Monthly Archives: February 2025

ತ್ಯಾವರೆಕೊಪ್ಪ ಮೃಗಾಲಯದ ಗಂಡು ಹುಲಿ ‘ವಿಜಯ್’ ಸಾವು

ಶಿವಮೊಗ್ಗ: ನಗರ ಹೊರವಲಯದ ತ್ಯಾವರೆಕೊಪ್ಪ ಮೃಗಾಲಯದಲ್ಲಿದ್ದ ಏಕೈಕ ಗಂಡು ಹುಲಿ ‘ವಿಜಯ್'(17) ಸಾವನ್ನಪ್ಪಿದೆ. ವಯೋಸಹಜವಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹುಲಿ ವಿಜಯ್ ನಿನ್ನೆ ಮೃತಪಟ್ಟಿದೆ. ತ್ಯಾವರೆಕೊಪ್ಪ ಮೃಗಾಲಯದಲ್ಲೇ ಜನಿಸಿದ್ದ ಗಂಡು ಹುಲಿ ವಿಜಯ್, ಸ್ನಾಯು ನೋವಿನಿಂದಾಗಿ ಆಹಾರವನ್ನು ತ್ಯಜಿಸಿತ್ತು. ಕಳೆದ ಒಂದು ತಿಂಗಳಿಂದ ಯಾವುದೇ ಚಟುವಟಿಕೆಯಿಲ್ಲದೇ ಇದ್ದ ಹುಲಿಯನ್ನ ಸಫಾರಿಯ ಹುಲಿ ಮನೆಯಲ್ಲಿ ಆರೈಕೆ ಮಾಡಲಾಗುತ್ತಿತ್ತು. ಆದರೇ, ಚಿಕಿತ್ಸೆ ಫಲಿಸದೇ ನಿನ್ನೆ ಹುಲಿ ವಿಜಯ್ ಮೃತಪಟ್ಟಿದ್ದು, ಮೃಗಾಲಯ ನಿಯಮಾವಳಿಯಂತೆ ಅಂತ್ಯಸಂಸ್ಕಾರವನ್ನ ನೆರವೇರಿಸಲಾಗಿದೆ. ಇನ್ನು ಹುಲಿ ವಿಜಯ್ ಸಾವಿನಿಂದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಗಂಡು ಹುಲಿಗಳೇ ಇಲ್ಲದಂತಾಗಿದ್ದು, ...

Read More »

ತುಂಗಾ ಜಲಾಶಯದ ಹಿನ್ನೀರಿನಲ್ಲಿ ಮೂರು ಶವ ಪತ್ತೆ

ಶಿವಮೊಗ್ಗ: ತಾಲೂಕಿನ ಗಾಜನೂರಿನ ತುಂಗಾ ಜಲಾಶಯದ ಹಿನ್ನೀರಿನಲ್ಲಿ ಮೂವರ ಶವ ಪತ್ತೆಯಾಗಿವೆ. ತಾಲೂಕಿನ ಸಕ್ರೇಬೈಲು ಆನೆ ಬಿಡಾರದ ಸಮೀಪ 10ನೇ ಮೈಲಿಕಲ್ಲು ಬಳಿ ಹಿನ್ನೀರಿನಲ್ಲಿ ಮೂರು ಶವಗಳು ಪತ್ತೆಯಾಗಿವೆ. ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆಯ ಶವ ಪತ್ತೆಯಾಗಿದ್ದು, ಮೃತರ ಗುರುತು ಈವರೆಗೆ ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದ್ದು, ಮೃತದೇಹಗಳನ್ನು ಮೆಗ್ಗಾನ್ ಶವಗಾರಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕಾರ್ಮಿಕ ಮಹಿಳೆಯರಿಗೆ ವಿಮಾನ ಪ್ರಯಾಣದ ಗಿಫ್ಟ್ ನೀಡಿದ ರೈತ

