ಬೆಂಗಳೂರು: 2014 ರಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಚಿನ್ನವನ್ನ ಅಡವಿಟ್ಟು 62.77 ಕೋಟಿ ರೂ. ಸಾಲ ನೀಡಿ, ಅಕ್ರಮ ಎಸಗಿದ್ದ ಪ್ರಕರಣದಲ್ಲಿ ಬ್ಯಾಂಕ್ ನ ಅಧ್ಯಕ್ಷ ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಆರ್.ಎಂ. ಮಂಜುನಾಥ್ ಗೌಡ ಅವರನ್ನ ಇಡಿ ಅರೆಸ್ಟ್ ಮಾಡಿದೆ. ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರನ್ನು ನಿನ್ನೆಯಿಂದಲೂ ತೀವ್ರ ವಿಚಾರಣೆ ನಡೆಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಅವರನ್ನು ಇಂದು ಬಂಧಿಸಿ, ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ನಗರದ ಅಪೆಕ್ಸ್ ಬ್ಯಾಂಕ್ ನ ...
Read More »ರಾಜ್ಯ
ಯತ್ನಾಳ್ ಉಚ್ಚಾಟನೆ – ತಡವಾದ್ರೂ ಸರಿಯಾದ ಕ್ರಮ ಎಂದ ಶಾಸಕ ಚೆನ್ನಿ
ಶಿವಮೊಗ್ಗ: ಬಿಜೆಪಿ ಎಂದಿಗೂ ಅಶಿಸ್ತನ್ನ ಸಹಿಸೋದಿಲ್ಲ. ಕ್ರಮ ತಡವಾಗಬಹುದು. ಆದರೆ, ಕ್ರಮದಲ್ಲಿ ವ್ಯತ್ಯಾಸ ಎಂದು ಆಗಲ್ಲ ಎಂದು ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಶಿಸ್ತಿನ ವರ್ತನೆಯನ್ನ ಯಾವುದೇ ಒಬ್ಬ ಸಾಮಾನ್ಯ ಕಾರ್ಯಕರ್ತ ಅಥವಾ ಎಷ್ಟೇ ದೊಡ್ಡ ನಾಯಕರಾದ್ರೂ ಮಾಡಬಾರದು ಅದು ನಿಯಮ. ಯತ್ನಾಳ್ ಆ ನಿಯಮ ಉಲ್ಲಂಘನೆ ಮಾಡಿದ್ದು, ಪರಿಣಾಮವಾಗಿ ಉಚ್ಚಾಟನೆ ಆಗಿದೆ ಎಂದರು. ಕಾರ್ಯಕರ್ತರು ಇದನ್ನು ಸಹಜ ಅಶಿಸ್ತಿನ ಪರಿಣಾಮ ಎಂದು ಪರಿಗಣಿಸಬೇಕು. ಸಹಜ ಪಕ್ರಿಯೆ ...
Read More »ಇಂದಿನಿಂದ SSLC ಪರೀಕ್ಷೆ ಆರಂಭ..
Cnewstv | 21.03.2025 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಇಂದಿನಿಂದ SSLC ಪರೀಕ್ಷೆ ಆರಂಭ.. ಬೆಂಗಳೂರು : ಇಂದಿನಿಂದ SSLC ವಾರ್ಷಿಕ ಪರೀಕ್ಷೆಗಳು ರಾಜ್ಯದಲ್ಲಿ ಆರಂಭಗೊಳ್ಳಲಿವೆ. ಶಿಕ್ಷಣ ಇಲಾಖೆ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ರಾಜ್ಯದ 2,818 ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗೆ 8.42 ಲಕ್ಷ ವಿದ್ಯಾರ್ಥಿಗಳು ಸೇರಿ ಒಟ್ಟು 8,96,887 ಮಕ್ಕಳು ನೋಂದಾಯಿಸಿದ್ದಾರೆ. ಈ ಪೈಕಿ 3.35 ಲಕ್ಷಕ್ಕೂ ಹೆಚ್ಚು ಗಂಡುಮಕ್ಕಳು, 3.78 ಲಕ್ಷಕ್ಕೂ ಹೆಚ್ಚು ಬಾಲಕಿಯರು ಮತ್ತು 5 ತೃತೀಯ ಲಿಂಗಿಗಳು ಇದ್ದಾರೆ. ಪರೀಕ್ಷೆಯ ಮೊದಲ ...
Read More »ಟೀಮ್ ಇಂಡಿಯಾಗೆ 58 ಕೋಟಿ ರೂ. ಘೋಷಿಸಿದ ಬಿಸಿಸಿಐ.
