Breaking News

Monthly Archives: October 2018

ಕಣ್ಣೀರು ಒರೆಸಬೇಕಾದ ಸಿಎಂ ಕಣ್ಣೀರು ಸುರಿಸುತ್ತಿದ್ದಾರೆ

 ರಾಜ್ಯದ ಜನರ ಹಾಗೂ ಬಡವರ ಕಣ್ಣೀರು ಒರೆಸಬೇಕಾದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಾವೇ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತೀ ಶೆಟ್ಟಿ ಲೇವಡಿ ಮಾಡಿದರು.  ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಣ್ಣೀರು ಸುರಿಸುವ ಮೂಲಕ ಜನರಲ್ಲಿ ಸಿಂಪತಿಯನ್ನು ಮೂಡಿಸುವಂತಹ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಾದ ಇವರು, ಬಡವರ, ಶೋಷಿತರ ಹಾಗೂ ಸಂಕಷ್ಟದಲ್ಲಿರುವ ಜನರ ಕಣ್ಣೀರನ್ನು ಒರೆಸಬೇಕು. ಆ ಕೆಲಸ ಇವರಿಂದ ಆಗಬೇಕೆಂದು ಆಗ್ರಹಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ...

Read More »

“ಐಕ್ಯತಾ ಪ್ರತಿಮೆ ವಿಶೇಷತೆಗಳು”

“ಐಕ್ಯತಾ ಪ್ರತಿಮೆ ವಿಶೇಷತೆಗಳು ಭಾರತದ ಉಕ್ಕಿನ ಮನುಷ್ಯ ಎಂದೇ ಬಿಂಬಿತವಾಗಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ರ 143 ನೇ ಜನ್ಮದಿನದಂದು ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ, “ಐಕ್ಯತಾ ಪ್ರತಿಮೆ” ಯನ್ನು ಇಂದು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದರು. ಸ್ವಾತಂತ್ರ್ಯಾನಂತರ ಭಾರತದಲ್ಲಿ ಹರಿದುಹಂಚಿ ಹೋಗಿದ್ದ ರಾಜಮನೆತನಗಳನ್ನು ಒಗ್ಗೂಡಿಸಿ, ಅವರನ್ನೆಲ್ಲ ಭಾರತ ಎಂಬ ಒಂದೇ ಸೂರಿನಡಿ ತಂದ ಕೀರ್ತಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೆ ಸಲ್ಲುತ್ತದೆ. ಸರ್ದಾರ್ ಸರೋವರ ತಟದಲ್ಲಿ ನರ್ಮದಾ ಡ್ಯಾಂ ಕಡೆ ಮುಖ ಮಾಡಿ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಇದು ವಿಶ್ವದಲ್ಲೇ ಅತಿ ...

Read More »

ಐಕ್ಯತಾ ಪ್ರತಿಮೆ ಅನಾವರಣಕ್ಕೆ ಕ್ಷಣ ಗಣನೆ

ಭಾರತದ ಉಕ್ಕಿನ ಮನುಷ್ಯ ಎಂದೇ ಬಿಂಬಿತವಾಗಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಇಂದು 11.30 ಕ್ಕೆ ” ಐಕ್ಯತಾ ಪ್ರತಿಮೆ” ಪ್ರತಿಮೆ ಇಂದು ಅನಾವರಣವಾಗಲಿದೆ.. ಸರ್ದಾರ್ ಸರೋವರ ತಟದಲ್ಲಿ ನರ್ಮದಾ ಡ್ಯಾಂ ಕಡೆ ಮುಖ ಮಾಡಿ ನಿರ್ಮಿತವಾಗಿರುವ ಈ ಪ್ರತಿಮೆ ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ.ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿಗಿಂತ ನಾಲ್ಕು ಪಟ್ಟು ಎತ್ತರ ಅಂದರೆ ಸುಮಾರು 600 ಅಡಿ ಇರುವ ಸರ್ದಾರ್ ಪಟೇಲರ ಉಕ್ಕಿನ ಪ್ರತಿಮೆ ಈಗ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. ಐಕ್ಯತಾ ...

Read More »

ರಂಗೇರಿದ ಶಿವಮೊಗ್ಗ ಉಪ ಚುನಾವಣಾ ಕಣ- ಗೆಲ್ಲುವು ಯಾರಿಗೆ?