ಶಿವಮೊಗ್ಗ: ಕೃಷಿ ಕೂಲಿ ಕಾರ್ಮಿಕರ ಕೆಲಸ ಮಾಡುತ್ತಿದ್ದ 10 ಜನ ಮಹಿಳೆಯರು ಶಿವಮೊಗ್ಗ ಏರ್ಪೋರ್ಟ್ ನಿಂದ ಇಂದು ಗೋವಾ ಪ್ರವಾಸಕ್ಕೆ ತೆರಳಿದ್ದಾರೆ. ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಆಸೆಯನ್ನ ಈಡೇರಿಸಲು ರೈತ ವಿಶ್ವನಾಥ್, ಶಿವಮೊಗ್ಗ ಏರ್ಪೋರ್ಟ್ ನಿಂದ 11 ಜನ ಕೂಲಿ ಕಾರ್ಮಿಕರನ್ನ ಇಂದು ಗೋವಾ ಪ್ರವಾಸಕ್ಕೆ ಕರೆದೊಯ್ದಿದ್ದು, ಫೆಬ್ರವರಿ 20 ರಂದು ವಿಮಾನದ ಮೂಲಕವೇ ಶಿವಮೊಗ್ಗಕ್ಕೆ ಮರಳಲಿದ್ದಾರೆ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಶಿರಗನಹಳ್ಳಿ ಗ್ರಾಮದ ರೈತ ವಿಶ್ವನಾಥ್, ತಮ್ಮ ಅಡಿಕೆ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದ 11 ಜನ ಕೂಲಿ ಕಾರ್ಮಿಕ ...

Read More »

ಶರಣಾದ ಇಬ್ಬರು ನಕ್ಸಲರನ್ನ ವಶಕ್ಕೆ ಪಡೆದ ಶಿವಮೊಗ್ಗ ಪೊಲೀಸರು.

ಶಿವಮೊಗ್ಗ: ಇತ್ತೀಚೆಗೆ ಶರಣಾದ 6 ನಕ್ಸಲರ ಪೈಕಿ ಮುಂಡಗಾರು ಲತಾ ಹಾಗೂ ವನಜಾಕ್ಷಿ ಬಾಳೆಹೊಳೆ ಅವರನ್ನು ಬಾಡಿ ವಾರಂಟ್ ಮೂಲಕ ಶಿವಮೊಗ್ಗದ ತೀರ್ಥಹಳ್ಳಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದು, ಇಂದು ಮಧ್ಯಾಹ್ನದ ವೇಳೆಗೆ ತೀರ್ಥಹಳ್ಳಿ ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಆಗುಂಬೆ ಪೊಲೀಸ್ ಠಾಣೆಯ 2 ಹಾಗೂ ಹೊಸನಗರ ಠಾಣೆಯ 1 ಕೇಸ್ ಸೇರಿದಂತೆ ಒಟ್ಟು ಮೂರು ಕೇಸ್ ಗಳಲ್ಲಿ ಇಬ್ಬರು ನಕ್ಸಲರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಇಂದು ಬೆಳಿಗ್ಗೆ ಬೆಂಗಳೂರಿನಿಂದ ಹೊರಟಿರುವ ಶಿವಮೊಗ್ಗ ಪೊಲೀಸ್ ಟೀಂ, ಬಿಗಿ ...

Read More »

