23507 ಮೀನುಗಾರರ ಸಾಲಮನ್ನಾವನ್ನು ರಾಜ್ಯ ಸರ್ಕಾರ ಮಾಡಿದೆ. ರಾಜ್ಯದ ಮೀನುಗಾರರು ವಾಣಿಜ್ಯ ಬ್ಯಾಂಕ್ ಹಾಗೂ ಪ್ರಾದೇಶಿಕ ಬ್ಯಾಂಕುಗಳಿಂದ ಪಡೆದ 50,000 ರೂ ವರೆಗಿನ 60.584 ಕೋಟಿ ರೂ ಸಾಲಮನ್ನಾ ಮಾಡಲಾಗಿದೆ ಎಂದು ಬಿ.ವೈ. ರಾಘವೇಂದ್ರ ಇಂದು ತಮ್ಮ ಟ್ವಿಟರ್ ನಲ್ಲಿ ಟ್ವಿಟ್ ಮಾಡಿದ್ದಾರೆ.
Read More »Monthly Archives: July 2019
ಮೀನು ಹಿಡಿಯಲು ಹೋದ ಮೂವರು ಯುವಕರ ಸಾವು.
ಮೀನು ಹಿಡಿಯಲು ಹೋದ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸೊರಬದಲ್ಲಿ ಇಂದು ನಡೆದಿದೆ. ತಾಲೂಕಿನ ಚಂದ್ರಗುತ್ತಿ ಹೋಬಳಿ ಹೊಳೆಜೋಳದಗುಡ್ಡೆ ಗ್ರಾಮದ ವಾಸಿಗಳಾದ ಪ್ರದೀಪ ಬಿನ್ ಕೆರಿಯಪ್ಪ (19), ಶರತ್ ಬಿನ್ ಕುಬೇರಪ್ಪ (15) ಹಾಗೂ ಕಾರ್ತಿಕ್ ಬಿನ್ ರಾಮಪ್ಪ (17) ಮೃತಪಟ್ಟ ದುರ್ಧೈವಿಗಳು. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಗ್ರಾಮದ ಹೊಸ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದು, ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ಸಿಪಿಐ ಉಮಾಪತಿ, ಪೊಲೀಸ್ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
Read More »ತೆರೆದ ಮ್ಯಾನ್‍ಹೋಲ್‍ಗಳನ್ನು 10ದಿನಗಳ ಒಳಗಾಗಿ ಮುಚ್ಚದಿದ್ದರೆ ಕ್ರಿಮಿನಲ್ ಮೊಕದ್ದಮೆ: ಚಾರುಲತಾ ಸೋಮಲ್ ಎಚ್ಚರಿಕೆ
ಶಿವಮೊಗ್ಗ ನಗರದ ಹಲವು ವಾರ್ಡ್‍ಗಳ ವ್ಯಾಪ್ತಿಯಲ್ಲಿ ತೆರೆದ ಮ್ಯಾನ್‍ಹೋಲ್‍ಗಳು ಇರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಅಂತಹ ಮ್ಯಾನ್‍ಹೋಲ್‍ಗಳನ್ನು 10ದಿನಗಳ ಒಳಗಾಗಿ ಮುಚ್ಚದಿದ್ದರೆ ಸಂಬಂಧಪಟ್ಟ ವ್ಯಾಪ್ತಿಯ ಇಂಜಿನಿಯರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಎಚ್ಚರಿಕೆ ನೀಡಿದ್ದಾರೆ. ವಾರ್ಡ್‍ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಕಡೆಗಳಲ್ಲಿ ತೆರೆದ ಮ್ಯಾನ್‍ಹೋಲ್‍ಗಳು ಕಂಡು ಬಂದಿದ್ದು, ಅವುಗಳನ್ನು ತಕ್ಷಣ ಮುಚ್ಚುವಂತೆ ಸಂಬಂಧಪಟ್ಟ ಇಂಜಿನಿಯರ್‍ಗಳಿಗೆ ಎಚ್ಚರಿಕೆ ನೀಡಲಾಗಿದೆ. ತೆರೆದ ಮ್ಯಾನ್‍ಹೋಲ್‍ಗಳಿಂದಾಗಿ ಯಾವುದೇ ಅವಘಡಗಳು ಸಂಭವಿಸುವ ಮೊದಲೇ ಮುಚ್ಚಬೇಕು. ತೆರೆದ ಮ್ಯಾನ್‍ಹೋಲ್‍ನಿಂದ ಅವಘಡಗಳು ...
