Breaking News

Monthly Archives: September 2019

ಅನರ್ಹರಿಗೆ ಟಿಕೆಟ್ ಖಚಿತ

ಶಿವಮೊಗ್ಗ: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಶಿಕಾರಿಪುರದಲ್ಲಿ ಈ ಕುರಿತು ಹೇಳಿಕೆ ನೀಡಿರುವ ಸಿಎಂ ಈ ಕುರಿತು ಅಮಿತ್ ಷಾ ಸೇರಿದಂತೆ ಬಿಜೆಪಿ ವರಿಷ್ಠರೊಂದಿಗೆ ಚರ್ಚೆ ನಡೆಸಿದ್ದೇನೆ. ಇದಕ್ಕೆ ವರಿಷ್ಟರೂ ಒಪ್ಪಿಗೆ ಸೂಚಿಸಿದ್ದಾರೆ. ಅನರ್ಹ ಶಾಸಕರನ್ನು ಗೆಲ್ಲಿಸಬೇಕಾದ ಜವಾಬ್ದಾರಿ ಬಿಜೆಪಿ ಕಾರ್ಯಕರ್ತರು‌ ಸೇರಿದಂತೆ ಎಲ್ಲ ನಾಯಕರ ಮೇಲಿದೆ. ಇದಕ್ಕಾಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಇಬ್ಬಿಬ್ಬರು ಉಸ್ತುವಾರಿಗಳನ್ನು ಈಗಾಗಲೇ‌ ನೇಮಿಸಲಾಗಿದೆ ಎಂದು ಹೇಳುವ ಮೂಲಕ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಸಂಬಂಧ ...

Read More »

ಸಿಗಂದೂರು ಬಳಿ ಲಾಂಚ್ ನಿಂದ ಶರಾವತಿ ನದಿಗೆ ಹಾರಿ ಅಪರಿಚಿತ ಆತ್ಮಹತ್ಯೆ- Exclusive video

ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಶಿವಮೊಗ್ಗ ಜಿಲ್ಲೆಯ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಶರಾವತಿ ಹಿನ್ನೀರಿನಲ್ಲಿ‌ ಸಂಚರಿಸುವ ಲಾಂಚ್ ನಿಂದ ನೀರಿಗೆ ಹಾರಿ ಅಪರಿಚಿತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಂಚ್ ಅಂಬಾರಗೋಡ್ಲು ಕಡೆಯಿಂದ ಕಳಸವಳ್ಳಿಗೆ ಹೋಗುವಾಗ ಹಿನ್ನೀರಿನ ಮಧ್ಯೆ ಅಪರಿಚಿತ ವ್ಯಕ್ತಿ ಏಕಾಏಕಿ ನೀರಿಗೆ ಧುಮುಕಿದ್ದಾನೆ. ಲಾಂಚ್ ನ ಸಿಬ್ಬಂದಿ ಆತನನ್ನು ರಕ್ಷಿಸಲು ಪ್ರಯತ್ನಸಿದರಾದರೂ ಅಷ್ಟರಲ್ಲಾಗಲೇ ಆತ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದ್ದಾನೆ. ಮೃತನ ಶವಕ್ಕಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌..  

Read More »

ಅಕ್ಟೋಬರ್ 1 ರಿಂದ DL, RC ಪತ್ರದಲ್ಲಿ ಬದಲಾವಣೆ – ಕೇಂದ್ರ ಸರ್ಕಾರ.

