ಶಿವಮೊಗ್ಗ ದಸರಾ ಹಳೇ ಜೈಲು ಆವರಣದಲ್ಲಿ ಅದ್ಧೂರಿಯಾಗಿ ನೆರವೇರಿತು. ಪ್ರತಿ ವರ್ಷ ಬನ್ನಿ ಕಡಿಯುವ ಆಚರಣೆ ಎನ್ಇಎಸ್ ಮೈದಾನದಲ್ಲಿ ನಡೆಯುತ್ತಿತ್ತು. ಆದರೆ ಜಾಗದ ಕೊರತೆಯಿಂದಾಗಿ ಇದೇ ಮೊದಲ ಬಾರಿಗೆ ಹಳೇ ಜೈಲು ಆವರಣದಲ್ಲಿ ಬನ್ನಿ ಕಡಿಯಲಾಯಿತು. ಈ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಗಮಿಸಿದ್ದರು. ಬನ್ನಿ ಕಡಿಯುವ ಮೂಲಕ ತಹಶೀಲ್ದಾರ್ ಸತ್ಯನಾರಾಯಣ ಎಲ್ಲರಿಗೂ ಶುಭ ಹಾರೈಸಿದರು ಹಾಗೂ ರಾವಣನ ಪ್ರತಿಕೃತಿಯನ್ನು ದಹಿಸಿ, ರಂಗು ರಂಗಿನ ಪಟಾಕಿ ಸಿಡಿಸಲಾಯಿತು. ಉತ್ಸವದಲ್ಲಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಸೇರಿದಂತೆ ಹಲವು ಅಧಿಕಾರಿಗಳು, ಕಾರ್ಪೊರೇಟರ್’ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
![](https://cnewstv.in/wp-content/uploads/2018/10/IMG_20181020_014555-620x330.jpg)
Recent Comments