ಮನುಷ್ಯ ಹಾಗೂ ಪ್ರಾಣಿಗಳು ಚಿತ್ರವಿಚಿತ್ರವಾಗಿ ಹುಟ್ಟಿರುವ ಸುದ್ದಿಗಳನ್ನು ಆಗಾಗ ಕೇಳಿರುತ್ತೇವೆ. ಅಂಥದೊಂದು ಘಟನೆ ಶಿವಮೊಗ್ಗ ತಾಲ್ಲೂಕಿನ ಪುರದಾಳು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಾಬು ಎಂಬುವರಗೆ ಸೇರಿದ ಹಸುವೊಂದು ವಿಚಿತ್ರ ಕರುವಿಗೆ ಜನ್ಮ ನೀಡಿದೆ. ಕರುವಿಗೆ ಎರಡು ಕಣ್ಣು ಗಳು ಒಂದೇ ಕಡೆ ಇವೆ, ಈ ಕರುವಿಗೆ ಮೂಗು ಕೂಡ ಇಲ್ಲ, ಅದ್ದುರಿಂದ ಆ ಕರುವಿನ ನಾಲಿಗೆಯು ಹೊರಬಂದಿದೆ. ಇದರಿಂದ ಈ ಕರು ವಿಕಾರವಾಗಿ ಕಾಣುತ್ತಿದೆ. ಅದೃಷ್ಟವಶಾತ್ ಹಸು ಮತ್ತು ಕರು ಎರಡೂ ಆರೋಗ್ಯವಾಗಿವೆ. ಈ ವಿಚಿತ್ರ ಕರು ಹಾಗೂ ಹಸುವನ್ನು ನೋಡಲು ಸುತ್ತಮುತ್ತಲ ...
Read More »Monthly Archives: November 2019
ISAFF India ಗೆ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಸ್ಟೆಪ್ ಹೊಲ್ಡರ್ಸ್ ನೃತ್ಯ ಸಂಸ್ಥೆಯ 43 ಪ್ರತಿಭೆಗಳು.
ಹೈದರಾಬಾದ್ ನಲ್ಲಿ ನಡೆಯುತ್ತಿರುವ ಇಂಡಿಯನ್ ಸ್ಪೋರ್ಟ್ಸ್ ಏರೋಬಿಕ್ಸ್ ಅಂಡ್ ಫಿಟ್ನೆಸ್ ಫೆಡರೇಶನ್ ಅವರು ನಡೆಸುತ್ತಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸ್ಟೆಪ್ ಹೊಲ್ಡರ್ಸ್ ನೃತ್ಯ ಸಂಸ್ಥೆಯ 43 ಮಕ್ಕಳು ಕರ್ನಾಟಕವನ್ನ ಪ್ರತಿನಿಧಿಸಲಿದ್ದಾರೆ. ನವೆಂಬರ್ 29 ರಿಂದ ಡಿಸೆಂಬರ್ 4ರ ವರೆಗೆ ಹೈದರಾಬಾದ್ ನಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಅಂಡರ್ 10, 12, 14, 19 ವಯೋಮಿತಿಯ ನಾಲ್ಕು ವಿಭಾಗದಲ್ಲಿ ಶಿವಮೊಗ್ಗದ ಸ್ಪರ್ಧಿಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ. ISAFF ನಾ ಕಾರ್ಯದರ್ಶಿ ಶುಭ ಹಾಗೂ ಜಿಲ್ಲಾ ಕಾರ್ಯದರ್ಶಿ ಅರುಣ್ ರಾಜ್ ಶೆಟ್ಟಿ ಸಾರಥ್ಯದಲ್ಲಿ ತಂಡ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ. ...