Read More »ಸ್ಮಾರ್ಟ್ ಸಿಟಿ ಕಾಮಗಾರಿ ಚುರುಕುಗೊಳಿಸಿ: ಚಾರುಲತಾ ಸೋಮಲ್
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಚುರುಕುಗೊಳಿಸಿ ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರು ತಿಳಿಸಿದರು. ಅವರು ಸ್ಮಾರ್ಟ್ ಸಿಟಿ ಕಚೇರಿ ಸಭಾಂಗಣದಲ್ಲಿ ಯೋಜನೆಯ ಅನುಷ್ಟಾನ ಪ್ರಗತಿ ಪರಿಶೀಲನೆ ನಡೆಸಿ, ಕಾಮಗಾರಿಗಳ ತ್ವರಿತ ಅನುಷ್ಟಾನಕ್ಕೆ ಸೂಚನೆ ನೀಡಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ 52 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಇದರಲ್ಲಿ 2 ಯೋಜನೆಗಳು ಪೂರ್ಣಗೊಂಡಿವೆ. 24 ಯೋಜನೆಗಳು ಪ್ರಗತಿಯಲ್ಲಿವೆ. 11 ಯೋಜನೆಗಳು ಟೆಂಡರ್ ಪ್ರಕ್ರಿಯೆಯಲ್ಲಿವೆ. 9 ಯೋಜನೆಗಳು ಡಿ.ಪಿ.ಆರ್ ಹಂತದಲ್ಲಿದ್ದು, 6 ಯೋಜನೆಗಳು ...
Read More »6 ದಿನ ಶಿವಮೊಗ್ಗದಲ್ಲಿ ನಡೆಯಲಿದೆ ವಾಯುದಳದ ನೇಮಕಾತಿ ರ್ಯಾಲಿ..
ಶಿವಮೊಗ್ಗದಲ್ಲಿ ಜುಲೈ 17ರಿಂದ 22ರವರೆಗೆ ನಡೆಯಲಿರುವ ವಾಯುಸೇನೆಯ ನೇಮಕಾತಿ ರ್ಯಾಲಿಗೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಪ್ರತಿ ದಿನ 2ಸಾವಿರ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದ ಎಲ್ಲಾ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಲು ಅನುಕೂಲವಾಗುವಂತೆ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಜುಲೈ 17 ಮತ್ತು 18ರಂದು ಇಂಡಿಯನ್ ಏರ್‍ಫೋರ್ಸ್ ಪೋಲಿಸ್ ಮತ್ತು ಅಟೋಮೊಬೈಲ್ ಮತ್ತು ತಂತ್ರಜ್ಞ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ದಿನಗಳಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಧಾರವಾಡ ಮತ್ತು ಉತ್ತರಕನ್ನಡ ಜಿಲ್ಲೆಯ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಜುಲೈ ...
Read More »ನನ್ನ ಜೀವನದ ತಪ್ಪುಗಳು..
ವಾಣಿಜ್ಯ ಪರವಾನಿಗೆ ಪಡೆಯದವರ ವಿರುದ್ಧ ಸೂಕ್ತ ಕ್ರಮ: ಚಾರುಲತಾ ಸೋಮಲ್
ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಣಿಜ್ಯ ಪರವಾನಿಗೆ ಪಡೆಯದೆ ಅಂಗಡಿ ಮುಂಗಟ್ಟು, ವಾಣಿಜ್ಯ ವ್ಯವಹಾರ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರು ಹೇಳಿದರು. ಗುರುವಾರ ಗಾಂಧಿ ಬಜಾರ್‍ನಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ಮೇಯರ್ ಲತಾ ಗಣೇಶ್ ಹಾಗೂ ಉಪ ಮೇಯರ್ ಚನ್ನಬಸಪ್ಪ ಹಾಗೂ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ ಅವರು, ಇದುವರೆಗೆ ವಾಣಿಜ್ಯ ಪರವಾನಿಗೆ ಪಡೆಯದವರು ತಕ್ಷಣ ಪರವಾನಿಗೆ ಪಡೆಯಲು ಅರ್ಜಿಯನ್ನು ಸಲ್ಲಿಸಿ ಪಡೆಯಬೇಕು. ಈ ವರ್ಷ ನವೀಕರಿಸದವರು ತಕ್ಷಣ ನವೀಕರಿಸಬೇಕು. ...
