ಬಿಜೆಪಿಯವರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ
ಯಡಿಯೂರಪ್ಪ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ
ಸಿಎಂ ಆದ ಮೇಲೆ ಯಡಿಯೂರಪ್ಪ ಮಾತು ತಪ್ಪಿದ್ದಾರೆ. ಹೀಗಾಗಿ ಬಿಜೆಪಿಯವರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ. ಮಾನ್ಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೇಳಿದಂತೆ ನಡೆದಿದೆ. ಅದೇ ರೀತಿ ಹಿಂದಿನ ಯುಪಿಎ ಸರ್ಕಾರ ರೈತರ 74 ಸಾವಿರ ಕೋಟಿ ಹಣ, ಸಾಲ ಮನ್ನಾ ಮಾಡಿದೆ. ಹಾಗಾಗಿ ನಮಗೆ ಜನರ ಬಳಿ ಮತ ಕೇಳುವ ಹಕ್ಕಿದೆ. ಯುವಕರು ಈ ಬಾರಿ ಚುನಾವಣೆಯಲ್ಲಿ ಕೇಂದ್ರದ ವಿರುದ್ಧ ತೀರ್ಪು ನೀಡಲಿದ್ದಾರೆ ಏಕೆಂದರೆ ಯುವಜನತೆಗೆ ಕೇಂದ್ರ ಸರ್ಕಾರ ಉದ್ಯೋಗ ಕಲ್ಪಿಸದೆ ಮೋಸ ಮಾಡಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ, ಸುದ್ದಿ ಗೋಷ್ಠಿ ಯಲ್ಲಿ ಹೇಳಿದರು.
C News TV Kannada News Online in cnewstv