿನಲ್ಲಿ ಟ್ರಾನ್ಸಫಾರ್ಮರ್‌ ಅಳವಡಿಸುವ ವೇಳೆ ಕಿರಿಕ್‌, ಸ್ಥಳದಲ್ಲಿಯೇ ಕೊಲೆ..

cnewstv | 23.01.2025 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಜಮೀನಿನಲ್ಲಿ ಟ್ರಾನ್ಸಫಾರ್ಮರ್‌ ಅಳವಡಿಸುವ ವೇಳೆ ಕಿರಿಕ್‌, ಸ್ಥಳದಲ್ಲಿಯೇ ಕೊಲೆ.. ಶಿವಮೊಗ್ಗ : ಜಮೀನಿನಲ್ಲಿ ಟ್ರಾನ್ಸ್ ಫಾರ್ಮರ್‌ ಅಳವಡಿಸುವ ವೇಳೆ ಕಿರಿಕ್‌ ನಡೆದು ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಕೊಲೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ನಡೆದಿದೆ. ಮೃತರನ್ನ ದೊಡ್ಡೇರಿ ಗ್ರಾಮದ ಶಾಂತಕುಮಾರ್‌ (35) ಎಂದು ಗುರುತಿಸಲಾಗಿದೆ. ವಿದ್ಯುತ್‌ ಟ್ರಾನ್ಸ್ ಫಾರ್ಮರ್‌ನ್ನು ತಮ್ಮ ಜಮೀನಿನಲ್ಲಿ ಅಳವಡಿಸುವ ವಿಚಾರವಾಗಿ ಲೇಪಾಕ್ಷಿ ಎಂಬುವರ ಜೊತೆಗೆ ಜಗಳವಾಗಿ, ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ...

Read More »

ಕೈ ಚೀಲದಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ನವಜಾತ ಶಿಶು ಪತ್ತೆ.

ಶಿವಮೊಗ್ಗ: ನವಜಾತ ಗಂಡು ಶಿಶುವನ್ನು ಚೀಲದಲ್ಲಿ ಸುತ್ತಿ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ನಗರದ ಶ್ರೀರಾಮಪುರದ 2ನೇ ಕ್ರಾಸ್ ನಲ್ಲಿ ಬೋರೆವಲ್ ಬಳಿ ಚೀಲದಲ್ಲಿ ಗಂಡು ಶಿಶುವನ್ನ ಬಿಟ್ಟು ಹೋಗಿದ್ದು, ಮಗು ಅಳುವುದನ್ನು ಕೇಳಿ ಇಂದು ಬೆಳಿಗ್ಗೆ ಸ್ಥಳೀಯರು ಚೀಲವನ್ನ ಪರೀಕ್ಷಿಸಿದ್ದಾರೆ. ಈ ವೇಳೆ ಚೀಲದಲ್ಲಿ ಮಗು ಇರುವುದನ್ನು ಗಮನಿಸಿ, ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಬರುವ ಮೊದಲೇ ಸ್ಥಳೀಯರು ಮಗುವಿನ ಆರೈಕೆ ಮಾಡಿದ್ದಾರೆ. ಸದ್ಯ ಮಗುವನ್ನು ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ಮತ್ತು ...

Read More »

ತ್ಯಾವರೆಕೊಪ್ಪ ಮೃಗಾಲಯದಲ್ಲಿ ಹೆಣ್ಣು ಹುಲಿ ಸಾವು

ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ‘ಅಂಜನಿ’ ಎಂಬ ಹೆಣ್ಣು ಹುಲಿ ಮೃತಪಟ್ಟಿದೆ. 17 ವರ್ಷ ವಯಸ್ಸಿನ ಹೆಣ್ಣು ಹುಲಿಯು ವಯೋ ಸಹಜವಾದ ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃಗಾಲಯದಲ್ಲಿ ಮೃತಪಟ್ಟಿದೆ. ಪಶು ವೈದ್ಯಕೀಯ ಕಾಲೇಜಿನ ಪಶುವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ. 2022 ರಲ್ಲಿ ಮೈಸೂರು ಜಿಲ್ಲೆಯ ಕೂರ್ಗಳ್ಳಿಯ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರದಿಂದ ಅಂಜನಿ ಹುಲಿಯನ್ನು ಶಿವಮೊಗ್ಗ ಮೃಗಾಲಯಕ್ಕೆ ತರಲಾಗಿತ್ತು. ಈ ಹುಲಿಯ ಸಾವಿನಿಂದ ತ್ಯಾವರೆಕೊಪ್ಪ ಮೃಗಾಲಯದಲ್ಲಿ 4 ಹೆಣ್ಣು ...

Read More »

ಕಾಡಾನೆ ಬಳಿಕ ಚಿರತೆ ಹಾವಳಿ: ಗುಬ್ಬಿಗಾ ಗ್ರಾಮದಲ್ಲಿ ನಾಯಿ ಹೊತ್ತೊಯ್ದ ಚಿರತೆ

ಶಿವಮೊಗ್ಗ: ಮನೆ ಬಾಗಿಲಲ್ಲಿ ಮಲಗಿದ್ದ ನಾಯಿಯನ್ನ ಚಿರತೆ ಹೊತ್ತೊಯ್ದಿರುವ ಘಟನೆ ಗುಬ್ಬಿಗಾ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾ.ಪಂ ವ್ಯಾಪ್ತಿಯ ಗುಬ್ಬಿಗಾ ಗ್ರಾಮದಲ್ಲಿ ತಡರಾತ್ರಿ ಚಿರತೆ ಕಾಣಿಸಿಕೊಂಡಿದ್ದು, ನಾಯಿಯನ್ನು ಎತ್ತಿಕೊಂಡು ಹೋಗಿದೆ. ಗುಬ್ಬಿಗಾ ಗ್ರಾಮದ ಮಂಜಪ್ಪಗೌಡ ಎಂಬುವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದ್ದು, ಮನೆ ಬಾಗಿಲ ಬಳಿಯೇ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಇಂದು ಬೆಳಿಗ್ಗೆ ನಾಯಿ ಕಾಣಿಸದಿರುವಾಗ ಮನೆಯ ಸಿಸಿ ಕ್ಯಾಮರವನ್ನು ಪರಿಶೀಲಿಸಿದ್ದು, ಚಿರತೆ ಬಂದು ನಾಯಿಯನ್ನು ಹೊತ್ತೊಯ್ದಿರುವುದು ಗಮನಕ್ಕೆ ಬಂದಿದೆ. ಬೆಳ್ಳೂರು ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಈಗಾಗಲೇ ಆನೆಗಳ ...

Read More »