ಭೂಮಿ ಹುಣ್ಣಿಮೆ ಒಂದು ಅಪರೂಪದ ವಿಶೇಷ ಹಬ್ಬ.
ಇದನ್ನು ಸೀಗೆ ಹುಣ್ಣಿಮೆ ಎಂದೂ ಕರೆಯುತ್ತಾರೆ. ಭೂ ತಾಯಿಗೆ ಮಕ್ಕಳು ಈ ದಿನ ವಿಶೇಷ ಪೂಜೆ ಮಾಡುತ್ತಾರೆ. ಅದರಲ್ಲೂ ಮಲೆನಾಡಿನ ಪ್ರದೇಶಗಳಲ್ಲಿ ಹೆಚ್ಚಾಗಿ ಈ ಹಬ್ಬವನ್ನು ಆಚರಿಸುತ್ತಾರೆ..ವರ್ಷಪೂರ್ತಿ ಬೆಳೆ ನೀಡುವ ಭೂ ತಾಯಿಗೆ ರೈತರು ಈ ದಿನ ಪೂಜೆ ಮಾಡಿ ನಮಿಸುತ್ತಾರೆ.ಇನ್ನೂ ಕೆಲವರ ಪ್ರಕಾರ ಈ ಹಬ್ಬವು, ಭತ್ತ ಮೊಳಕೆಯೊಡೆದು ಪೈರು ಹಿಡಿಯುವ ಈ ಸಂದರ್ಭದಲ್ಲಿ ಭೂಮಿ ತಾಯಿಗೆ ಸೀಮಂತ ಮಾಡುವುದು ಎಂಬ ಪ್ರತೀತಿಯೂ ಇದೆ..ಭೂಮಿ ಹುಣ್ಣಿಮೆ ದಿನ ತೋಟದಲ್ಲಿ ಪೂಜೆ ಮಾಡುವ ಗಿಡದ ಬುಡ ಸ್ವಚ್ಛಗೊಳಿಸಿ, ನಂತರ
ಮಾವಿನ ತೋರಣ, ಬಾಳೆ ದಿಂಡು, ಕಬ್ಬು, ಹೂವು, ತೆಂಗಿನ ಸಿಂಗಾರ, ಹೂವುಗಳಿಂದ ಸಿಂಗರಿಸುತ್ತಾರೆ ನಂತರ ಪೂಜಾ ಕಲ್ಲನ್ನು ಪ್ರತಿಷ್ಠಾಪಿಸಿಕೊಳ್ಳುತ್ತಾರೆ. ಬಗೆ ಬಗೆಯ ತಿಂಡಿಗಳನ್ನು ತಯಾರಿಸಿ ತಾಯಿಗೆ ಅರ್ಪಿಸಲಾಗುತ್ತದೆ. ಭೂತಾಯಿಗೆ ಬಾಗಿನ ನೀಡಿ ಹರಸುವಂತೆ ಪ್ರಾರ್ಥನೆ ಮಾಡುತ್ತಾರೆ.. ನಂತರದಲ್ಲಿ ಮನೆ ಮಂದಿ ಮತ್ತು ನೆಂಟರಿಷ್ಟರು ಎಲ್ಲಾರು ಒಟ್ಟಾಗಿ ಸಂತಸದಿಂದ ತೋಟದಲ್ಲೇ ಹಬ್ಬದ ಊಟ ಮಾಡುತ್ತಾರೆ. ದಕ್ಷಿಣ ಭಾರತ ಸೇರಿದ ಹಾಗೆ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಈ ಹಬ್ಬವನ್ನು ಬೇರೆ ಬೇರೆ ರೀತಿ ಆಚರಿಸಲಾಗುತ್ತದೆ.
ಮಲೆನಾಡಿನಲ್ಲಿ ಸಂಭ್ರಮದ ಭೂಮಿ ಹುಣ್ಣಿಮ

C News TV Kannada News Online in cnewstv