Cnewstv / 25.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗ ಏರ್ಪೋರ್ಟ್ : ಭೂಮಿ ತ್ಯಾಗ ಮಾಡಿದ್ದ ರೈತರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ.
ಶಿವಮೊಗ್ಗ : ಶಿವಮೊಗ್ಗ ಜನರ ಬಹುದಿನಗಳ ಕನಸು ಈ ಏರ್ಪೋರ್ಟ್. ಈಗಾಗಲೇ ಏರ್ಪೋರ್ಟ್ ನ ಕಾಮಗಾರಿಗಳು ಅಂತಿಮ ಹಂತಕ್ಕೆ ಬಂದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಉದ್ಘಾಟನೆ ಆಗಲಿದೆ ಆದರೆ ಈ ಏರ್ಪೋರ್ಟಿಗಾಗಿ ಭೂಮಿ ತ್ಯಾಗ ಮಾಡಿದ್ದಾರೆ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.
ಹೌದು ಶಿವಮೊಗ್ಗದ ಸೋಗಾನೆ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಫೆಬ್ರವರಿ 27ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಯಾಗಲಿದೆ. ಸುಮಾರು 400 ಕೋಟಿ ವೆಚ್ಚದಲ್ಲಿ ಈ ಏರ್ಪೋರ್ಟ್ಅನ್ನು ನಿರ್ಮಾಣ ಮಾಡಲಾಗುತ್ತಿದ್ದು ಇದಕ್ಕಾಗಿ 670 ಎಕರೆ ಭೂಮಿಯನ್ನ ಸುಮಾರು 305 ರೈತರಿಂದ ವಶಪಡಿಸಿಕೊಳ್ಳಲಾಗಿದೆ.
ರೈತರಿಂದ ಭೂಮಿಯನ್ನು ಪಡೆಯುವಾಗ ಸರ್ಕಾರ ನಿವೇಶನವನ್ನು ನೀಡುವುದಾಗಿ ಭರವಸೆಯನ್ನ ನೀಡಿತ್ತು. ಆದರೆ ಭರವಸೆ ನೀಡಿ 17 ವರ್ಷ ಕಳೆದರೂ ಕೂಡ ನಿವೇಶನ ಮಾತ್ರ ಮರೀಚಿಕೆಯಾಗಿದೆ. ಭೂಮಿ ಸಂತ್ರಸ್ತರಿಗೆ ನಿವೇಶನ ನೀಡುವಲ್ಲಿ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ನಿರ್ಲಕ್ಷ ತೋರುತ್ತಿದೆ.ಇನ್ನು ಈ ಭಾಗದ ಜನರಿಗೆ ಉದ್ಯೋಗವನ್ನು ನೀಡುವುದಾಗಿ ಭರವಸೆಯನ್ನು ಕೂಡ ನೀಡಿದ್ದರು. ಆ ಭರವಸೆಯನ್ನು ಕೂಡ ಸರ್ಕಾರ ಮರೆತಿದೆ ಎಂದು ಭೂಮಿ ನೀಡಿದ ರೈತರು ಆರೋಪಿಸಿದ್ದಾರೆ.
ಇದನ್ನು ಒದಿ : https://cnewstv.in/?p=11943
Recent Comments