Read More »ಮಾನಸಿಕ ಅಸ್ವಸ್ಥೆಗೆ ಹಿಗ್ಗಾಮುಗ್ಗಾ ಥಳಿತ.
ಶಿವಮೊಗ್ಗ: ಮಾನಸಿಕ ಅಸ್ವಸ್ಥೆಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದ ಜೆ.ಸಿ.ರಸ್ತೆಯಲ್ಲಿ ನಡೆದಿದೆ. ಮಾನಸಿಕ ಅಸ್ವಸ್ಥೆಯಾಗಿರುವ ಸಾಗರದ ನೆಹರೂ ನಗರ ನಿವಾಸಿ ಕವಿತಾ ಥಳಿತಕ್ಕೊಳಗಾದ ದುರ್ದೈವಿ. ಸಾಗರದ ಜೆ.ಸಿ.ರಸ್ತೆಯ ಅಂಗಡಿಗಳ ಮುಂದೆ ನಿಂತು ಅವಾಚ್ಯವಾಗಿ ನಿಂದಿಸುತ್ತಿದ್ದಳು ಎಂಬ ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿದ್ದವರು ಹಾಗೂ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು ಹೊಡೆದಿದ್ದು ಮಾತ್ರವಲ್ಲದೆ ಕಾಲಿನಿಂದ ಒದ್ದು ಕೊಲಿನಿಂದ ಥಳಿಸಿ ಮೃಗೀಯ ವರ್ತನೆ ತೋರಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಆಕೆಯ ಸಂಬಂಧಿಕರು ಗಂಭೀರವಾಗಿ ಗಾಯಗೊಂಡಿದ್ದ ಕವಿತಾಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಈ ಸಂಬಂಧ ...
Read More »ಮುಂಬೈ ಮಳೆಗೆ ಸಿಕ್ಕಿಬಿದ್ದ ಪೇಜಾವರ ಶ್ರೀಗಳಿಗೆ ಮುಸ್ಲಿಂ ಟ್ಯಾಕ್ಸಿ ಚಾಲಕ ಸಹಾಯ!
ಮುಂಬಯಿ ಮಹಾನಗರಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಈ ಸಂದರ್ಭ ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಅವರು ನಗರದ ಬೊರಿವಲಿ ರೈಲು ನಿಲ್ದಾಣದಲ್ಲಿ ಕೆಲಹೊತ್ತು ಬಾಕಿಯಾಗಿದ್ದರು. ಕೊನೆಗೆ ಕನ್ನಡಿಗ ಮುಸ್ಲಿಂ ಟ್ಯಾಕ್ಸಿ ಚಾಲಕನೊಬ್ಬ ಸುರಕ್ಷಿತವಾಗಿ ಡೊಂಬಿವಿಲಿಗೆ ತಲುಪಿಸಿದ ಘಟನೆ ನಡೆದಿದೆ. ಪೇಜಾವರ ಶ್ರೀಗಳು ಬರೋಡಾದಿಂದ ಡೊಂಬಿವಿಲಿಗೆ ರೈಲಿನಲ್ಲಿ ಪ್ರಯಾಣಿಸುತಿದ್ದರು. ಅವರಿಗೆ ಮಧ್ಯಾಹ್ನ 3ಕ್ಕೆ ಡೊಂಬಿವಿಲಿಯ ಕಾರ್ಯಕ್ರಮವೊಂದರಲ್ಲಿ »ಗವಹಿಸಬೇಕಾಗಿತ್ತು. ಆದರೆ ಭಾರೀ ಮಳೆಯಿಂದಾಗಿ ಸುಮಾರು 50 ಕಿ.ಮೀ.ನಷ್ಟುಹಿಂದೆ ಬೊರಿವಿಲಿಯಲ್ಲಿ ರೈಲು ಮುಂದಕ್ಕೆ ಹೋಗಲಾಗದೇ ನಿಂತುಬಿಟ್ಟಿತು. ಆಗ 8 ಗಂಟೆಯಾಗಿತ್ತು. ಕೊನೆಗೆ ಟ್ಯಾಕ್ಸಿಯಲ್ಲಿ ಡೊಂಬಿವಿಲಿಗೆ ಹೊರಡಲು ...
Read More »
Recent Comments