Read More »ನೆರೆ ಸಂತ್ರಸ್ಥರ ಪರಿಹಾರದಲ್ಲೂ ತಾರತಮ್ಯ – ಹೆಚ್.ಎಸ್.ಸುಂದರೇಶ್
ಶಿವಮೊಗ್ಗ : ರಾಜ್ಯ ಸರ್ಕಾರ ನೆರೆ ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡುತ್ತಿದೆ ಎಂದು ಕಾಂಗ್ರೆಸ್ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ದೂರಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಡಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆ ಪರಿಸ್ಥಿತಿ ಉಂಟಾಗಿ ಕೆಲ ತಿಂಗಳು ಕಳೆದಿವೆ. ನೆರೆಯಿಂದಾಗಿ ಹಲವು ಕುಟುಂಬಗಳು ಮನೆ, ಮಠ ಕಳೆದುಕೊಂಡು ಬೀದಿ ಪಾಲಾಗಿದ್ದರು. ಸಂತ್ರಸ್ಥರಿಗೆ ಪರಿಹಾರ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ, ಈವರೆಗೂ ಸಂತ್ರಸ್ತರಿಗೆ ಸವಲತ್ತು ಕೊಟ್ಟಿಲ್ಲ. ಕೆಲವರಿಗೆ 10, 25, 35 ಸಾವಿರ ಕೊಟ್ಟಿದ್ದಾರೆ. ಸ್ವಪಕ್ಷೀಯರಿಗೆ 35 ಸಾವಿರ ಕೊಟ್ಟಿದ್ದು, ಅವರ ಪಕ್ಷದ ಕಾರ್ಯಕರ್ತರ ಮನೆ ...
Read More »ಸರ್ಕಾರಿ ನೌಕರರೇ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದರೇ?
ಶಿವಮೊಗ್ಗ: ಸರ್ಕಾರಿ ನೌಕರರೇ ಅಂಗಡಿ ಮಾಲೀಕರೊಬ್ಬರ ಮೇಲೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಶಿವಮೊಗ್ಗದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಶಿವಮೊಗ್ಗ ವಿನೋಬನಗರದ ಪೊಲೀಸ್ ಚೌಕಿ ಬಳಿಯ ಮೊಬೈಲ್ ಅಂಗಡಿ ಮಾಲೀಕನ ಮೇಲೆ ಸರ್ಕಾರಿ ನೌಕರರು ಹಲ್ಲೆ ನಡೆಸಿರುವ ಸಿಸಿ ಟಿವಿ ದೃಷ್ಯಾವಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ಕಾರಿ ನೌಕರರು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ ಆತನ ವಿರುದ್ಧ ಸರ್ಕಾರಿ ಕೆಲಸಕ್ಕೆ ಅಡ್ಡಿ ಕೇಸನ್ನೂ ದಾಖಲಿಸಿ ಜೈಲಿಗೂ ಕಳಿಸಿದ್ದಾರೆ. ಶಿವಮೊಗ್ಗದ ವಿನೋಬನಗರದ ಪೊಲೀಸ್ ಚೌಕಿ ಬಳಿಯಿರುವ ಬಟ್ಟೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಇರಬಹುದು ...
Read More »ಸ್ಮಾರ್ಟ್ ಸಿಟಿ ಕಾಮಗಾರಿ ತ್ವರಿತ ಅನುಷ್ಟಾನಕ್ಕೆ ಕ್ರಮ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್
ಶಿವಮೊಗ್ಗ : ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಡಿ 945ಕೋಟಿ ರೂ. ಮೊತ್ತದ ಅಂದಾಜಿನ 50ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದ್ದು, ಅನುಷ್ಟಾನ ಕಾರ್ಯ ಇನ್ನಷ್ಟು ಚುರುಕುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು. ಅವರು ಗುರುವಾರ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಅತಿವೃಷ್ಟಿಯಿಂದಾಗಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಕಳೆದ ಕೆಲವು ತಿಂಗಳಿನಲ್ಲಿ ನಿರೀಕ್ಷಿತ ವೇಗದಲ್ಲಿ ನಡೆದಿರುವುದಿಲ್ಲ. ಇದೀಗ ಅಗತ್ಯ ತಾಂತ್ರಿಕ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಅನುಷ್ಟಾನ ವೇಗ ಪಡೆದುಕೊಂಡಿದೆ. ಕಾಮಗಾರಿ ಅನುಷ್ಟಾನ ಇಲಾಖೆಗಳಾಗಿರುವ ಮೆಸ್ಕಾಂ, ನೀರು ...
