ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ, ಅಂಬೆಗಾಲು, ಬೆಳ್ಳಿ ಮಂಡಲ ಇವರ ಸಂಯುಕ್ತಾಶ್ರಯದಲ್ಲಿ ರಸ್ತೆ ಸುರಕ್ಷತೆ ಕುರಿತು ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ೪ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಶಾಲಾ ಮಕ್ಕಳಿಗೆ ೧೧ ರಿಂದ ೧೮ ವರ್ಷದವರಿಗೆ, ೧೯ ರಿಂದ ೨೦ ವರ್ಷದ ಯುವಕ, ಯುವತಿಯರನ್ನು ಗುರಿಯಾಗಿಟ್ಟುಕೊಂಡು ಕಿರುಚಿತ್ರವನ್ನು ನಿರ್ಮಿಸಬಹುದಾಗಿದೆ. ಕಿರುಚಿತ್ರವು ಮೂರು ನಿಮಿಷ ಮೀರಿರಬಾರದು. ರಾಜ್ಯ ಮಟ್ಟದ ಸ್ಪರ್ಧೆ ಇದಾಗಿದ್ದು, ಕಿರುಚಿತ್ರ ತಯಾರಕರು, ನಿರ್ದೇಶಕರು, ತಂತ್ರಜ್ಞರು ಕೂಡ ಭಾಗವಹಿಸಬಹುದಾಗಿದೆ. ವಿಜೇತ ಕಿರುಚಿತ್ರಗಳಿಗೆ ಪ್ರಥಮ ಬಹುಮಾನ ೧೦ ಸಾವಿರ, ದ್ವಿತೀಯ ೭.೫ ಸಾವಿರ, ತೃತೀಯ ೫ ಸಾವಿರ ಮತ್ತು ೫ ಜನರಿಗೆ ತಲಾ ೨ ಸಾವಿರದಂತೆ ವಿಶೇಷ ಪುರಸ್ಕಾರ ನೀಡಲಾಗುವುದು ಎಂದರು.
ಬಹುಮಾನ ವಿತರಣಾ ಸಮಾರಂಭವು ನ.೧೧ ರಂದು ಸಂಜೆ ಕಂಟ್ರಿಕ್ಲಬ್ ಆವರಣದಲ್ಲಿ ನಡೆಯಲಿದೆ. ಕಿರುಚಿತ್ರಕ್ಕೆ ಅರ್ಜಿ ಸಲ್ಲಿಸಲು ನ.೫ ಕೊನೆಯ ದಿನವಾಗಿದ್ದು, ಆಸಕ್ತರು ಜ್ಯುವೆಲ್ ರಾಕ್ ಹೋಟೆಲ್ ಸಮೀಪ ಇರುವ ಮಾರ್ಡನ್ ಕಣ್ಣಿನ ಆಸ್ಪತ್ರೆ ಎದುರಿನ ವಸಂತ ಹೋಬಳಿದಾರ್ ಅಂಡ್ ಕೋ, ನಂ.೭೭, ೪ನೇ ತಿರುವು ಇಲ್ಲಿ ಪ್ರವೇಶ ಶುಲ್ಕ ೧೫೦ ರೂ. ನೀಡಿ ಅರ್ಜಿ ಪಾವತಿಸಬಹುದು ಎಂದರು.ಕಿರುಚಿತ್ರವೂ ಈ ಹಿಂದೆ ಎಲ್ಲಿಯೂ ಪ್ರಸಾರವಾಗಿರಬಾರದು. ತೀರ್ಪುಗಾರರ ತೀರ್ಮಾನವೇ ಅಂತಿಮ ಎಂದು ರೋಟರಿ ಜಿಲ್ಲಾ ಯೋಜನೆಯ ಜಿಲ್ಲಾಧ್ಯಕ್ಷ ವಸಂತ ಹೋಬಳಿದಾರ್ ಇಂದು ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದ್ದರು…

Recent Comments