Cnewstv | 20.03.2025 | ಬೆಂಗಳೂರು | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಟೀಮ್ ಇಂಡಿಯಾಗೆ 58 ಕೋಟಿ ರೂ. ಘೋಷಿಸಿದ ಬಿಸಿಸಿಐ. ಮುಂಬೈ : ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡಕ್ಕೆ ಬಿಸಿಸಿಐ 58 ಕೋಟಿ ರೂ. ನಗದು ಬಹುಮಾನ ಘೋಷಣೆ ಮಾಡಿದೆ. ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಬಗ್ಗು ಬಡಿದು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಈ ಶ್ರೇಷ್ಠ ಸಾಧನೆಯನ್ನು ಗೌರವಿಸುವ ಸಲುವಾಗಿ ಇದೀಗ 58 ಕೋಟಿ ...
Read More »ವಿದ್ಯುತ್ ದರ ಏರಿಕೆ : ಗ್ರಾಹಕರಿಗೆ ಶಾಕ್ ನೀಡಿದ ಕೆಇಆರ್ಸಿ..ಎಪ್ರಿಲ್ 1 ರಿಂದಲೇ ಹೊಸ ಆದೇಶ ಜಾರಿ..
Cnewstv | 20.03.2025 | ಬೆಂಗಳೂರು | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ವಿದ್ಯುತ್ ದರ ಏರಿಕೆ : ಗ್ರಾಹಕರಿಗೆ ಶಾಕ್ ನೀಡಿದ ಕೆಇಆರ್ಸಿ.. ಬೆಂಗಳೂರು : ಬೆಲೆ ಏರಿಕೆಯ ಹೊಡೆತದಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಕೂಡ ಇದೀಗ ಶಾಕ್ ನೀಡಿದೆ. ವಿದ್ಯುತ್ ದರ ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚು ಮಾಡಲಾಗಿದೆ. ವಿದ್ಯುತ್ ಪ್ರಸರಣ ಮತ್ತು ಎಸ್ಕಾಮ್ ಸಿಬ್ಬಂದಿ ಪಿಂಚಿಣಿ, ಗ್ರಾಚ್ಯುಟಿಗಾಗಿ ಗ್ರಾಹಕರಿಂದ ವಸೂಲಿಗೆ ಕೆಇಆರ್ಸಿ ಮುಂದಾಗಿದ್ದು, ದರ ಹೆಚ್ಚಳದ ಆದೇಶ ಹೊರಡಿಸಿದೆ. ಎಪ್ರಿಲ್ ...
Read More »ಕೇವಲ 8 ದಿನಗಳ ಮಿಷನ್, 9 ತಿಂಗಳಿಗೆ ವಿಸ್ತರಣೆ ಅಗಿದ್ದು ಏಕೆ ??
Cnewstv | 19.03.2025 | ನವದೆಹಲಿ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಕೇವಲ 8 ದಿನಗಳ ಮಿಷನ್, 9 ತಿಂಗಳಿಗೆ ವಿಸ್ತರಣೆ ಅಗಿದ್ದು ಏಕೆ ?? ನವದೆಹಲಿ : 8 ದಿನದ ಮಿಷನ್ 9 ತಿಂಗಳಿಗೆ ವಿಸ್ತರಣೆ ಬೋಯಿಂಗ್ ಸ್ಟಾರ್ಲೈನರ್ ನೌಕೆ ಮೂಲಕ 8 ದಿನಗಳ ಅಧ್ಯಯನ ಮಿಷನ್ಗಾಗಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶಕ್ಕೆ ತೆರಳಿದ್ದರು. ಜೂನ್ 5 ರಂದು ನೌಕೆ ಉಡಾವಣೆಗೊಂಡಿತ್ತು. ನಾಸಾ ವೇಳಾಪಟ್ಟಿ ಪ್ರಕಾರ ಜೂನ್ 14 ರಂದು ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ...
Read More »ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಆನ್ಲೈನ್ ಅರ್ಜಿ ಅಹ್ವಾನ.
cnewstv | 14.03.2025 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಆನ್ಲೈನ್ ಅರ್ಜಿ ಅಹ್ವಾನ. ಶಿವಮೊಗ್ಗ : ಅಗ್ನಿಪಥ್ ಯೋಜನೆಯಡಿ 2025-26ನೇ ಸಾಲಿನ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಉಡುಪಿ, ದಾವಣಗೆರೆ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಆನ್ಲೈನ್ ನೋಂದಣಿಯು ಮಾರ್ಚ್ 12 ರಿಂದ ಏಪ್ರಿಲ್ 10 ರವರೆಗೆ ಇರುತ್ತದೆ. ನೋಂದಣಿ ಪೊರ್ಟಲ್- WWW.JOININDINARMY.NIC.IN ಹಾಗೂ ...