Read More »ಲೋಕಕಲ್ಯಾಣಾರ್ಥ ಕೆಎಸ್ ಈಶ್ವರಪ್ಪ ಮನೆಯಲ್ಲಿ ಚಂಡಿಕಾಯಾಗ.
ಲೋಕಕಲ್ಯಾಣಾರ್ಥ ಪ್ರತಿವರ್ಷದಂತೆ ಈ ಬಾರಿಯೂ ಸಹ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಕೆಎಸ್ ಈಶ್ವರಪ್ಪನವರ ಮನೆಯಲ್ಲಿ ಚಂಡಿಕಾಯಾಗವನ್ನು ನಡೆಸಲಾಯಿತು. ಯಾಗಕ್ಕೆ ಮೊದಲು ತಮ್ಮ ಮನೆ ದೇವರಾದ ಮಲ್ಲೇಶ್ವರ ದೇವರನ್ನು ಸಚಿವ ಕೆಎಸ್ ಈಶ್ವರಪ್ಪ ತಲೆಯಮೇಲೆ ಹೊತ್ತು ತಂದರು ನಂತರ ದೇವರುಗಳಾದ ಮಲ್ಲೇಶ್ವರ ಹಾಗೂ ಚೌಡಮ್ಮ ದೇವಿಗೆ ಕುಟುಂಬದವರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಚಂಡಿಕಾಯಾಗ ನೆರವೇರಿಸಲಾಯಿತು.
Read More »ಬಿಜೆಪಿ ಶಿವಮೊಗ್ಗ ನಗರಾಧ್ಯಕ್ಷರಾಗಿ ಎನ್.ಕೆ.ಜಗದೀಶ್ ಆಯ್ಕೆ.
ಶಿವಮೊಗ್ಗ: ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷರಾಗಿ ಎನ್.ಕೆ.ಜಗದೀಶ್ ಆಯ್ಕೆಯಾಗಿದ್ದಾರೆ. ಶಿವಮೊಗ್ಗದ ಶುಭಮಂಗಳ ಕಲ್ಯಾಣಮಂದಿರದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜಗದೀಶ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ನಗರ ಪ್ರಧಾನಕಾರ್ಯದರ್ಶಿಯಾಗಿ ಬಳ್ಳೆಕೆರೆ ಸಂತೋಷ್, ಮೋಹನ್ ರೆಡ್ಡಿ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸುರೇಖಾ ಮುರುಳೀಧರ್, ಪ್ರಧಾನ ಕಾರ್ಯದರ್ಶಿಯಾಗಿ ರಶ್ಮಿ ಶ್ರೀನಿವಾಸ್, ಆರತಿ ಹ.ಮಾ.ಪ್ರಕಾಶ್, ಯುವ ಮೋರ್ಚಾ ಅಧ್ಯಕ್ಷರಾಗಿ ದರ್ಶನ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಪ್ರದೀಪ್ ಹಾಗೂ ಸೆಲ್ವರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Read More »ರಾಮಮಂದಿರ ಜಾಗ ಹಿಂದುಗಳಿಗೆ ಸೇರಿದ್ದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಐತಿಹಾಸಿಕ ಅಯೋದ್ಯ ವಿವಾದ ಕುರಿತು ಸುಪ್ರೀಂಕೋರ್ಟ್ ಅಂತಿಮ ತೀರ್ಪನ್ನು ನೀಡಿದೆ. ವಿವಾದಿತ ಜಮೀನು ಇನ್ನೂ ಮುಂದೆ ರಾಮಲಲ್ಲಾ ಪಾಲಾಗಿದೆ.. ಮಂದಿರ ನಿರ್ಮಾಣದ ಹೊಣೆಯನ್ನು ಸಿಜೆಐ ಸರ್ಕಾರಕ್ಕೆ ನೀಡಿದೆ, ಇನ್ನೂ ರಾಮಮಂದಿರ ನಿರ್ಮಾಣಕ್ಕೆ ಸರ್ಕಾರ ಮೂರು ತಿಂಗಳೊಳಗೆ ಯೋಜನೆಯನ್ನು ರೂಪಿಸಿ, ನಿರ್ವಹಣೆಯನ್ನು ಟ್ರಸ್ಟಿಗೆ ನೀಡಬೇಕು ಎಂದು ಆದೇಶವನ್ನು ನೀಡಿದ್ದು, ಸಂಪೂರ್ಣ 2.77 ಎಕರೆ ಟ್ರಸ್ಟ್ ವಶಕ್ಕೆ ನೀಡಲಾಗಿದೆ..ಸುನ್ನಿ ವಕ್ಫ್ ಬೋರ್ಡಿಗೆ ಬೇರೆಡೆ ಪರ್ಯಾಯ. 5 ಎಕರೆ ಜಮೀನು ನೀಡಲಾಗುವುದು.
