Breaking News

Tag Archives: News

ಶಿವಮೊಗ್ಗ ನಗರದ 35 ವಾರ್ಡ್ ಗಳಿಗೆ ಸ್ಯಾನಿಟೈಜೇಷನ್

  Cnewstv.in / Shivamogga / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 991666039 ಶಿವಮೊಗ್ಗ : ಕೋವಿಡ್ ಸುರಕ್ಷಾಪಡೆ ಮತ್ತು ಸೇವಾ ಭಾರತಿ ಆಶ್ರಯದಲ್ಲಿ ಆಯೋಜಿಸಿದ್ದ ಸ್ಯಾನಿಟೈಜೇಷನ್ ಅಭಿಯಾನಕ್ಕೆ ಸಚಿವ ಕೆ.ಎಸ್.‌ ಈಶ್ವರಪ್ಪ ಸ್ವತಃ ಔಷಧಿ ‌ಸಿಂಪಡಿಸುವ ಮೂಲಕ ಚಾಲನೆ ನೀಡಿದರು. ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಕಳೆದ ವರ್ಷ ಕೋವಿಡ್ ಸುರಕ್ಷಾಪಡೆ ವತಿಯಿಂದ ಎಲ್ಲ ನಾಗರಿಕರಿಗೆ ಉಚಿತವಾಗಿ ಆಯುಷ್‍ಕಿಟ್ ಕೊಡುವ ಮೂಲಕ ಕೊರೊನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಈ ಬಾರಿ ಇಡೀ ನಗರಕ್ಕೆ ಸ್ಯಾನಿಟೈಜ್ ಮಾಡಲಾಗುವುದು. ಇದಕ್ಕಾಗಿ ಆರು ವಾಹನಗಳು ಸಿದ್ಧವಾಗಿದ್ದು, ಪ್ರತಿ ವಾಹನ ...

Read More »

ಕೊರೊನಾ ಸೋಂಕಿತರ ಸಂಬಂಧಿಕರಿಂದ ಮೊಗ್ಗಾನ್ ಆಸ್ಪತ್ರೆ ಮುಂಭಾಗದಲ್ಲಿ ದಿಢೀರ್ ಪ್ರತಿಭಟನೆ

  Cnewstv.in / Shivamogga / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 991666039  ಶಿವಮೊಗ್ಗ : ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಯೊಬ್ಬರ ಸಂಬಂಧಿಕರಿಗೆ ಪಿಪಿಇ ಕಿಟ್ ಧರಿಸಿ ವಾರ್ಡಿ ಒಳಗೆ ಪ್ರವೇಶ ನೀಡುತ್ತಿದ್ದರು ಆದರೆ ಇಂದು ಮಧ್ಯಾಹ್ನ ಏಕಾಏಕಿ ಜೊತೆಗಿದ್ದ ಸಂಬಂಧಿಕರನ್ನು ವಾರ್ಡಿನಿಂದ ಹೊರಗೆ ಕಳುಹಿಸಿದ್ದಾರೆ. ಇದನ್ನ ಖಂಡಿಸಿದ್ದು ರೋಗಿಗಳ ಸಂಬಂಧಿಕರು ಪ್ರತಿಭಟನೆಯನ್ನು ನಡೆಸಿದರು. ಆಸ್ಪತ್ರೆಯ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಬರೋದಿಲ್ಲ, ಅರೈಕೆ ಮಾಡುವುದಿಲ್ಲ. ಸಂಬಂಧಿಕರೊಬ್ಬರು ಇದ್ದರೆ ಅವರಿಗೆ ಸರಿಯಾದ ಸಮಯಕ್ಕೆ ಮಾತ್ರೆ ಔಷಧಿಗಳನ್ನು ನೀಡಿ ಆರೈಕೆ ಮಾಡಬಹುದು. ಹಾಗಾಗಿ‌ ಸಂಬಂಧಿಕರೊಬ್ಬರನ್ನು ಒಳಗೆ ಬಿಡಿ ...

