ಶಿವಮೊಗ್ಗ :ಮಹಾನಗರಪಾಲಿಕೆಯು ಶಿವಮೊಗ್ಗ ಮಹಾನಗರದ ವ್ಯಾಪ್ತಿಯಲ್ಲಿ ಮಾರಾಣಾಂತಿಕ ಕೊರೋನ ವೈರಸ್‍ನ ನಿಯಂತ್ರಣಕ್ಕಾಗಿ ಹಾಗೂ ನಿರಾಶ್ರಿತ ಕಾರ್ಮಿಕರ ಊಟ, ವಸತಿ, ಆರೋಗ್ಯ ಮುಂತಾದ ತುರ್ತು ಸಮಸ್ಯೆಗಳ ಪರಿಹಾರ ಕ್ರಮವಾಗಿ ಪ್ರತಿ 7ವಾರ್ಡುಗಳಿಗೆ ಓರ್ವರಂತೆ ಅಧಿಕಾರಿಗಳನ್ನೊಳಗೊಂಡ ತಂಡವನ್ನು ನಿಯೋಜಿಸಲಾಗಿದ್ದು, ಸಂಕಷ್ಟಕ್ಕೊಳಗಾದವರು ಈ ಕೆಳಕಂಡವರನ್ನು ಸಂಪರ್ಕಿಸಿ ಸಹಾಯ ಪಡೆದುಕೊಳ್ಳುವಂತೆ ಮಹಾನಗರಪಾಲಿಕೆಯ ಆಯುಕ್ತ ಚಿದಾನಂದ ಎಸ್.ವಟಾರೆ ಅವರು ತಿಳಿಸಿದ್ದಾರೆ. ಒಂದರಿಂದ ಏಳನೇ ವಾರ್ಡ್‍ವರೆಗಿನ ಬಾಧಿತರು ಚಾಮರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರ ಮೊ.9448127454, ವಾರ್ಡ್ ಎಂಟರಿಂದ ಹದಿನಾಲ್ಕನೆ ವಾರ್ಡಿನ ಬಾಧಿತರು ಶ್ರೀಧರ್ ಜೆ., ಕಾರ್ಯಪಾಲಕ ಅಭಿಯಂತರರು, ಮೊ.8762288680, ವಾರ್ಡ್ ನಂಬರ್ ...
Read More »Monthly Archives: March 2020
ಲಾಕ್ ಡೌನ್ ಉಲ್ಲಂಘಿಸಿ ಬೀದಿಗಿಳಿದವರ 176 ಬೈಕ್ ಸೀಸ್
ಶಿವಮೊಗ್ಗ: ಕರೋನಾ ಭೀತಿ ಹಿನ್ನೆಲೆಯಲ್ಲಿ ಇಡಿ ಇಂಡಿಯಾದಲ್ಲೇ ಲಾಕ್ ಡೌನ್ ಜಾರಿಯಲ್ಲಿದೆ. ಶಿವಮೊಗ್ಗದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ಬೀದಿಗಿಳಿದವರ ಬೈಕ್ ಗಳನ್ನು ಪೊಲೀಸರು ಸೀಸ್ ಮಾಡಲಾರಂಭಿಸಿದ್ದಾರೆ. ಹೌದು ಲಾಕ್ ಡೌನ್ ಆರಂಭದಲ್ಲಿ ಬೀದಿಗಿಳಿದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿದ್ದರು. ಆದರೂ ಜನ ಬೀದಿಗಿಳಿಯುವುದು ಕಡಿಮೆಯಾಗಿರಲಿಲ್ಲ ಆಗ ಪೊಲೀಸರು ಬೀದಿಗಿಳಿದ ಬೈಕ್ ಸವಾರರ ಮೇಲೆ ಕೇಸು ದಾಖಲಿಸಲು ಆರಂಭಿಸಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ ಅನಾವಶ್ಯಕವಾಗಿ ಬೈಕ್ ನಲ್ಲಿ ಓಡಾಡುವವರ ಮೇಲೆ ಕೇಸ್ ದಾಖಲಿಸುವ ಜೊತೆಗೆ ಬೈಕ್ ಗಳನ್ನು ಸೀಸ್ ಮಾಡಲಾರಂಭಿಸಿದ್ದಾರೆ. ...