  ಕೇಂದ್ರ ಸರ್ಕಾರವು ಹೊಸ ಮೋಟರ್ ವಾಹನ ಕಾಯ್ದೆ ಜಾರಿಗೆ ತಂದ ಬಳಿಕ ವಾಹನ ಚಾಲನೆ ಪರವಾನಗಿ ಪತ್ರ ಹಾಗೂ ದಾಖಲಾತಿಗಳಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಇಡೀ ದೇಶಾದ್ಯಂತ ಒಂದೇ ಮಾದರಿಯ DL ಹಾಗೂ RC ಪತ್ರವನ್ನು ನೀಡಲು ಮುಂದಾಗಿದೆ. ಹಳೆ ಮುದ್ರಣ ಶೈಲಿಯೂ ಬದಲಾಗಲಿದೆ. DL ಹಾಗೂ RC ಯನ್ನು ಮೈಕ್ರೋಚಿಪ್ ಹಾಗೂ ಕ್ಯೂಆರ್ ಕೋಡ್ ಮೂಲಕ ಅಳವಡಿಸಲಾಗುವುದು. ಈಗಾಗಲೇ ರಾಜ್ಯದ ಎಲ್ಲಾ ಟ್ರಾಫಿಕ್ ಪೊಲೀಸ್ ಠಾಣೆಗಳಿಗೆ ಟ್ರಾಕಿಂಗ್ ಉಪಕರಣಗಳನ್ನು ಕಳುಹಿಸಲಾಗಿದೆ. ಈ ಟ್ರಾಕಿಂಗ್ ಉಪಕರಣದ ಮುಖಾಂತರ ಯಾವುದೇ ವಾಹನಗಳ ಮಾಹಿತಿಯನ್ನು ...

Read More »

ಧಗ ಧಗನೆ ಹೊತ್ತಿ ಉರಿದ ಟವೆರಾ ಕಾರು, ಕಾರಿನಲ್ಲಿದ್ದ ಇಬ್ಬರು ಅಪಾಯದಿಂದ ಪಾರು.

    ಸಾಗರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಸ್ಪಾಡಿ ಬಳಿ ಟವೆರಾ ಕಾರೊಂದು ಚಾಲನೆಯಲ್ಲಿದ್ದಾಗಲೇ ಬೆಂಕಿ ಕಾಣಿಸಿಕೊಂಡಿದೆ. ನಿನ್ನೆ ರಾತ್ರಿ 1.30 ಗಂಟೆಗೆ ಸುಮಾರಿಗೆ ಶಿವಮೊಗ್ಗದಿಂದ ಸಾಗರದ ಕಡೆ ಬರುತ್ತಿದ್ದ ಕಾರಿನಲ್ಲಿ ನಡೆದಿದೆ. ಘಟನೆಯಲ್ಲಿ ಟವೆರಾ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು,ಕಾರಿನಲ್ಲಿದ್ದ ಓರ್ವನಿಗೆ ಸಣ್ಣ ಪುಟ್ಟ ಸುಟ್ಟ ಗಾಯವಾಗಿದೆ. ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣ ಎನ್ನಲಾಗಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳಾದ ವಿಲ್ಫ್ರೆಡ್,ಜೆ.ರವಿ,ಪ್ರಕಾಶ್,ರವಿಕುಮಾರ್,ಕುಮಾರಸ್ವಾಮಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಇಮ್ರಾನ್ ಸಾಗರ್

Read More »

ಬ್ಯಾಂಕ್ ನಲ್ಲಿ ಇಟ್ಟ ಹಣ ಬಿಡಿಸಿಕೊಳ್ಳಲು ಗ್ರಾಹಕರ ಪರದಾಟ

ಶಿವಮೊಗ್ಗ: ಬ್ಯಾಂಕ್ ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲ ಎಂದರೆ‌ ಬ್ಯಾಂಕ್ ನವರು ದಂಡ ಹಾಕುತ್ತಾರೆ. ಆದರೆ ಬ್ಯಾಂಕ್ ನಲ್ಲಿ ಡಿಪಾಸಿಟ್ ಇಟ್ಟಿರುವ ಹಣವನ್ನು ಬಿಡಿಸಿಕೊಳ್ಳಲು ಹೋದರೆ ಆ ಹಣವನ್ನು ಗ್ರಾಹಕರಿಗೆ ಕೊಡಲು ಸಾಧ್ಯವಿಲ್ಲ ಎನ್ನುವುದು ಎಷ್ಟರಮಟ್ಟಿಗೆ ಸರಿ. ಇಂಥದ್ದೊಂದು ಸಂದಿಗ್ಧ ಸ್ಥಿತಿಗೆ ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ ಬಂದು ತಲುಪಿಗೆ. ಹೌದು ಇಂದು ಬೆಳಗ್ಗೆ ಈ ಬ್ಯಾಂಕ್ ನ ಗ್ರಾಹಕರಿಗೆ ಅಚ್ಚರಿ ಕಾದಿತ್ತು. ಬ್ಯಾಂಕ್ ನಲ್ಲಿ ತಾವು ಇಟ್ಟಿರುವ ಹಣದಲ್ಲಿ ತಮಗೆಷ್ಟು ಬೇಕೋ ಅಷ್ಟನ್ನು ಬಿಡಿಸಿಕೊಳ್ಳಲು ಹೋದ ಗ್ರಾಹಕರಿಗೆ ಬ್ಯಾಂಕ್ ಸಿಬ್ಬಂದಿ ...

