Cnewstv | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫುಟ್ ಪಾತ್ / ರಸ್ತೆ / ಸಾರ್ವಜನಿಕ ಸ್ಥಳಗಳಲ್ಲಿರುವ ಅನುಪಯುಕ್ತ / ನಿಷ್ಕ್ರಿಯ / ಬೀದಿ ಬದಿ ಗಾಡಿಗಳು, ಮಾರಾಟ ಪರಿಕರಗಳನ್ನು ವಶಪಡಿಸಿಕೊಳ್ಳುವ ಬಗ್ಗೆ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ರಸ್ತೆ, ಫುಟ್ ಪಾತ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರದ ಕೈಗಾಡಿಗಳು ನಿಷ್ಕ್ರಿಯ, ಅನುಪಯುಕ್ತ, ಕಬ್ಬಿನ ಹಾಲಿನ ಗಾಡಿ, ಐಸ್ ಕ್ರೀಂ ಗಾಡಿ, ಇತ್ಯಾದಿ ಮಾರಾಟ ಪರಿಕರಗಳು ತಾತ್ಕಾಲಿಕ ಶಡ್ ಗಳು ಇತ್ಯಾದಿಯನ್ನು ಅನಧಿಕೃತವಾಗಿ ಬಿಟ್ಟಿರುವುದು ಕಂಡು ಬಂದಿರುತ್ತದೆ.
ಈ ಸಾರ್ವಜನಿಕ ಪ್ರಕಟಣೆಯ 15 ದಿನದ ಒಳಗೆ ಸಂಬಂಧಿಸಿದವರು ಕೂಡಲೇ ಸದರಿ ಅನುಪಯುಕ್ತ, ನಿಷ್ಕ್ರಿಯ ಅಥವಾ ವ್ಯಾಪಾರ ಮುಗಿದ ನಂತರ ಅಲ್ಲೇ ಬಿಟ್ಟಿರುವ ಗಾಡಿ ಅನುಪಯುಕ್ತವಸ್ತು ಇತ್ಯಾದಿ ತೆರವುಗೊಳಿಸುವುದು.
ತಪ್ಪಿದಲ್ಲಿ ಪೋಲೀಸ್ ಇಲಾಖೆ ಸಹಯೋಗದೊಂದಿಗೆ ಪಾಲಿಕೆ ವತಿಯಿಂದ ಸದರಿ ಸಾಮಗ್ರಿ ವಶಪಡಿಸಿಕೊಂಡು “ ಸ್ಕ್ರಾಪ್ “ ಮಾಡುವುದಲ್ಲದೇ ಸಂಬಂಧಿಸಿದವರ ಮೇಲೆ ದಂಡ ಹಾಗೂ ಕಾನೂನು ಕ್ರಮವಿಡಲಾಗುವುದು ಎಂದು ತಿಳಿಯ ಪಡಿಸಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv