ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನಯ್ ರಾಜಾವತ್ ಈ ಬಾರಿಯೂ ಲೋಕಸಭೆ ಚುನಾವಣೆಯಲ್ಲಿಯೂ ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಕಣಕ್ಕಿಳಿಯಲಿದ್ದಾರೆ..ಕಳೆದ ಬಾರಿ ಶಿಕಾರಿಪುರದಿಂದ ಸ್ಪರ್ಧಿಸಲು ಹೆಲಿಕಾಪ್ಟರ್‌ನಲ್ಲಿ ಬಂದು ಗಮನ ಸೆಳೆದಿದ್ದ ವಿನಯ್ ರಾಜಾವತ್, ಈ ಬಾರಿಯೂ ನಾಮಪತ್ರ ಸಲ್ಲಿಸಲು ಹೆಲಿಕಾಪ್ಟರ್‌ನಲ್ಲಿಯೇ ತೆರಳಲಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ಹೆಲಿಕಾಪ್ಟರ್‌ನಲ್ಲಿಯೇ ಸುತ್ತಾಡಿ ಪ್ರಚಾರ ಮಾಡಲಿದ್ದಾರೆ.
Read More »Monthly Archives: March 2019
ವರುಣನ ಆಗಮನದಿಂದ ಶಿವಮೊಗ್ಗ ಕೂಲ್ ಕೂಲ್.
ಬಿಸಿಲಿನಿಂದ ಹೈರಾಣಾಗಿದ್ದ ಮಲೆನಾಡಿನ ಜನತೆಗೆ ಇಂದು ಸಂಜೆ ವರುಣ ತಂಪೆರೆದಿದ್ದಾನೆ..ನಗರದಲ್ಲಿ ಸುರಿದ ಗುಡುಗು ಸಹಿತ ಭಾರೀ ಮಳೆಗೆ ಜನ ಖುಷಿಯಾಗಿದ್ದಾರೆ.. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಆಗಿದೆ..ಶಿವಮೊಗ್ಗ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳನ್ನು ಸಹ ಮಳೆಯಾಗಿದೆ..
Read More »ಜಿಲ್ಲೆಯಲ್ಲಿ ಮತದಾನ ಜಾಗೃತಿಗಾಗಿ ಸಿದ್ಧವಾಗಿದೆ ಸಾಂಗ್
2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗಬೇಕು. ರಾಜ್ಯದಲ್ಲಿಯೇ ಶಿವಮೊಗ್ಗ ಜಿಲ್ಲೆ ಮತದಾನದಲ್ಲಿ ನಂಬರ್ ಒನ್ ಆಗಬೇಕು. ಈ ಉದ್ದೇಶದಿಂದ ಜಿಲ್ಲಾಡಳಿತದಿಂದ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ನಿಟ್ಟಿನಲ್ಲಿ ಮತದಾರರ ಜಾಗೃತಿಗಾಗಿ ಥೀಮ್ ಸಾಂಗ್ ರಚಿಸಿದ್ದು ಅದನ್ನು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಇಂದು ಕುವೆಂಪು ರಂಗಮಂದಿರದಲ್ಲಿ ಬಿಡುಗಡೆ ಮಾಡಿದರು.. ಥೀಮ್ ಸಾಂಗ್ ನ ಸಂಗೀತ ನಿರ್ದೇಶನವನ್ನು ಅಮಿತ್ ಎಸ್ ಕುಮಾರ್ ಮಾಡಿದ್ದು, ಗೀತ ರಚನೆಯನ್ನು ಸಮನ್ವಯ ಕಾಶಿ ಮತ್ತು ಕವಿ ನಿತಿನ್ ಜಯ್, ವಿಠ್ಠಲ ರಂಗಧೋಳ್ ಮಾಡಿದ್ದು, ಥೀಮ್ ಸಾಂಗ್ ...
Read More »KPSC ಹುದ್ದೆಗಳಿಗೆ ಅರ್ಜಿ ಆಹ್ವಾನ..
ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ ‘ಸಿ’ ಹುದ್ದೆಗಳಿಗೆ ನೇಮಕಾತಿ ನಡೆಸಲು ಪ್ರಕಟಣೆ ಹೊರಡಿಸಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಸಂಬಂಧಪಟ್ಟ ಹುದ್ದೆಗೆ ಬೇಕಾದ ಅರ್ಜಿಯನ್ನು ತುಂಬಿ ಏಪ್ರಿಲ್ 22ರೊಳಗೆ ಸಲ್ಲಿಸಬಹುದು.. ಹೆಚ್ಚಿನ ಮಾಹಿತಿಗಾಗಿ, ( http://www.kpsc.kar.nic.in/ )
Read More »ಶಿವಮೊಗ್ಗ ಜೆಡಿಎಸ್ ಗ್ರಾಮಾಂತರ ಅಧ್ಯಕ್ಷ ಟಿಬಿ ಜಗದೀಶ್ ಬಿಜೆಪಿಗೆ ಸೇರ್ಪಡೆ
ಶಿವಮೊಗ್ಗ ಗ್ರಾಮಾಂತರದ ಪ್ರಭಾವಿ ನಾಯಕ ಜೆಡಿಎಸ್ ನ ಅಧ್ಯಕ್ಷ ಶ್ರೀ ಟಿಬಿ ಜಗದೀಶ್ ರವರಿಗೆ ಎಪಿಎಂಸಿ ಚುನಾವಣೆಯ ಸಂದರ್ಭದಲ್ಲಿ ಅಧ್ಯಕ್ಷನಾಗಿ ಮಾಡುತ್ತೇವೆ ಎಂಬ ಆಶ್ವಾಸನೆಯನ್ನು ಹೆಚ್ ಡಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ,ಮಾಜಿ ಶಾಸಕಿ ಶಾರದಾ ಪೂರ್ಯ ನಾಯ್ಕ್ ನೀಡಿದ್ದರು. ಅದರೆ ಅವರು ನೀಡಿದ ಮಾತನ್ನು ಉಳಿಸಿಕೊಳ್ಳದೆ, ಪಕ್ಷದಲ್ಲಿ ಅವರನ್ನು ನಡೆಸಿಕೊಂಡ ನೀತಿಗೆ ಬೇಸತ್ತು, ನಾಳೆ ಸಂಜೆ ನಡೆಯುತ್ತಿರುವ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಎಲ್ಲಾ ನಾಯಕರ ಸಮೂಕದಲ್ಲಿ ಬಿಜೆಪಿ ಸೇರಲಿದ್ದಾರೆ.. ಜಗದೀಶ್ ಸೇರ್ಪಡೆ ಚುನಾವಣೆಯ ಮೇಲೆ ಪ್ರಭಾವವನ್ನು ಬೀರಲಿದೆ.
Read More »ಲಾರಿಗಳ ಮುಖಾಮುಖಿ ಡಿಕ್ಕಿ ಮೂವರ ಸಾವು
ಶಿವಮೊಗ್ಗ: ಸಾಗರ ತಾಲೂಕಿನ ಆನಂದಪುರ ಸಮೀಪದ ಐಗಿನಬೈಲು ಕ್ರಾಸ್ ಬಳಿ ಶನಿವಾರ ಬೆಳಗಿನ ಜಾವ ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ಹಾಗೂ ಡಾಂಬರು ತುಂಬಿದ ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ಸಾಗರ ಕಡೆಗೆ ಬರುತ್ತಿದ್ದು, ಡಾಂಬರ್ ತುಂಬಿದ ಲಾರಿ ಶಿವಮೊಗ್ಗ ಕಡೆ ಹೋಗುತ್ತಿತ್ತು ಎನ್ನಲಾಗಿದೆ. ಅಪಘಾತದಲ್ಲಿ ಡಾಂಬರ್ ಲಾರಿಯ ಚಾಲಕ ಸೋಮವಾರ ಪೇಟೆಯ ಸಚಿನ್ (25) ಕಂಡಕ್ಟರ್ ಬಿಜಾಪುರದ ತಾಳಿಕೋಟೆ ಮಲಕಪ್ಪ(22)ಮತ್ತು ಗ್ಯಾಸ್ ಲಾರಿಯ ಚಾಲಕ ಶಿಕಾರಿಪುರದ ಕಲವತ್ತಿಯ ಲೋಕೇಶ್(42) ಮೃತಪಟ್ಟಿದ್ದಾರೆ. ...
Read More »ಓಲಾ ಕ್ಯಾಬ್ ಗಳ ಪರವಾನಗಿ 6 ತಿಂಗಳ ಕಾಲ ಅಮಾನತ್ತು.
ಅಪ್ಲಿಕೇಶನ್ ಆಧಾರಿತ ಓಲಾ ಕ್ಯಾಬ್ಸ್ ಅಗ್ರಿಗೇಟರ್ ಪರವಾನಗಿಯನ್ನು 6 ತಿಂಗಳ ಕಾಲ ಅಮಾನತ್ತುಗೊಳಿಸಿದೆ.ಕರ್ನಾಟಕದಲ್ಲಿ ಆರು ತಿಂಗಳು ಓಲಾ ಕ್ಯಾಬ್ಗಳನ್ನು ಅಮಾನತುಗೊಳಿಸುವ ಕ್ರಮವನ್ನು ಮಾರ್ಚ್ 18 ರಂದು ನೀಡಲಾಯಿತು. ಕ್ಯಾಬ್ ಅಗ್ರಿಗ್ರೇಟರ್ಗೆ ಪರವಾನಗಿ ಪರಿಸ್ಥಿತಿಗಳ ಉಲ್ಲಂಘನೆ ಮತ್ತು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಬೈಕು ಟ್ಯಾಕ್ಸಿಗಳು ಚಾಲನೆಯಲ್ಲಿತ್ತು ಹಾಗು ಇಲಾಖೆಯ ನೋಟಿಸ್ಗಳಿಗೆ ಪ್ರತಿಕ್ರಿಯಿಸಿರಲಿಲ್ಲ ಹೀಗಾಗಿ ಕರ್ನಾಟಕ ಆನ್ ಡಿಮ್ಯಾಂಡ್ ಟ್ರಾನ್ಸ್ಪೋರ್ಟಷನ್ ಟೆಕ್ನಾಲಜಿ ಅಗ್ರಿಗೇಟಸ್ ರೂಲ್ಸ್ 2016 ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ನಗರದಲ್ಲಿ ಓಲಾ ಕಾರುಗಳು ಆಟೋಗಳು ಬೈಕುಗಳು ಸೇರಿದಂತೆ ಯಾವುದೇ ವಾಹನಗಳು ಅದರ ...
Read More »ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಹೃದಯಾಘಾತದಿಂದ ನಿಧನ
ಶಿವಮೊಗ್ಗ: ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಧಾರವಾಡದ ಕಟ್ಟಡ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಅವರಿಗೆ ಶುಕ್ರವಾರ ಹೃದಯಾಘಾತ ಉಂಟಾಯಿತು. ಕೂಡಲೇ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಧಾರವಾಡದ ಕಟ್ಟಡದ ದುರಂತ ಸ್ಥಳದಲ್ಲೇ ಮಾರ್ಚ್ 20 ರಿಂದ ಬೀಡು ಬಿಟ್ಟಿದ್ದ ಸಿ.ಎಸ್ ಶಿವಳ್ಳಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಗುರುವಾರ ಮಧ್ಯರಾತ್ರಿಯ ವರೆಗೆ ಅವರು ಅಲ್ಲಿಯೇ ಇದ್ದರು. ಇಂದೂ ಕೂಡ ಅಲ್ಲಿಯೇ ಇದ್ದರು. ಈ ವೇಳೆ ...
Read More »ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪ್ರಚಾರ ಶುರು.
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಶುಕ್ರವಾರ ಶಿಕಾರಿಪುರ ತಾಲೂಕಿನ ನೇರಲಗಿ ಗ್ರಾಮದಲ್ಲಿ ಪ್ರಚಾರ ಸಭೆ ನಡೆಸಿದರು. ನೇರಲಗಿ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಇಂದಿನ ಪ್ರಚಾರ ಆರಂಭಿಸಿದರು. ಪೂಜೆ ಬಳಿಕ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ನಡೆದ ಶಿರಾಳಕೊಪ್ಪ, ತೋಗರ್ಸಿ, ಹಾಗೂ ಸುಣ್ಣದಕೊಪ್ಪ ಮಹಾಶಕ್ತಿ ಕೇಂದ್ರಗಳ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾತನಾಡಿದ ರಾಘವೇಂದ್ರ ಅವರು ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿಯನ್ನಾಗಿಸಲು ಸಂಕಲ್ಪ ಮಾಡಿದರು.
Read More »ದಾಖಲೆ ಇಲ್ಲದ 2 ಕೋಟಿ ವಶ.
ಸಾಗರ ತಾಲೂಕಿನ ಅಮಟಿಕೊಪ್ಪದ ಚೆಕ್ ಪೋಸ್ಟ್ ಹತ್ತಿರ 2 ಕೋಟಿ ಹಣವನ್ನು ಎರ್ಟಿಗಾ ಕಾರ್ ನಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್ ನ ಅಸಿಸ್ಟೆಂಟ್ ಮ್ಯಾನೇಜರ್ ತೆಗೆದುಕೊಂಡು ಹೋಗುತ್ತಿದ್ದರು.ಅನುಮಾನಗೊಂಡು ಪ್ಲೇಯಿಂಗ್ ಸ್ಕ್ವಾಡ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸರಿಯಾದ ದಾಖಲೆ ಇಲ್ಲದ ಕಾರಣ ಅಧಿಕಾರಿಗಳು ಐಟಿಯವರ ವಶಕ್ಕೆ ಹಣವನ್ನು ಒಪ್ಪಿಸಿದ್ದಾರೆ…
Read More »
Recent Comments