Read More »

ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ರಾಣೆಬೆನ್ನೂರು ಅಭ್ಯರ್ಥಿ!

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಇ.ಕಾಂತೇಶ್ ಅವರು ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆಯೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಹೌದು ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂದು ಕಾಂತೇಶ್ ಅಭಿಮಾನಿಗಳು ಒತ್ತಾಯಿಸಲಾರಂಭಿಸಿದ್ದಾರೆ. ಈ ಬಗ್ಗೆ ಪೇಸ್ ಬುಕ್ ನಲ್ಲಿ ರಾಣೆಬೆನ್ನೂರು ಬಿಜೆಪಿ ಅಭ್ಯರ್ಥಿ ಕಾಂತೇಶಣ್ಣ ಎಂಬ ಪೇಜನ್ನು ಓಪನ್ ಮಾಡಿದ್ದಾರೆ. ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದರೆ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ದಯವಿಟ್ಟು ಕಾಂತೇಶ್ ...

Read More »

ಮಹಾನಗರಪಾಲಿಕೆಯ ಆಯುಕ್ತೆ ಚಾರುಲತಾ ಸೋಮಲ್ ವರ್ಗಾವಣೆ ಮಾಡದಂತೆ ಕಾಂಗ್ರೆಸ್ ಜೆ.ಡಿ.ಎಸ್ ಪಾಲಿಕೆ ಸದಸ್ಯರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

  ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜನಪರವಾಗಿ ದಕ್ಷ ಹಾಗೂ ನಿಷ್ಪಕ್ಷಪಾತವಾಗಿ ಸೇವೆಸಲ್ಲಿಸಿದ ಪಾಲಿಕೆ ಆಯುಕ್ತ ಚಾರುಲತಾ ಸೋಮನ್ ರವರ ವರ್ಗಾವಣೆಯನ್ನು ಖಂಡಿಸಿ ಇಂದು ಕಾಂಗ್ರೆಸ್ ಜೆಡಿಎಸ್ ಪಕ್ಷದ ಪಾಲಿಕೆ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಮಾಹಾನಗರಪಾಲಿಕೆ ಸದಸ್ಯ ರಮೇಶ್ ಹೆಗಡೆಯವರು. “ಸರ್ಕಾರ ದಿಢೀರನೆ ಈ ವರ್ಗಾವಣೆ ಮಾಡಿರುವುದು ಖಂಡನೀಯ. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರ ರಹಿತ ಪಾರದರ್ಶಕ ಅಧಿಕಾರವನ್ನು ನೀಡುವುದಾಗಿ ಹೇಳಿದ್ರು ಆದರೆ ಇಂತಹ ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡ್ತಾ ಇರೋದು ನೋಡಿದರೆ ಈ ಸರ್ಕಾರ ಭ್ರಷ್ಟಾಚಾರ ಪರವಾದ ಸರ್ಕಾರ ಎನಿಸುತ್ತಿದೆ.ಮುಖ್ಯಮಂತ್ರಿಗಳು ...

Read More »

ಅನಾಥರು ಹಾಗೂ ಬುದ್ದಿಮಾಂದ್ಯರೊಂದಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಜನ್ಮ‌ದಿನಾಚರಣೆ

