Cnewstv / 17.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
R T O ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಸಿಬ್ಬಂದಿಯ ವಿಡಿಯೋ ಬಹಿರಂಗ.. ಎಎಪಿ ಪಕ್ಷದ ವತಿಯಿಂದ ಕಚೇರಿಯ ಮುಂಭಾಗ ಪ್ರತಿಭಟನೆ.
ಶಿವಮೊಗ್ಗ : ಆರ್‌ಟಿಓ ಕಚೇರಿಯಲ್ಲಿ ಎಸ್ ಡಿ ಸಿ ಹುದ್ದೆಯ ಸಿಬ್ಬಂದಿ ಒಬ್ಬರು ಬಹಿರಂಗವಾಗಿ ಲಂಚಕ್ಕೆ ಬೇಡಿಕೆ ಇಟ್ಟ ವಿಡಿಯೋ ಹೊರ ಬಂದಿದ್ದು, ಅದನ್ನ ಖಂಡಿಸಿ ಆಮ್ ಅದ್ಮಿ ಪಕ್ಷದ ವತಿಯಿಂದ ಇಂದು ಆರ್‌ಟಿಓ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಎಸ್.ಡಿ.ಸಿ ಹುದ್ದೆಯಲ್ಲಿರೋ ಸವಿತ ಎನ್ನುವವರು ಬಂದತ್ತ ಜನರಿಂದ ಬಹಿರಂಗವಾಗಿದೆ ಲಚ್ಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಹಿಂದೆ ೨೦೧೯ ರಲ್ಲಿ ಇಂಥಹದ್ದೆ ಭ್ರಷ್ಟಾಚಾರದ ಆರೋಪದ ಮೇಲೆ ಇವರನ್ನು ಅಮಾನತ್ತು ಮಾಡಲಾಗಿದ್ದು, ಇವರನ್ನು ಸಸ್ಪೆಂಡ್ ಮಾಡಿ ನಂತರ ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. ಅದರೆ ಮತ್ತೆ ಯಾವುದೋ ದೊಡ್ಡ ಬೆಂಬಲದಿಂದ ಶಿವಮೊಗ್ಗ RTO ಕಛೇರಿಗೆ ಸೇರಿದ್ದಾರೆ. ಇವರು ಸದ್ಯ ಸ್ಕರ್ಟ್ ಕಾರ್ಡ್ ವಿತರಣೆಯ ಜವಾಬ್ದಾರಿಯನ್ನು ಹೊತ್ತಿದ್ದು, ಇವರಿಗೆ ನೀಡಲಾಗಿರೋ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದೆ. ಜನರಿಂದ ಲಂಚಕ್ಕೆ ಬೇಡಿಕೆಯನ್ನು ಇಡುತ್ತಿರುವುದು ವಿಡಿಯೋ ಮೂಲಕ ಬಹಿರಂಗವಾಗಿದೆ.
ಇವರನ್ನು ಕೂಡಲೆ ಕೆಲಸದಿಂದ ವಜಾಗೊಳಿಸಬೇಕು ಹಾಗೂ ವಿಡಿಯೋದಲ್ಲಿ ಹೇಳಿರುವ ಪ್ರಕಾರ ತಾವು ಪಡೆದುಕೊಳ್ಳುವ ಲಂಚದ ಹಣದಲ್ಲಿ ತಮ್ಮ ಮೇಲಧಿಕಾರಿಗಳಿಗೂ ನೀಡಬೇಕು ಎಂದು ಹೇಳಿದ್ದಾರೆ. ಆ ಲಂಚವನ್ನು ಪಡೆದುಕೊಳ್ಳುವ ಮೇಲಧಿಕಾರಿಗಳು ಯಾರು ಎಂದು ಕೂಡ ತನಖೆ ಮಾಡಬೇಕು. ಇಲ್ಲವಾದಲಿ ಮುಂದಿನ ದಿನಗಳಲ್ಲಿ ಶಿವಮೊಗ್ಗ ಆರ್.ಟಿ.ಓ ಕಛೇರಿಯ ಎದುರು ಆಮರಣ ಉಪವಾಸ ಸತ್ಯಗ್ರಹವನ್ನು ಮಾಡುತ್ತೇವೆ ಎಂದು ಎಚ್ಚರಿಯನ್ನು ನೀಡಿದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399