ಶಿವಮೊಗ್ಗದಲ್ಲಿಉಪ  ಚುನಾವಣೆಯ ರಂಗು ಕಾವೇರುತ್ತಿದೆ. ಈ ಬಾರಿಯ ಉಪ ಚುನಾವಣೆ ಪತ್ರಿಷ್ಠೆಯಾಗಿ ಎದುರಾಗಿದೆ. ಅದರಲ್ಲಿಯೂ ಪ್ರಮುಖವಾಗಿ ಮೂರು ಮಾಜಿ ಮುಖ್ಯಮಂತ್ರಿಗಳ ಪುತ್ರರ ನಡುವೆ ಹಣಾಹಣಿ ಜೋರಾಗಿದೆ. ಬಿಜೆಪಿ ಪಕ್ಷದಿಂದ ಬಿಎಸ್ ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಸಮ್ಮಿಶ್ರ ಅಭ್ಯರ್ಥಿಯಾಗಿ ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ ಜೆಡಿಯುನಿಂದ ಜೆ.ಎಚ್.ಪಟೇಲರ ಪುತ್ರ ಮಹಿಮಾ ಪಟೇಲ್ ಸ್ಪರ್ಧಿಸುತ್ತಿದ್ದಾರೆ. ಎಲ್ಲ ಪಕ್ಷದ ನಾಯಕರುಗಳು ತಮ್ಮ ಪಕ್ಷದ ಅಭ್ಯರ್ಥಿಯ ಪರ ಬಿರುಸಿನ ಪ್ರಚಾರವನ್ನು ಮಾಡುತ್ತಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಶಿವಮೊಗ್ಗ ಜಿಲ್ಲೆ ಬಿಜೆಪಿಯ ...

Read More »

ಯಡಿಯೂರಪ್ಪನವರೇ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಿ – ಹೆಚ್.ಡಿ.ಕೆ.

ಶಿವಮೊಗ್ಗ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹೆಚ್.ಡಿ.ಕೆ.ಯಡಿಯೂರಪ್ಪನವರು ಮಾತನಾಡುವ ವೇಳೆ ನಾಲಿಗೆ ಮೇಲೆ ಹಿಡಿತ ಇರಬೇಕು ಎಂದರು. ಯಡಿಯೂರಪ್ಪ ಎಲ್ಲೆಲ್ಲಿ ಏನೇನು ಮಾಡಿದ್ದಿರಿ ಎಂಬುದನ್ನು ಶಿಕಾರಿಪುರದ ಹುಚ್ಚುರಾಯ ಸ್ವಾಮಿ ದೇವಾಲಯದಲ್ಲಿ ಕುಳಿತು ಎಲ್ಲವನ್ನು ನೆನಪಿಸಿಕೊಳ್ಳಿ. ನಾನು ಅಧಿಕಾರಿಗಳನ್ನು ಜಾತಿ ಹೆಸರಿನಲ್ಲಿ ಗುರುತಿಸಿಲ್ಲ. ಬದಲಾಗಿ ಅವರ ಮೆರಿಟ್ ಆಧಾರದಲ್ಲಿ ವರ್ಗಾವಣೆ ಮಾಡಿದ್ದೇನೆ. ವರ್ಗಾವಣೆ ಬಗ್ಗೆ ಮಾತನಾಡುವ ಯಡಿಯೂರಪ್ಪ ನೀವು ಮೊದಲು ದಾಖಲೆ ಪರಿಶೀಲಿಸಿ ಎಂದರು. ಇನ್ನೂ ನಿಮ್ಮ ರೀತಿಯಲ್ಲಿ ನಾನು ಅಧಿಕಾರ ನಡೆಸಿಲ್ಲ. ನಾನು ಗ್ರಾಮ ವಾಸ್ತವ್ಯ ಮಾಡುತ್ತಿದ್ದರೆ, ನೀವು ಬೆಂಗಳೂರಲ್ಲಿ ಕುಳಿತು ಏನು ...

Read More »

ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ MeToo ಆರೋಪ ಬರಬಹುದು – ಕುಮಾರ್ ಬಂಗಾರಪ್ಪ

ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಒಂದು ಪಕ್ಷದವರ ವಿರುದ್ಧ ಮತ್ತೊಂದು ಪಕ್ಷದವರು ಕೆಸರೆರಚಾಟ ಮಾಡುವುದು ಸಾಮಾನ್ಯವಾಗಿತ್ತು.ಎಷ್ಟೇ ರಾಜಕೀಯ ವೈಷಮ್ಯವಿದ್ದರೂ ಯಾವೊಬ್ಬ ನಾಯಕರು ಸಹ ವೈಯಕ್ತಿಕ ವಿಚಾರವನ್ನು ಇದುವರೆಗೂ ತೆಗೆದಿರಲಿಲ್ಲ. ಅದರೆ ಸೊರಬದಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಬಂಗಾರಪ್ಪ ಕುಟುಂಬದ ವೈಯಕ್ತಿಕ ವಿಚಾರ ಮಾತನಾಡಿರುವುದನ್ನು ಕುಮಾರ ಕುಮಾರ ಗಂಭೀರವಾಗಿ ತೆಗೆದುಕೊಂಡಿದ್ದಾರೆ.ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಆಧಾರವಿಲ್ಲದೆ ನಿಂದನೆಗೆ ಮುಂದಾಗಿದ್ದಾರೆ.. ಇತ್ತೀಚಿಗೆ ಬಹಳ ಸುದ್ದಿಯಾಗಿರುವ MeToo ಅಭಿಯಾನದ ಉದಾಹರಣೆ ತೆಗೆದುಕೊಂಡಿರೋ ಕುಮಾರ್ ಬಂಗಾರಪ್ಪ, ಹೆಚ್​.ಡಿ ಕುಮಾರಸ್ವಾಮಿ ವಿರುದ್ಧಾನೂ MeToo ಆರೋಪ ಕೇಳಿ ಬರಬಹುದು ಎಂದು ಗಂಭೀರ ಆರೋಪ ...