Read More »ಅಯೋದ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್.
ಶಿವಮೊಗ್ಗ: ಅಯೋಧ್ಯೆ ಅಂತಿಮ ತೀರ್ಪು ಇಂದು ಹೊರಬರಲಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವುದರಿಂದಾಗಿ ಪೊಲೀಸರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ನಾಳೆ ಈದ್ ಮಿಲಾದ್ ಹಬ್ಬದಆಚರಣೆಗಾಗಿ ಮುಸ್ಲಿಂ ಸಮುದಾಯದವರು ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ವೇದಿಕೆ ಸೇರಿದಂತೆ ಟಿಪ್ಪು ಹಾಗೂ ಹಸಿರು ಬಾವುಟಗಳನ್ನು ಕಟ್ಟಿದ್ದರು. ಅಷ್ಟರಲ್ಲಾಗಲೇ ಸುಪ್ರೀಂ ಕೋರ್ಟ್ ಇಂದೇ ತೀರ್ಪು ನೀಡುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಅಮೀರ್ ಅಹಮದ್ ವೃತ್ತದಲ್ಲಿ ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
Read More »ಶಿವಮೊಗ್ಗಕ್ಕೆ ಆಗಮಿಸಿದ್ದ ನಟ ಶ್ರೀಮುರಳಿ
ಭರಾಟೆ ಚಿತ್ರ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಾಯಕ ನಟ ಶ್ರೀಮುರುಳಿ ಸೇರಿದಂತೆ ಭರಾಟೆ ಚಿತ್ರತಂಡ ಶಿವಮೊಗ್ಗಕ್ಕೆ ಆಗಮಿಸಿ ಅಭಿಮಾನಿಗಳೊಂದಿಗೆ ತಮ್ಮ ಖುಷಿಯನ್ನು ಹಂಚಿಕೊಂಡರು. ಹೆಚ್.ಪಿ.ಸಿ ಚಿತ್ರಮಂದಿರಕ್ಕೆ ಆಗಮಿಸಿದ ನಟ ಶ್ರೀಮುರುಳಿಯನ್ನು ಅಭಿಮಾನಿಗಳು ಡೊಳ್ಳುಕುಣಿತದ ಮೂಲಕ ಭರ್ಜರಿಯಾಗಿ ಸ್ವಾಗತಿಸಿದರು. ಅಭಿಮಾನಿಗಳೊಂದಿಗೆ ಮುರುಳಿ ಸಹ ಕುಣಿದು ಕುಪ್ಪಳಿಸಿದರು ಮತ್ತೊಂದೆಡೆ ನಮ್ಮ ಯುವಜನತೆ ಶ್ರೀಮುರುಳಿ ಜೊತೆಗೆ ಸೆಲ್ಫಿಗಾಗಿ ಮುಗಿಬಿದ್ದಿದ್ದರು..
Read More »
Recent Comments