Read More »ಕರೋನಾ ತಡೆಗಾಗಿ ಕಾಶಿ ಶ್ರೀಗಳಿಂದ ದೇಣಿಗೆ
ಶಿವಮೊಗ್ಗ: ಕರೋನಾ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ ಹಾಗೂ ಕರೋನಾ ಎಫೆಕ್ಟ್ ನಿಂದ ಸಂತ್ರಸ್ಥರಾದವರಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ಕಾಶಿ ಜಗದ್ಗುರುಗಳಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ದೇಣಿಗೆ ನೀಡಿದರು. ಕಳೆದ 20 ದಿನಗಳಿಂದ ಶಿವಮೊಗ್ಗದಲ್ಲಿ ವಾಸ್ತವ್ಯ ಹೂಡಿರುವ ಕಾಶಿ ಶ್ರೀಗಳು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ 2 ಲಕ್ಷ ರೂಪಾಯಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂಪಾಯಿ ದೇಣಿಗೆಯ ಚೆಕ್ಕನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ನೀಡಿದರು. ಶ್ರೀಗಳು ವಾಸ್ತವ್ಯ ಹೂಡಿರುವ ಶಿವಮೊಗ್ಗ ಹೊರವಲಯದ ಮತ್ತೋಡು ...
Read More »ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದ ಕಾಮತ್ ಕಾಂಡಿಮೆಂಟ್ಸ್ ಬೆಂಕಿಗಾಹುತಿ
ಶಿವಮೊಗ್ಗ : ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಕಾಮತ್ ಮಂಡಕ್ಕಿ ಅಂಗಡಿಯು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ. ಇಂದು ಬೆಳಗಿನ ಜಾವ ಸುಮಾರು 3.30 ಕ್ಕೆ ಘಟನೆ ನಡೆದ್ದಿದ್ದು, ಅಂಗಡಿ ಮತ್ತು ಮನೆ ಒಂದೇ ಕಡೆ ಇರುವುದರಿಂದ ಸುಮಾರು ಏಳರಿಂದ ಹತ್ತು ಲಕ್ಷ ರೂಪಾಯಿ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
Read More »ಬಡವರಿಗೆ ಕೈ ತುತ್ತು ನೀಡಲು ಮುಂದಾದ ಶಿವಮೊಗ್ಗ ಕಾಂಗ್ರೆಸ್
ಶಿವಮೊಗ್ಗ : ಮಹಾಮಾರಿ ಕೊರೊನಾ ವೈರಸ್ ದಿನೇದಿನೇ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿವ ಸರ್ಕಾರ ಇಡೀ ದೇಶವನ್ನೇ ಲಕ್ ಡೌನ್ ಮಾಡಿದೆ. ಆದರೆ ಅದು ಅಂದೇ ದುಡಿದು ಅಂದೇ ತಿನ್ನುವಂತಹ ಬಡ ವರ್ಗದ ಜನತೆಗೆ ಕೆಲಸವಿಲ್ಲದಂತಾಗಿದೆ ಅಂಥವರು ಜೀವನ ನಡೆಸುವುದೇ ಕಷ್ಟವಾಗಿದೆ. ಆ ರೀತಿಯಾ ಬಡವರ್ಗದ ಜನರಿಗೆ, ನಿರ್ಗತಿಕರಿಗೆ, ಭಿಕ್ಷುಕರಿಗೆ ಶಿವಮೊಗ್ಗ ಕಾಂಗ್ರೆಸ್ ವತಿಯಿಂದ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾದ ದೇವೇಂದ್ರಪ್ಪ ಕೆ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಆರ್ ಕಿರಣ್, ಎಂ ಪ್ರವೀಣ್ ಕುಮಾರ್ , ...
