ದೇಶದ ಅರ್ಥಿಕ ಪರಿಸ್ಥಿತಿ ಅದಗೆಟ್ಟಿದೆ. ದೇಶದ ಬೆಳವಣಿಗೆಗೆ ವಸ್ತುಗಳನ್ನ ರಫ್ತು ಮಾಡೋದು ಹೆಚ್ಚಾಗಬೇಕು. ಆದ್ರೆ ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ವಸ್ತು ಗಳ ಆಮದು ಹೆಚ್ಚಾಗಿದೆ. ದೇಶದಲ್ಲಿ ಪೆಟ್ರೋಲ್, ಡೀಸಲ್, ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಲೇ ಇದೆ. ಅಚ್ಚೆದಿನ್ ಅಂತ ಮೋದಿಯವರು ಹೇಳಿದ್ದು ಇದೇನಾ.?? ದೇಶದಲ್ಲಿ ಕಪ್ಪು ಹಣ ಹೆಚ್ಚಾಗಿದೆ. ಕೇಂದ್ರಸರ್ಕಾರಕ್ಕೆ ಇದುವರೆಗೂ ಎಷ್ಟು ಕಪ್ಪು ಹಣ ಸಿಕ್ಕಿದೆ ಎಂದು ಹೇಳಬೇಕು… ಚುನಾವಣೆ ಗೆಲ್ಲಲು ಕೊಟ್ಟ ಬರವಸೆಗಳಲ್ಲಿ ಯಾವುದನ್ನು ಬಿ.ಜೆ.ಪಿ ಈಡೇರಿಸಿಲ್ಲಾ.
ಯಡಿಯೂರಪ್ಪ ಕೆ.ಜೆ.ಪಿ ಕಟ್ಟಿದಾದ ನಮ್ಮ ಅಪ್ಪನ ಆಣೆ ಬಿ.ಜೆ.ಪಿ ಹೋಗಲ್ಲ ಎಂದು ಹೇಳಿದ್ದು ನೆನಪಿದೆಯಾ?? ಹಿಂದಿನ ಚುನಾವಣೆಯಲ್ಲಿ ಜೆ.ಡಿ.ಎಸ್ ಹಾಗು ಕಾಂಗ್ರೆಸ್ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನ ಮಾಡಿದ್ದು ನಿಜ.
ಆದ್ರೆ ಆ ವಿಷಯವನ್ನ ನಾವು ಮರೆತು ಒಂದಾಗಿದ್ದೇವೆ.
ಇನ್ನೂ ಹಿಂದುತ್ವದ ವಿಷಯದಲ್ಲಿ ಜನರನ್ನ ಪದೇ ಪದೇ ದಾರಿತಪ್ಪಿಸಲು ಸಾದ್ಯವಿಲ್ಲ. ಕರಾವಳಿ ಪ್ರದೇಶ ಹಿಂದುತ್ವದ ಲ್ಯಾಬೊರೇಟರಿ ಇದ್ದಂತೆ. ಹಿಂದುತ್ವ ಹಿಂದುತ್ವನೆ ಅದರಲ್ಲಿ ಸಾಪ್ಟ್ ಹಿಂದುತ್ವ ಅನ್ನೋದು ಏನಿದೆ.?? ಯಡಿಯೂರಪ್ಪ ಕೂಡ ಹಿಂದು, ನಾನು ಕೂಡಾ ಹಿಂದುನೇ..
ಸಿ.ಬಿ.ಐ ದುರುಪಯೋಗ ಮಾಡಿಕೊಂಡಿದಕ್ಕೆ ಇಂದು ಈ ಪರಿಸ್ಥಿತಿ ನಿರ್ಮಾಣವಾಗಿರೋದು . ಯಡಿಯೂರಪ್ಪ ನವರಿಗೆ ದುರಾಸೆ, ಹೇಗಾದ್ರು ಮಾಡಿ ಮುಖ್ಯಮಂತ್ರಿ ಯಾಗಬೇಕು ಅನ್ನೋ ದುರಾಸೆ. ನಾನು ಕಳೆದಬಾರಿ ಕೊನೇ ಚುನಾವಣೆ ಎಂದು ಹೇಳಿದ್ದು ನಿಜ. ಆದ್ರೆ ರಾಹುಲ್ ಗಾಂಧಿ ಹೇಳಿದ ಕಾರಣ ಮತ್ತೆ ಬರುವಂತಾಯಿತು. ಈಗ ಬಿ.ವೈ ರಾಘವೇಂದ್ರ ಡಮ್ಮಿ ಕ್ಯಾಂಡಿಡೇಟ್ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು..
Recent Comments