Read More »

ಅಭ್ಯರ್ಥಿಯ ಪರ ಪ್ರಚಾರ ಕಾರ್ಯದಲ್ಲಿ ನಟಿ ಪೂಜಾ ಗಾಂಧಿ

ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿ ಇಂದು ಚಿತ್ರನಟಿ ಪೂಜಾ ಗಾಂಧಿ ತಮ್ಮ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಪಕ್ಷದ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಪರ ಪ್ರಚಾರವನ್ನು ನಡೆಸಿದರು https://youtu.be/RCuFcOvJTMc    

Read More »

ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬಹಿರಂಗ ಪತ್ರ – ಕೆ.ಎಸ್.ಈಶ್ವರಪ್ಪ

  ಶಿವಮೊಗ್ಗ ನಗರಕ್ಕೆ ಆಗಮಿಸುವಂತಹ ಮುಖ್ಯಮಂತ್ರಿಗಳಿಗೆ ವೈಯಕ್ತಿಕವಾಗಿ ಹಾಗೂ ಶಿವಮೊಗ್ಗ ಜನತೆಯ ಪರವಾಗಿ ಸ್ವಾಗತವನ್ನು ಕೋರಿದ ಈಶ್ವರಪ್ಪನವರು, ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಶಿವಮೊಗ್ಗದಿಂದ ಹೋಗುವುದರೊಳಗೆ ಉತ್ತರ ನೀಡಲಿ ಎಂದರು. *ರಾಜ್ಯಾದ್ಯಂತ ಪ್ರಮುಖ ನಗರಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ತಿಂಗಳುಗಳೇ ಕಳೆದರೂ ಇನ್ನೂ ಮೇಯರ್ ಉಪ ಮೇಯರ್ ಚುನಾವಣೆ ನಡೆದಿಲ್ಲ ಆದಷ್ಟು ಬೇಗ ಮೇಯರ್ ಉಪಮೇಯರ್ ಚುನಾವಣೆಯನ್ನು ನಡೆಸುವಂತೆ ಕೋರಲಾಗಿದೆ. *ವಿವಿಧ ಕಾರ್ಮಿಕರಿಗೆ ವಸತಿ ಕಲ್ಪಿಸಲು ಆದಾಯ ಮಿತಿ ಷರತ್ತನ್ನು ಸಡಿಲಗೊಳಿಸಿ, ಇಲ್ಲದಿದ್ದರೆ ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ನಿಗದಿಸಲಾಗಿರುವ ವಾರ್ಷಿಕ ಆದಾಯ ...

Read More »

ಬಿಜೆಪಿಯವರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ.

ಬಿಜೆಪಿಯವರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಯಡಿಯೂರಪ್ಪ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ ಸಿಎಂ ಆದ ಮೇಲೆ ಯಡಿಯೂರಪ್ಪ ಮಾತು ತಪ್ಪಿದ್ದಾರೆ. ಹೀಗಾಗಿ ಬಿಜೆಪಿಯವರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ. ಮಾನ್ಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೇಳಿದಂತೆ ನಡೆದಿದೆ. ಅದೇ ರೀತಿ ಹಿಂದಿನ ಯುಪಿಎ ಸರ್ಕಾರ ರೈತರ 74 ಸಾವಿರ ಕೋಟಿ ಹಣ, ಸಾಲ ಮನ್ನಾ ಮಾಡಿದೆ. ಹಾಗಾಗಿ ನಮಗೆ ಜನರ ಬಳಿ ಮತ ಕೇಳುವ ಹಕ್ಕಿದೆ. ಯುವಕರು ಈ ಬಾರಿ ಚುನಾವಣೆಯಲ್ಲಿ ಕೇಂದ್ರದ ವಿರುದ್ಧ ...

Read More »