ಹಳೆಯ ಜೈಲಿನ ಜಾಗದಲ್ಲಿ ವಿಜಯ ದಶಮಿ ಆಚರಿಸಲು ಈ ಬಾರಿ ಸಿದ್ಧತೆ ನಡೆಸಲಾಗಿದೆ. ನಗರದಲ್ಲಿ ವಿಜಯದಶಮಿ ಆಚರಿಸಲು ರಾಜ್ಯ ಸರ್ಕಾರಕ್ಕೆ 2 ಕೋಟಿರೂ. ಕೋರಲಾಗಿತ್ತು, ಸರ್ಕಾರ 1 ಕೋಟಿರೂಪಾಯಿ ಬಿಡುಗಡೆ ಮಾಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಕೆ.ಎಸ್. ಈಶ್ವರಪ್ಪ ತಿಳಿಸಿದರು..ಉತ್ಸವದಲ್ಲಿ 170 ದೇವರುಗಳು ಪಾಲ್ಗೊಳ್ಳಲು ತಲಾ 4 ಸಾವಿರರೂ.ಗಳನ್ನು ಪಾಲಿಕೆಯಿಂದ ನೀಡಲಾಗುತ್ತಿದೆ. ಈ ಬಾರಿಯೂ ಎಂದಿನಂತೆ ವಿಜೃಂಭಣೆಯಿಂದ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ. ಉಪ ಚುನಾವಣೆ ಎದುರಾಗಿದ್ದರಿಂದ ನಾವು ಅಂದುಕೊಂಡಂತೆ ದಸರಾ ಆಚರಣೆ ಸಾಧ್ಯವಾಗಿಲ್ಲ. ಆದರೂ ಪಾಲಿಕೆಯಿಂದ ಆಯೋಜಿಸಿರುವ ದಸರಾವನ್ನು ಆಕ್ಷೇಪಿಸುವುದಿಲ್ಲ ಎಂದರು ಹಾಗು ಈ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಮನವಿ ಮಾಡಿದರು

Recent Comments