Cnewstv.in / 27.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಹೊಸನಗರ: ತಾಲೂಕಿನ ಅತ್ಯಂತ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹೊಸನಗರ ತಾಲೂಕು ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಕೆಸರೆ ಗ್ರಾಮಕ್ಕೆ ಹೊಂದಿಕೊಂಡಿರುವ ಊರಿನಲ್ಲಿ ಸರಿಯಾದ ರಸ್ತೆ ಮಾರ್ಗಕ್ಕಾಗಿ ದಿನ ನಿತ್ಯ ಕಿರಿ ಕಿರಿ ಅನುಭವಿಸುವ ಗೋಳಾಟವನ್ನ ಕೇಳೋರಿಲ್ಲದೆ ಗ್ರಾಮಸ್ಥರು ಹೈರಾಣಗಿದ್ದಾರೆ.! ಕಳೆದ ನಾಲ್ಕು- ಐದು ವರ್ಷದಿಂದ ಬಾಣಿಗ ದಿಂದ ಹುಣಸೆಕೊಪ್ಪ ನಿಂಬೇಸರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗ ಸಂಪೂರ್ಣ ಹಾಳಾಗಿದ್ದು, ಕಿರು ಸೇತುವೆ ಸಹ ದುರಸ್ತಿ ಇಲ್ಲದೆ ...
Read More »Tag Archives: Hosanagara
ನೇಣು ಹಾಕಿಕೊಂಡು ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ರೋಗಿ.
Cnewstv.in / 09.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಹೊಸನಗರ : ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದ ವ್ಯಕ್ತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸನಗರ ತಾಲೂಕಿನಲ್ಲಿ ನಡೆದಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಜಗದೀಶ್ (51) ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಾತ್ರಿ ಎಲ್ಲಾ ಮಲಗಿದ್ದಾಗ ಆಸ್ಪತ್ರೆಯ ಮೆಟ್ಟಿಲುಗಳಿಗೆ ಅಳವಡಿಸಿದ್ದ ಸರಳುಗಳಿಗೆ ಲುಂಗಿ ಬಳಸಿ ನೇಣು ಹಾಕಿಕೊಂಡಿದ್ದಾರೆ. ಈ ಸಂಬಂಧ ಹೊಸನಗರ ಠಾಣೆಯಲ್ಲಿ ಪ್ರಕರಣದಲ್ಲಿ ದಾಖಲಾಗಿದೆ. ಇದನ್ನು ಒದಿ : https://cnewstv.in/?p=5363 ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Read More »ದಂಡ ಹಾಕಿದ್ದಕ್ಕೆ ಪೊಲೀಸರ ಬೈಕನ್ನೇ ಕದ್ದ ಖದೀಮ.
ಶಿವಮೊಗ್ಗ: ಮಾಸ್ಕ ಹಾಕದೆ ಓಡಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಹೊಸನಗರ ಠಾಣೆ ಪೊಲೀಸರು ದಂಡ ವಿಧಿಸಿದ್ದರು. ಆದರೆ ದಂಡ ಕಟ್ಟಿದ ಸಿಟ್ಟಿಗೆ ಆತ ಪೊಲೀಸರ ಬೈಕನ್ನೇ ಕದ್ದು ಪರಾರಿಯಾಗಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹೌದು ಚೇತನ್ ಎಂಬಾತ ಮಾಸ್ಕ್ ಹಾಕದೆ ಓಡಾಡುತ್ತಿದ್ದಾಗ ಪೊಲೀಸರು ಆತನನ್ನು ಹೊಸನಗರ ಪೊಲೀಸ್ ಠಾಣೆಗೆ ಕರೆತಂದು ದಂಡ ವಿಧಿಸಿದ್ದಾರೆ. ದಂಡ ಪಾವತಿಸಿ ಹೊರಬಂದ ಚೇತನ್ ಪೊಲೀಸ್ ಠಾಣೆ ಪಕ್ಕದಲ್ಲೇ ನಿಲ್ಲಿಸಿದ್ದ ಪೊಲೀಸ್ ಪೇದೆ ರಾಘವೇಂದ್ರ ಅವರ ಬೈಕ್ ಕದ್ದು ಪರಾರಿಯಾಗಿದ್ದಾನೆ. ಈ ದೃಷ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಸಂಬಂಧ ...
Read More »ತೀರ್ಥಹಳ್ಳಿ ನ್ಯಾಯಾಲಯಕ್ಕೆ ನಕ್ಸಲ್ ಶೋಭಾಳನ್ನು ಹಾಜರುಪಡಿಸಿದ ಪೊಲೀಸರು
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಬರ್ಕಣ ಫಾಲ್ಸ್ ಬಳಿ ನಡೆದ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸರು ಇಂದು ನಕ್ಸಲ್ ಶೋಭಾಳನ್ನು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 2012ರಲ್ಲಿ ನಡೆದ ಫೈರಿಂಗ್ ನ ನಕ್ಸಲ್ ತಂಡಲ್ಲಿ ಶೋಭಾ ಸಹ ಇದ್ದಳು ಎನ್ನಲಾಗಿದ್ದು, ಈಕೆಯ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಕಳೆದ 11 ವರ್ಷಗಳಿಂದ ಸಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಶೋಭಾ ವಿರುದ್ಧ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 6 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮೂಲತಹ ಹೊಸನಗರ ತಾಲೂಕು ಮೇಲುಸಂಕದವಳಾದ ಶೋಭಾ 2012ರಿಂದಲೂ ತಲೆಮರೆಸಿಕೊಂಡಿದ್ದಳು. ...
Read More »ಒಂದೇ ಮರಕ್ಕೆ ನೇಣು ಹಾಕಿಕೊಂಡು ಸ್ನೇಹಿತರು.
ಮಒಂದೇ ಮರಕ್ಕೆ ನೇಣು ಹಾಕಿಕೊಂಡು ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟಕ ಹೊಸನಗರದ ಮಾರಿಗುಡ್ಡದಲ್ಲಿ ನಡೆದಿದ್ದೆ..ಶ್ರೀಕಾಂತ್(29) ಮತ್ತು ಪ್ರಕಾಶ (32) ಮೃತ ಸ್ನೇಹಿತರು .ಸ್ಮಶಾನದಲ್ಲಿಯೇ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಇಬ್ಬರು ಹೊಸನಗರದಲ್ಲಿ ಕೂಲಿಕಾರ್ಮಿಕರಾಗಿದ್ದ, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Read More »
Recent Comments