Read More »ಪಡಿತರ ಚೀಟಿದಾರರಿಗೆ ಹಣದ ಬದಲಿಗೆ ಅಕ್ಕಿ ವಿತರಣೆ.
cnewstv | 14.03.2025 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಪಡಿತರ ಚೀಟಿದಾರರಿಗೆ ಹಣದ ಬದಲಿಗೆ ಅಕ್ಕಿ ವಿತರಣೆ. ಶಿವಮೊಗ್ಗ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ಅಂತ್ಯೋದಯ ಅನ್ನಭಾಗ್ಯ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಪಡಿತರ ಚೀಟಿಯ ಕುಟುಂಬ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮುಖಾಂತರ ಅಕ್ಕಿ ಹಣವನ್ನು ವರ್ಗಾಯಿಸುವ ಪ್ರಕ್ರಿಯೆ ಬದಲಾಗಿ 2025 ರ ಫೆಬ್ರವರಿಯಿಂದ ಜಾರಿಗೆ ಬರುವಂತೆ ಅರ್ಹ ಫಲಾನುಭವಿಗಳಿಗೆ ಹೆಚ್ಚುವರಿ ...
Read More »ಶಕ್ತಿ ಯೋಜನೆ : ಕೋಟ್ಯಂತರ ರೂ. ನಷ್ಟದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ.
cnewstv | 12.03.2025 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಕ್ತಿ ಯೋಜನೆ : ಕೋಟ್ಯಂತರ ರೂ. ನಷ್ಟದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ. ಬೆಂಗಳೂರು : ಕರ್ನಾಟಕದ ಕೆಎಸ್ಆರ್ಟಿಸಿ, ಬಿಎಂಟಿಸಿ, ಕೆಕೆಆರ್ಟಿಸಿ ಮತ್ತು ಎನ್ಡಬ್ಲ್ಯುಕೆಆರ್ಟಿಸಿ ಸಾರಿಗೆ ನಿಗಮಗಳಿಗೆ ಕಳೆದ ಐದು ವರ್ಷಗಳಲ್ಲಿ ಭಾರಿ ನಷ್ಟವಾಗಿದೆ ಎಂದು ವಿಧಾನ ಪರಿಷತ್ತಿನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಶಕ್ತಿ ಯೋಜನೆಯ ಖರ್ಚು ಮತ್ತು ನಿಗಮಗಳ ಆರ್ಥಿಕ ಸ್ಥಿತಿಯ ಕುರಿತು ವಿವರವಾದ ಮಾಹಿತಿಯನ್ನು ಸಾರಿಗೆ ಸಚಿವರು ನೀಡಿದ್ದಾರೆ. ಎಂಎಲ್ಸಿ ಕೇಶವ ಪ್ರಸಾದ್ ಪ್ರಶ್ನೆಗೆ, “ಕಳೆದ ...
Read More »ಪ್ಯಾರಾಚೂಟ್ ತೆರಯದೇ ವಾಯುಪಡೆಯ ಯೋಧ ಸಾವು
ಶಿವಮೊಗ್ಗ: ವಾಯುಸೇನೆಯ ತರಬೇತಿ ವೇಳೆಯಲ್ಲಿ ಪ್ಯಾರಾಚೂಟ್ ತೆರೆಯದೇ ಶಿವಮೊಗ್ಗ ಮೂಲದ ಯೋಧ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಆಗ್ರಾದಲ್ಲಿ ನಿನ್ನೆ ಪ್ಯಾರಾಚೂಟ್ ತರಬೇತಿ ವೇಳೆ ದುರ್ಘಟನೆ ನಡೆದಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಸಂಕೂರಿನ ಗೋರಗದ್ದೆಯ ಜಿ.ಎಸ್. ಮಂಜುನಾಥ್(36) ಎಂಬ ಯೋಧ ಮೃತಪಟ್ಟಿದ್ದಾರೆ. ವಾಯುಪಡೆಯ ವಾರೆಂಟ್ ಅಧಿಕಾರಿಯಾಗಿದ್ದ ಮಂಜುನಾಥ್, ನಿನ್ನೆ ತರಬೇತಿ ವೇಳೆ ಇತರೆ 11 ಜನರೊಂದಿಗೆ ವಿಮಾನದಿಂದ ಜಿಗಿದಿದ್ದರು. ಮಂಜುನಾಥ್ ಹೊರತುಪಡಿಸಿ 10 ಜನರು ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದರು. ತರಬೇತುದಾರರಾಗಿದ್ದ ಮಂಜುನಾಥ್ ಅವರ ಪ್ಯಾರಾಚೂಟ್ ತೆರೆದುಕೊಳ್ಳದ ಕಾರಣ ಅವರು ಸುಮಾರು 1500 ...
Read More »