ಪ್ಯಾರಾಚೂಟ್ ತೆರಯದೇ ವಾಯುಪಡೆಯ ಯೋಧ ಸಾವು

ಶಿವಮೊಗ್ಗ: ವಾಯುಸೇನೆಯ ತರಬೇತಿ ವೇಳೆಯಲ್ಲಿ ಪ್ಯಾರಾಚೂಟ್ ತೆರೆಯದೇ ಶಿವಮೊಗ್ಗ ಮೂಲದ ಯೋಧ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಆಗ್ರಾದಲ್ಲಿ ನಿನ್ನೆ ಪ್ಯಾರಾಚೂಟ್‌ ತರಬೇತಿ ವೇಳೆ ದುರ್ಘಟನೆ ನಡೆದಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಸಂಕೂರಿನ ಗೋರಗದ್ದೆಯ ಜಿ.ಎಸ್.‌ ಮಂಜುನಾಥ್‌(36) ಎಂಬ ಯೋಧ ಮೃತಪಟ್ಟಿದ್ದಾರೆ. ವಾಯುಪಡೆಯ ವಾರೆಂಟ್‌ ಅಧಿಕಾರಿಯಾಗಿದ್ದ ಮಂಜುನಾಥ್‌, ನಿನ್ನೆ ತರಬೇತಿ ವೇಳೆ ಇತರೆ 11 ಜನರೊಂದಿಗೆ ವಿಮಾನದಿಂದ ಜಿಗಿದಿದ್ದರು. ಮಂಜುನಾಥ್ ಹೊರತುಪಡಿಸಿ 10 ಜನರು ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಲ್ಯಾಂಡ್‌ ಆಗಿದ್ದರು. ತರಬೇತುದಾರರಾಗಿದ್ದ ಮಂಜುನಾಥ್‌ ಅವರ ಪ್ಯಾರಾಚೂಟ್‌ ತೆರೆದುಕೊಳ್ಳದ ಕಾರಣ ಅವರು ಸುಮಾರು 1500 ...

Read More »

ಗಾಂಜಾ ಸಾಗಿಸುತ್ತಿದ್ದ 7 ಮಂದಿ ಅರೆಸ್ಟ್

ಶಿವಮೊಗ್ಗ: ನಗರದ ಸಾಗರ ರಸ್ತೆಯಲ್ಲಿ ಇನ್ನೋವಾ ಕಾರಿನ ಡಿಕ್ಕಿಯಲ್ಲಿ ಗಾಂಜಾ ಇಟ್ಟು ಸಾಗಿಸುತ್ತಿದ್ದ 7 ಜನರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 1.217 ಕೆಜಿ ಒಣ ಗಾಂಜಾ ಮತ್ತು ಕಾರನ್ನು ಜಪ್ತಿ ಮಾಡಿದ್ದಾರೆ. ಶಿವಮೊಗ್ಗ ಆಜಾದ್ ನಗರದ ತನ್ವೀರ್ ಪಾಷಾ ಅಲಿಯಾಸ್ ಮಾರ್ಕೆಟ್ ಫೌಜಾನ್(26), ಮೊಹಮ್ಮದ್ ಇಬ್ರಾಹಿಂ @ ಮುನ್ನ(25), ಆರ್ ಎಂ ಎಲ್ ನಗರದ ಅಕೀಫ್ @ ಪುಕ್ಕಿ (28), ಮೊಹಮ್ಮದ್ ಫೈಜಲ್ @ ಬಚ್ಚಾ ಫೈಜಲ್ (21), ಇಲಿಯಾಜ್ ನಗರದ ಅರ್ಬಾಜ್ ಖಾನ್ @ ಮಜರ್ (26), ಟಿಪ್ಪು ನಗರದ ...

Read More »

ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ.

cnewstv |  07.02.2025  | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ. ಶಿವಮೊಗ್ಗ  : ಶಿವಮೊಗ್ಗ ಜಿಲ್ಲೆಯ 2024-25ನೇ ಸಾಲಿನ ಆತ್ಮ ಯೋಜನೆಯಡಿ ನೇರ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ತೀರ್ಥಹಳ್ಳಿ ತಾಲೂಕಿನ ದೇವಂಗಿ ರೈತ ಸಂಪರ್ಕ ಕೇಂದ್ರದಲ್ಲಿ ಖಾಲಿಯಿರುವ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ 45 ವರ್ಷ ವಯೋಮಿತಿಯುಳ್ಳ ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯದಲ್ಲಿ ಪದವಿ ಹೊಂದಿರುವವರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ...