Read More »

ಶಿವಮೊಗ್ಗದಲ್ಲಿ ಜೀವರಕ್ಷಕ ಆಕ್ಸಿಜನ ಪರಿಸ್ಥಿತಿ ಹೇಗಿದೆ.? ಎಷ್ಟು ಜನ ಆಕ್ಸಿಜನ್ ಪಡೆದಿದ್ದಾರೆ ಗೊತ್ತಾ ??

  Cnewstv.in / Shivamogga / ಸುದ್ದಿ ಹಾಗೂ ಮಾಹಿತಿಗಾಗಿ 9916660399  ಶಿವಮೊಗ್ಗ: ಮೊದಲ ಅಲೆಯಲ್ಲಿ ಆಕ್ಸಿಜನ್ ಕೊರತೆ ಎದುರಾದಾಗ ಜಿಲ್ಲೆಯಲ್ಲಿ 19 ಕೆಎಲ್‌ಡಿ(ಕಿಲೋ ಪರ್ ಡೇ) ಘಟಕ ಸ್ಥಾಪಿಸಲಾಗಿದ್ದು ಜಿಲ್ಲೆಯಲ್ಲಿ ಅತಿ ಹೆಚ್ಚು ರೋಗಿಗಳು ದಾಖಲಾಗಿರುವ ಮೆಗ್ಗಾನ್ ಮೇಲಿನ ಒತ್ತಡವನ್ನು ಇದು ಕಡಿಮೆ ಮಾಡಿದೆ. 19 ಕೆಎಲ್‌ಡಿ ಸಾಮರ್ಥ್ಯದ ಘಟಕ ಹಾಗೂ 25 ಜಂಬೋ ಆಕ್ಸಿಜನ್, 25 ಮಿನಿ ಆಕ್ಸಿಜನ್ ಸಿಲಿಂಡರ್‌ಗಳ ದಾಸ್ತಾನು ಲಭ್ಯವಿದೆ. ಏಪ್ರಿಲ್ ತಿಂಗಳಲ್ಲಿ ಡಿ ಟೈಪ್ ಸಿಲಿಂಡರ್ ಬೇಡಿಕೆ ಹೆಚ್ಚಾಗಿದ್ದು ಮೊದಲನೇ ವಾರ 150 ಸಿಲಿಂಡರ್, 2ನೇ ವಾರ ...

Read More »

ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ

  Cnewstv.in / Shivamogga / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 991666039 ಶಿವಮೊಗ್ಗ : ಇಂದು ಜಿಲ್ಲೆಯಲ್ಲಿ 791 ಜನರಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 3519 ಸಕ್ರಿಯ ಪ್ರಕರಣಗಳಿವೆ. 2902 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 1666 ಜನರಿಗೆ ನೆಗೆಟಿವ್ ಬಂದಿದೆ. ಇಂದು ಜಿಲ್ಲೆಯಲ್ಲಿ 7 ಜನ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದುವರೆಗು ಜಿಲ್ಲೆಯಲ್ಲಿ 405 ಜನ ಕೊರೊನಾ ಸೋಂಕಿನಿಂದ ಸಾವಿನ್ನಪ್ಪಿದಾರೆ. ಇಂದು 442 ಜನ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 401 ಜನ ನಿಗದಿತ ...

Read More »

ತಾಳಗುಪ್ಪದಲ್ಲಿ ಸೈಕಲ್ ಸವಾರ ಸ್ಥಳದಲ್ಲೇ ಸಾವು.

ಶಿವಮೊಗ್ಗ: ಸೈಕಲ್ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿಯಾಗಿ ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ಘಟನೆ ನಡೆದಿದ್ದು, ಅಪಘಾತದ ರಭಸಕ್ಕೆ ಸೈಕಲ್ ಸವಾರ ಅಣ್ಣಪ್ಪ ತಿರುಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ- 206 ರಲ್ಲಿ ತಾಳಗುಪ್ಪದ ಬಳಿ ನಡೆದ ಘಟನೆ ನಡೆದಿದ್ದು, ತಾಳಗುಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ಸಹ ದಾಖಲಾಗಿದೆ.

