Cnewstv | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಮಿಡಟೌನ್ ರೋಟರಿಗೆ ಐತಿಹಾಸಿಕ ಸಮಗ್ರ ಪ್ರಶಸ್ತಿ – ಹರ್ಷ ಕಾಮತ್
ಶಿವಮೊಗ್ಗ : ಶೃಂಗೇರಿಯಲ್ಲಿ ನಡೆದ ರೋಟರಿ ಡಿಸ್ಟ್ರಿಕ್ಟ್ ಇಂಟರ್ ಕಲ್ಬರಲ್ ಸ್ಪರ್ಧೆಯಲ್ಲಿ ಜೋನ್-10 ರ ಚಾಂಪಿಯನ್ ಆಗಿರುವ ರೋಟರಿ ಕ್ಲಬ್ ಮಿಡ್‌ಟೌನ್ ಶಿವಮೊಗ್ಗವು 7 ವಿಭಾಗಗಳಲ್ಲಿ
ಸ್ಪರ್ಧಿಸಿ 5 ಪ್ರಮುಖ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದೆ. ಇದಲ್ಲದೆ ಕದಂಬ ಕ್ಲಬ್ ವತಿಯಿಂದ ಮತ್ತೊಂದು ಪ್ರಶಸ್ತಿ ಲಭಿಸಿದ್ದು, ಒಟ್ಟು 6 ಪ್ರಶಸ್ತಿಗಳೊಂದಿಗೆ ಮಿಡ್‌ಟೌನ್
ರೋಟರಿ ಕ್ಲಬ್ ಸಮಗ್ರ ಪ್ರಶಸ್ತಿಯನ್ನು ಗಳಿಸುವುದರ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ ಎಂದು ಜೋನ್-10ರ ಅಸಿಸ್ಟೆಂಟ್ ಗವರ್ನರ್ ರೊಟೇರಿಯನ್ ಕೃಷ್ಣಪ್ರಸಾದ್ ಶೆಟ್ಟಿ ರವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರೋಟರಿ ಜಿಲ್ಲೆಯ ಭರವಸೆಯ ಯುವನಾಯಕ ಹಾಗೂ ಅಧ್ಯಕ್ಷರಾದ ರೋಟೇರಿಯನ್ ಹರ್ಷ ಬಿ. ಕಾಮತ್ ರವರ ನಾಯಕತ್ವದಲ್ಲಿ ಈ ಸಾಧನೆ ಸಂಭವಿಸಿದ್ದು, ಮಿಡ್‌ಟೌನ್
ಕ್ಲಬ್ ಕೇವಲ ಸಾಂಸ್ಕೃತಿಕ ವಲಯದಲ್ಲೇ ಅಲ್ಲದೇ, ವಿವಿಧ ಸೇವಾ ಚಟುವಟಿಕೆಗಳ ಮೂಲಕ ಈಗಾಗಲೇ 121 ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿರುವುದು ವಿಶೇಷ.
ದಕ್ಷಿಣ ಭಾರತದ ರೋಟರಿ ಜೋನ್-7 ರಲ್ಲಿ ಪಬ್ಲಿಕ್ ಇಮೇಜ್ ವಿಭಾಗದಲ್ಲಿ ಮಿಡ್‌ಟೌನ್ ಕ್ಲಬ್ ಮುಂಚೂಣಿಯಲ್ಲಿ ಅಗ್ರಸ್ಥಾನ ಪಡೆದಿರುವುದು ಜಿಲ್ಲೆಯ ಹೆಮ್ಮೆಯ ವಿಷಯ ಎಂದು ಸಿಎಲ್‌ಎಫ್ ರೋಟೆರಿಯನ್ ಉದಯಪೇಟೆ ತಿಳಿಸಿರುತ್ತಾರೆ,.
41 ವರ್ಷಗಳ ಮಿಡ್‌ಟೌನ್ ರೋಟರಿ ಕ್ಲಬ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸಮಗ್ರ ಪ್ರಶಸ್ತಿ ದೊರೆತಿದ್ದು, ಈ ಮೂಲಕ ಕಾಮತ್ ಮತ್ತು ಅವರ ತಂಡ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದಾರೆ ಎಂದು ಕ್ಲಬ್ಬಿನ ಪಾಸ್ಟ್ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಅವರು ಅಭಿನಂದನೆ ಸಲ್ಲಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ರೋಟರಿ ಕ್ಲಬ್ ಮಿಡ್‌ಟೌನ್ ಅಧ್ಯಕ್ಷ ಹರ್ಷ ಬಿ. ಕಾಮತ್, ಸೆಕ್ರೆಟರಿ ಮಂಜುನಾಥ್, ಆನ್ಸ್ ಅಧ್ಯಕ್ಷ ಪವಿತ್ರಾ ಕಾಮತ್, ಪ್ರೀತಿ ದೀಪಕ್ ಸಾರಥಿ, ಜಿ ನ್ ನ್
ಮೂರ್ತಿ, ಸೇರಿದಂತೆ ಕ್ಲಬ್ಬಿನ ಇತರೆ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ…
C News TV Kannada News Online in cnewstv