Read More »ಕಾನೂನು ಉಲ್ಲಂಘಿಸಿ ರಸ್ತೆಗೆ ಬಂದರೆ ಇನ್ಮುಂದೆ ಲಾಠಿ ಏಟಿಲ್ಲ ಬರೀ ಕೇಸ್
ಶಿವಮೊಗ್ಗ: ಕರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಇಡೀ ಇಂಡಿಯಾ ಲಾಕ್ ಡೌನ್ ಆಗಿದೆ. ಜೊತೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಇಂಥ ಸಂದರ್ಭದಲ್ಲಿ ಇದುವರೆಗೆ ಯಾರಾದರೂ ಕಾನೂನು ಉಲ್ಲಂಘಿಸಿ ರಸ್ತೆಗೆ ಬಂದರೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದರು. ಆದರೆ ಇನ್ಮುಂದೆ ಪೊಲೀಸರು ಲಾಠಿ ರುಚಿ ತೋರಿಸುವುದಿಲ್ಲ. ಬದಲಿಗೆ ಅಂಥವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಆಗ ಅನಿವಾರ್ಯವಾಗಿ ಜೈಲು ಸೇರಬೇಕಾಗುತ್ತದೆ. ಹೌದು ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಕಾನೂನು ಉಲ್ಲಂಘಿಸಿ ಸಕಾರಣವಿಲ್ಲದೆ ರಸ್ತೆಗೆ ಗುಂಪಾಗಿ ಬರುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲಾರಂಭಿಸಿದ್ದಾರೆ. ಶಿವಮೊಗ್ಗ ಗಾಂದಿ ಬಜಾರ್ ನಲ್ಲಿ ಕಾನೂನು ಉಲ್ಲಂಘಿಸಿ ...
Read More »ತಮ್ಮ ಒಂದು ತಿಂಗಳ ಸಹಾಯಧನವನ್ನು ಕರೋಮಾ ನಿಯಂತ್ರಣಕ್ಕಾಗಿ ಸರ್ಕಾರಕ್ಕೆ ನೀಡಿದ ಮಹಾನಗರ ಪಾಲಿಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು.
ಶಿವಮೊಗ್ಗ: ವಿಶ್ವದಾದ್ಯಂತ ತಲ್ಲಣ ಮೂಡಿಸಿದ ಕರೋನಾ ವೈರಸ್ ತಡೆಗಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ತಮ್ಮ ಒಂದು ತಿಂಗಳ ಗೌರವ ಧನವನ್ನು ಸರ್ಕಾರಕ್ಕೆ ನೀಡಿದ್ದಾರೆ. ಹೌದು ಇಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನ ಪಾಲಿಕೆಯ 10 ಸದಸ್ಯರು ತಲಾ ತಮ್ಮ ಒಂದು ತಿಂಗಳ ಗೌರವ ಧನ 6000 ರೂಪಾಯಿಯನ್ನು ಅಂದರೆ ಒಟ್ಟು 60 ಸಾವಿರ ರೂಪಾಯಿಯನ್ನು ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸುವ ಮೂಲಕ ಮಾನವೀಯತೆ ಮೆರೆದರು. ಈ ಗೌರವ ಧನವನ್ನು ಆಹಾರ ಪದಾರ್ಥಗಳ ಸರಬರಾಜಿಗೆ ...
Read More »ಮಹಾನಗರ ಪಾಲಿಕೆ ವತಿಯಿಂದ ಮನೆ ಬಾಗಿಲಿಗೆ ಫುಡ್ ಸಪ್ಲೈ
ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಟೇಲ್ ವ್ಯವಸ್ಥೆ ಅಸ್ತವ್ಯಸ್ತವಾಗಿರುವ ಹಿನ್ನೆಲೆಯಲ್ಲಿ, ಪಾಲಿಕೆ ವತಿಯಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಮಾ.27ರಿಂದ ಪ್ಯಾಕ್ಡ್ ಆಹಾರ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರು ದೂರವಾಣಿ ಮೂಲಕ ಆರ್ಡರ್ ಮಾಡಿದರೆ ಒಂದು ಗಂಟೆಯ ಒಳಗಾಗಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ ಮನೆ ಬಾಗಿಲಿಗೆ ಬರಲಿದೆ. ಮೆನು ಇಂತಿದೆ. ಟಿಫಿನ್: 2ಇಡ್ಲಿ-1 ವಡೆ ರೂ.40/ ಉಪ್ಪಿಟ್ಟು-ರೂ.30/ ಸೆಟ್‍ದೋಸೆ- ರೂ.50/ ರೈಸ್‍ಬಾತ್ ವಿತ್ ಚಟ್ನಿ ರೂ. 50/ ಮಧ್ಯಾಹ್ನದ ಊಟ: ಚಪಾತಿ, ಪಲ್ಯ, ...