Read More »

ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗಿಯಾದ ವಿದ್ಯಾರ್ಥಿನಿಗೆ ಅಭಿನಂದನೆ.

ಶಿವಮೊಗ್ಗ, 72ನೇ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಅನ್ನಪೂರ್ಣ ಕಾಮತ್ .ಎಂ.ಕೆ ರವರಿಗೆ ಅಭಿನಂದನೆ ಸಲ್ಲಿಸಲಾಗಿದೆ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕಿಯಾಗಿರುವ ಅನ್ನಪೂರ್ಣ ಇತ್ತೀಚಿಗೆ ನಡೆದ ಪರೇಡ್ ನಲ್ಲಿ ಭಾಗಿವಹಿಸಿದ್ದ ಹಿನ್ನೆಲೆಯಲ್ಲಿ ಕಾಲೇಜು ಹಾಗೂ ಎನ್ಎಸ್ಎಸ್ ಘಟಕ ಹಾಗೂ ಸ್ಪಂದನಾ ಮಹಿಳಾ ಸಬಲೀಕರಣ ಘಟಕದಿಂದ ಸನ್ಮಾನಿಸಿ, ಗೌರವಿಸಲಾಗಿದೆ. ಕಾಲೇಜಿನ ಚಂದನ ಸಭಾಂಗಣದಲ್ಲಿ ಆಯೋಜಸಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹೆಚ್.ಎಂ.ಸುರೇಶ್, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಫ್ರೊ.ಕೆ.ಎಂ.‌ನಾಗರಾಜು, ಎಸ್.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

Read More »

ಶಿವಮೊಗ್ಗದಲ್ಲಿ ಫ್ರಂಟ್ ಲೈನ್ ವರ್ಕರ್ಸ್ ಗೆ ಕೋವಿಡ್ ವ್ಯಾಕ್ಸಿನ್.

ಶಿವಮೊಗ್ಗ: ಕರೋನಾ ವಿರುದ್ಧ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಕೋವಿಡ್ ಲಸಿಕೆ ಹಾಕುವ ಪ್ರಕ್ರಿಯೆ ಜಿಲ್ಲೆಯಲ್ಲಿ ಇಂದಿನಿಂದ ಆರಂಭವಾಗಿದೆ. ಶಿವಮೊಗ್ಗದ ತುಂಗಾನಗರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಫ್ರಂಟ್ ಲೈನ್ ವರ್ಕರ್ಸ್ ಗೆ ಕೋವಿಡ್ ವ್ಯಾಕ್ಸಿನ್ ಲೈವ್ ರನ್ ನಡೆಸಲಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಗೆ ವ್ಯಾಕ್ಸಿನ್ ನೀಡಲಾಗಿದೆ. ರಾಜ್ಯ ಸರ್ಕಾರದ ಸೂಚನೆಯಂತೆ ಶಿವಮೊಗ್ಗ, ಮೈಸೂರು, ಕೊಪ್ಪಳ ಹಾಗೂ ಧಾರವಾಡ ಜಿಲ್ಲೆಯಲ್ಲಿ ವ್ಯಾಕ್ಸಿನ್ ಲೈವ್ ರನ್ ನಡೆಸಲಾಗಿದ್ದು, ತಲಾ 50 ಸಿಬ್ಬಂದಿಯನ್ನು ಇದಕ್ಕಾಗಿ ಆಯ್ಕೆ ಸಹ ಮಾಡಲಾಗಿತ್ತು. ಶಿವಮೊಗ್ಗದ ತುಂಗಾನಗರ ಪ್ರಾಥಮಿಕ ಆರೋಗ್ಯ ...

Read More »