ಶಿವಮೊಗ್ಗ: ತಮ್ಮ ಆತ್ಮೀಯರೊಂದಿಗೆ ಸೇರಿ ಜನ್ಮ ದಿನ‌ ಆಚರಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಅವರು ತಮ್ಮ ಜನ್ಮ‌ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಂಗಳವಾರ ಬೆಳಗ್ಗೆ ವಿದ್ಯಾನಗರದಲ್ಲಿರುವ ಆಶಾಕಿರಣ ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲಿ ಜನ್ಮ‌ದಿನ ಆಚರಿಸಿಕೊಂಡ ಸುಂದರೇಶ್ ಅವರು ಬಳಿಕ ವಿವೇಕಾನಂದ ಬಡಾವಣೆಯಲ್ಲಿರುವ ಜೀವನ ಸಂಜೆ ವೃದ್ಧಾಶ್ರಮದಲ್ಲಿ ವೃದ್ಧರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು. ನಂತರ ಕಾಂಗ್ರೆಸ್ ಕಚೇರಿಗೆ ಆಗಮಿಸಿ ತಮ್ಮ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸೇರಿ ಜನ್ಮ‌ದಿನ ಆಚರಿಸಿಕೊಂಡರು. ಬಳಿಕ ಗೋಪಾಳದ ಶಾರದದೇವಿ ಅಂದರ ವಿಕಾಸಕೇಂದ್ರ, ಆಲ್ಕೊಳದಲ್ಲಿರುವ ...

Read More »

ಆಯುಷ್ಮಾನ್ ಭಾರತ ಜಾಥಾಗೆ ಚಾಲನೆ

ಶಿವಮೊಗ್ಗ: ಆಯುಷ್ಮಾನ್ ಭಾರತ ಪಾಕ್ಷಿಕ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಗೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಇಂದು ಚಾಲನೆ ನೀಡಿದರು. ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿ ಅವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೂ ಸೂಕ್ತ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೆ ತರಲಾಗಿದ್ದು ಜನಸಾಮನ್ಯರಿಗೆ ತಲುಪುವಂತೆ ಅಧಿಕಾರಿಗಳು ಶ್ರಮಿಸಬೇಕು ಎಂದು ಸಂಸದ ...

Read More »

ಸರ್ಕಾರದಲ್ಲಿ ಸಿಎಂ ಪುತ್ರರ ಹಸ್ತಕ್ಷೇಪ ನಿರಾಕರಿಸಿದ ಬಿವೈಆರ್.

ಶಿವಮೊಗ್ಗ: ಸಿಎಂ ಯಡಿಯೂರಪ್ಪ ಅವರ ಸರ್ಕಾರದಲ್ಲಿ ತಮ್ಮ ಹಸ್ತಕ್ಷೇಪದ ಆರೋಪವನ್ನು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ನಿರಾಕರಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರ ಪುತ್ರನಾದರೂ ನಾನೊಬ್ಬ ಜನಪ್ರತಿನಿಧಿ. ಹಾಗೆಯೇ ವಿಜಯೇಂದ್ರ ಬಿಜೆಪಿ ಕಾರ್ಯಕರ್ತನಾಗಿ ದ್ದರಿಂದ ಸಹಜವಾಗಿಯೇ ಜನರು ಕೆಲಸ ಅಪೇಕ್ಷಿಸಿ ಬರುತ್ತಾರೆ. ನಾವು ಕಾರ್ಯಕರ್ತರಾಗಿ ಕೆಲಸ ಮಾಡುತ್ತೇವೆ ಅಷ್ಟೇ…. ಅಷ್ಟೇ ಹೊರತು ಪಡಿಸಿ ಅಧಿಕಾರ ದಲ್ಲಿ ಯಾವುದೇ ಹಸ್ತಕ್ಷೇಪ ಇಲ್ಲ ಎಂದರು. ಸುಪ್ರೀಂ ಕೋರ್ಟ್ ನಲ್ಲಿಂದು ಬಿಎಸ್ವೈ ಆಸ್ತಿ ದುಪ್ಪಟ್ಟು ಪ್ರಕರಣದ ಅರ್ಜಿ ವಿಚಾರಣೆ ವಿಚಾರ ನಡೆಯುತ್ತಿದ್ದು, ಕಾನೂನು ತನ್ನ ಕಾರ್ಯ ನಿರ್ವಹಿಸುತ್ತದೆ. ...

Read More »

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Crime Hosanagara JDS K S Eshwarappa madhu bangarappa M P Election MP election News NSUI police Sagara Shikaripura Shimoga shimoga district Shivammoga Shivamoga Shivamogga Soraba SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಿಗಂದೂರು

Recent Comments