Read More »ಪ್ರಯಾಣಿಕರ ವಾಹನ ಸಂಚಾರ ಸಂಪೂರ್ಣ ಸ್ಥಗಿತ, ವಿದೇಶದಿಂದ ಬಂದವರ ಮೇಲೆ ತ್ರೀವ ನಿಗಾ.
ಜಿಲ್ಲೆಯಲ್ಲಿ ಪ್ರಯಾಣಿಕರ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತೊಳಿಸಲಾಗಿದೆ. ಗೂಡ್ಸ್ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಸಾರ್ವಜನಿಕರು ಅಗತ್ಯ ಸಂದರ್ಭಗಳಲ್ಲಿ ಮಾತ್ರ ತಮ್ಮ ವಾಹನಗಳನ್ನು ಬಳಸಿಕೊಳ್ಳಬಹುದಾಗಿದೆ ಇನ್ನೂ ವಿದೇಶದಿಂದ ಬಂದವರ ಮೇಲೆ ನಿರಂತರ ನಿಗಾ ಇರಿಸಲಾಗಿದೆ. ಅವರು ಮನೆಯಿಂದ ಯಾವುದೇ ಕಾರಣಕ್ಕೂ ಹೊರಗೆ ಬಾರದಂತೆ ಸೂಚನೆಗಳನ್ನು ನೀಡಲಾಗಿದೆ. ಅಂತವರ ಮನೆಗಳನ್ನು ಗುರುತಿಸಲು ಪೋಸ್ಟರ್‍ಗಳನ್ನು ಹಚ್ಚಲು ಸೂಚಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ನಿಗಾ ಇರಿಸಿರುವ ಬಗ್ಗೆ ಪರಿಶೀಲಿಸಲು ಸಮಿತಿ ರಚಿಸಲಾಗಿದೆ. ಅಗತ್ಯ ಬಿದ್ದರೆ ನಿಗಾ ವಹಿಸಲು ಸಿಬ್ಬಂದಿ ನೇಮಕ ಮಾಡಲು ಸೂಚಿಸಲಾಗಿದೆ. ಹಾಗೂ ಬೆಂಗಳೂರಿನಿಂದ ನಿನ್ನೆ ...
Read More »ಕರೋನಾ ವೈರಸ್ ತುರ್ತುಪರಿಸ್ಥಿತಿಯನ್ನು ಎದುರಿಸಲು ಮೆಗ್ಗಾನ್ ಆಸ್ಪತ್ರೆ ಸಜ್ಜು – ಜಿಲ್ಲಾಧಿಕಾರಿ
ಮೆಗ್ಗಾನ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕರೋನಾ ವೈರಸ್ ಚಿಕಿತ್ಸೆಗಾಗಿ ಮೀಸಲಾಗಿಡಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಯಾವುದೇ ರೀತಿಯ ತುರ್ತುಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಪ್ರಸ್ತುತ ನಗರದಲ್ಲಿ 45 ವೆಂಟಿಲೇಟರ್‍ಗಳು ಲಭ್ಯವಿದ್ದು, ಇನ್ನೂ 15 ವೆಂಟಿಲೇಟರ್‍ಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ವೈದ್ಯಕೀಯ ಸಿಬ್ಬಂದಿಗಳಿಗೆ ಹಾಗೂ ರೋಗಿಗಳಿಗೆ ಅಗತ್ಯವಿರುವಷ್ಟು ಮುಖಗವಸು, ಕೈಗವಸು, ಸ್ಯಾನಿಟೈಸರ್‍ಗಳು ಲಭ್ಯವಿದ್ದು, ಇನ್ನಷ್ಟು ದಾಸ್ತಾನು ಮಾಡಲಾಗುವುದು. ಅಗತ್ಯವಿರುವ ಔಷಧಿ ಸಾಮಾಗ್ರಿಗಳನ್ನು ಸಂಗ್ರಹಿಸಿಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಳ್ಳುವ ಬಗ್ಗೆ ಈಗಾಗಲೇ ಸೂಚನೆ ನೀಡಲಾಗಿದೆ. ಹೊರ ರೋಗಿ ಸೇವೆ ಸ್ಥಗಿತ ಬೇಡ: ಖಾಸಗಿ ಆಸ್ಪತ್ರೆಗಳಲ್ಲಿ ...
Read More »
Recent Comments