Read More »

ಬಿಜೆಪಿಯ ಆಂತರಿಕ ಗೊಂದಲ ಶೀಘ್ರವೇ ಶಮನ: ವಿಜಯೇಂದ್ರ ವಿಶ್ವಾಸ

ಶಿವಮೊಗ್ಗ: ಚುನಾವಣೆಯಲ್ಲಿ ಪುನಃ ಆಯ್ಕೆಯಾಗಿ ರಾಜ್ಯಾಧ್ಯಕ್ಷನಾಗಿ ಮುಂದುವರೆಯುವೆ. ಪಕ್ಷದೊಳಗಿನ ಆಂತರಿಕ ಗೊಂದಲ ವಾರದ ಬಳಿಕ ಸರಿಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿಶ್ವಾಸ ವಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂಬ ಸದಾನಂದಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,ಈಗಾಗಲೇ ಏನೇನು ಡ್ಯಾಮೇಜ್ ಆಗಬೇಕೋ ಅವೆಲ್ಲವೂ ಆಗಿ ಹೋಗಿದೆ. ಕಳೆದ ವರ್ಷದಿಂದ ನಾನು ಎಲ್ಲಿಯೂ ಬಹಿರಂಗ ಹೇಳಿಕೆ ಕೊಟ್ಟಿಲ್ಲ. ಯಾರೇ ಏನೇ ಹೇಳಿದರೂ ಯಾರ ವಿರುದ್ಧವೂ ಬಹಿರಂಗ ಹೇಳಿಕೆ ಕೊಟ್ಟಿಲ್ಲ. ಪಕ್ಷದ ವಿರುದ್ಧವೂ ಹೇಳಿಕೆ ಕೊಟ್ಟಿಲ್ಲ. ಬಿಜೆಪಿ ರಾಜ್ಯದ ...

Read More »

ಬೈಲ್ ವೀಲ್ಹಿಂಗ್ ಕೇಸ್: ಸವಾರನಿಗೆ 5 ಸಾವಿರ ರೂ. ದಂಡ

ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ವೀಲ್ಹಿಂಗ್ ಮಾಡಿದ ಸವಾರನೋರ್ವನಿಗೆ ಬರೋಬ್ಬರಿ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಶಿವಮೊಗ್ಗ ನಗರದ ಗಾರ್ಡನ್ ಎರಿಯಾದ ಗೌರವ್ ಲಾಡ್ಜ್ ಸಮೀಪ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ಹಾಗೂ ಸಿಬ್ಬಂದಿಗಳು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬೈಕ್ ಸವಾರನೋರ್ವ ವೀಲ್ಹಿಂಗ್ ಮಾಡಿದ್ದು, ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಸಂಚಾರಿ ಪೊಲೀಸರು ನೋಟೀಸ್ ನೀಡಿದ್ದರು. ಇದೀಗ ಶಿವಮೊಗ್ಗ ಜಿಲ್ಲಾ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಇಂದು 5 ಸಾವಿರ ದಂಡ ವಿಧಿಸಿ, ಆದೇಶಿಸಿದೆ.

Read More »

ಫೆ.6 & 7 : ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಫೆ 06 ಮತ್ತು 07 ರಂದು ಎರಡು ದಿನಗಳ ಕಾಲ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನ ಆಯೋಜಿಸಿದೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ, ತೀರ್ಥಹಳ್ಳಿ ತಾಲ್ಲೂಕಿನ ಹಿರಿಯ ಸಾಹಿತಿ ಡಾ ಜೆ.ಕೆ.ರಮೇಶ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದ ಮಹಾವೇದಿಕೆಗೆ ಡಾ.ನಾ.ಡಿಸೋಜ ಅವರ ಹೆಸರು ಇಡಲಾಗಿದೆ. ಸುಮಾರು 4 ಸಾವಿರ ಪ್ರತಿನಿಧಿಗಳು ಸಾಹಿತ್ಯ ಸಮ್ಮೇಳನಕ್ಕೆ ನೊಂದಣಿಯಾಗಿದ್ದು, ಎರಡು ದಿನಗಳ ಊಟೋಪಚಾರದ ಜೊತೆಗೆ ಓಓಡಿ ಸೌಲಭ್ಯ ನೀಡಲಾಗುತ್ತಿದೆ ಎಂದರು. ...

Read More »

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Crime Hosanagara JDS K S Eshwarappa madhu bangarappa M P Election MP election News NSUI police Sagara Shikaripura Shimoga shimoga district Shivammoga Shivamoga Shivamogga Soraba SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಿಗಂದೂರು

Recent Comments