ಶಿವಮೊಗ್ಗ: ಬಸ್ ಹಾಗೂ ಕಾರು ಮುಖಾಮುಖಿ ಢಿಕ್ಕಿಯಾಗಿ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಮುರುಘಾಮಠ ಕ್ರಾಸ್ ಬಳಿ ಘಟನೆ ನಡೆದಿದ್ದು, ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಖಾಸಗಿ ಬಸ್ ಸಾಗರದಿಂದ ಶಿವಮೊಗ್ಗ ಕಡೆಗೆ ಹಾಗೂ ಎರ್ಟಿಗಾ ಕಾರು ಶಿವಮೊಗ್ಗದಿಂದ ಸಾಗರ ಕಡೆಗೆ ತೆರಳುತ್ತಿತ್ತು. ಈ ವೇಳೆ ಮುರುಘಾಮಠ ಕ್ರಾಸ್ ಬಳಿ ಅಪಘಾತ ನಡೆದಿದ್ದು, ಬಸ್ಸು ಹಾಗೂ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಪ್ರಾಥಮಿಕ ಮಾಹಿತಿಯನುಸಾರ ಕಾರಿನಲ್ಲಿದ್ದವರು ದೊಡ್ಡಬಳ್ಳಾಪುರದವರು ಎನ್ನಲಾಗಿದ್ದು, ಮೃತರ ವಿವರ ...
Read More »Tag Archives: Accident
ಟಿಟಿ – ಜೀಪ್ ನಡುವೆ ಢಿಕ್ಕಿ- ದೇವರ ದರ್ಶನಕ್ಕೆ ಬಂದವರಿಗೆ ಆಘಾತ
ಶಿವಮೊಗ್ಗ: ಕೊಡಚಾದ್ರಿಗೆ ತೆರಳುತ್ತಿದ್ದ ಜೀಪ್ ಹಾಗೂ ಕೊಲ್ಲೂರಿಗೆ ತೆರಳುತ್ತಿದ್ದ ಟಿಟಿ ನಡುವೆ ಢಿಕ್ಕಿಯಾಗಿ ಹಲವರು ಗಾಯಗೊಂಡ ಘಟನೆ ನಿಟ್ಟೂರಿನಲ್ಲಿ ನಡೆದಿದೆ. ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಮರಕುಟಿಗ ಬಳಿ ಇಂದು ಬೆಳಿಗ್ಗೆ ಘಟನೆ ನಡೆದಿದ್ದು, 8 ಜನರು ಗಾಯಗೊಂಡಿದ್ದಾರೆ. ದೇವರ ದರ್ಶನಕ್ಕೆ ಬಂದವರಿಗೆ ಅಪಘಾತ: ಕೊಲ್ಲೂರು ಮೂಕಾಂಬಿಕೆಯ ದರ್ಶನ ಮುಗಿಸಿ, ಕೊಡಚಾದ್ರಿ ಪ್ರವಾಸಕ್ಕೆ 8 ಜನರು ಜೀಪ್ ನಲ್ಲಿ ತೆರಳುತ್ತಿದ್ದರು. ಇನ್ನೋಂಡೆದೆ ಶಿವಮೊಗ್ಗದಿಂದ ಟಿಟಿಯಲ್ಲಿ ಕೊಲ್ಲೂರು ಹಾಗೂ ಸಿಗಂದೂರು ದೇವಿಯ ದರ್ಶನಕ್ಕೆ ಹೊರಟ್ಟಿದ್ದರು. ಈ ನಡುವೆ ಮರಕುಟಿಗ ಬಳಿ ಅಪಘಾತ ನಡೆದಿದ್ದು, ಜೀಪ್ ...
Read More »ಬಸ್ ಹಾಗೂ ಬೈಕ್ ಢಿಕ್ಕಿ: ಇಬ್ಬರು ಯುವಕರು ಸಾವು
ಶಿವಮೊಗ್ಗ: ಬಸ್ ಹಾಗೂ ಬೈಕ್ ಢಿಕ್ಕಿಯಾಗಿ ಇಬ್ಬರು ಧಾರುಣವಾಗಿ ಮೃತಪಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ನಗರದ ಸರ್ಕ್ಯೂಟ್ ಹೌಸ್ ಸರ್ಕಲ್ ನಲ್ಲಿ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಬಸ್ ಹಾಗೂ ಬೈಕ್ ನಡುವೆ ಢಿಕ್ಕಿಯಾಗಿದ್ದು, ಬೈಕ್ ನಲ್ಲಿದ್ದ ಇಬ್ಬರು ಕೂಡ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವನನ್ನ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ. ಮೃತದೇಹಗಳನ್ನು ಮೆಗ್ಗಾನ್ ಶವಗಾರಕ್ಕೆ ಶಿಫ್ಟ್ ಮಾಡಲಾಗಿದ್ದು, ಮೃತರ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ. ಘಟನಾ ಸ್ಥಳಕ್ಕೆ ಪೂರ್ವ ...
Read More »ಸಕ್ರೆಬೈಲು ಬಳಿ ಧಗಧಗ ಹೊತ್ತಿ ಉರಿದ ಖಾಸಗಿ ಬಸ್
ಶಿವಮೊಗ್ಗ: ಮಂಗಳೂರಿನಿಂದ ದಾವಣಗೆರೆಗೆ ಚಲಿಸುತ್ತಿದ್ದ ಖಾಸ ಬಸ್ ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಆನೆ ಬಿಡಾರದ ಬಳಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಚಾಲಕ ಮತ್ತು ಬಸ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಮಂಗಳೂರಿನಿಂದ ರಾತ್ರಿ ಹೊರಟಿದ್ದ ಖಾಸಗಿ ಬಸ್ ನಲ್ಲಿ 18 ಜನ ಪ್ರಯಾಣಿಕರಿದ್ದರು. ಬೆಳಗಿನ ಜಾವ ಸಕ್ರೆಬೈಲು ಬಳಿ ಬರುತ್ತಿದ್ದಂತೆ ತಾಂತ್ರಿಕ ದೋಷದಿಂದ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಪ್ರಯಾಣಿಕರನ್ನ ಕೆಳಗೆ ಇಳಿಸಿದ ಬಸ್ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿಗೆ ...
Read More »Accident : ಮರಕ್ಕೆ ಡಿಕ್ಕಿ ಹೊಡೆದು,ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು
Cnewstv.in /18.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಮರಕ್ಕೆ ಡಿಕ್ಕಿ ಹೊಡೆದು,ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು ಶಿವಮೊಗ್ಗ : ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಸ್ಕೋಡಾ ಕಂಪನಿಯ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸಕ್ರೆಬೈಲ್ ಸಮೀಪ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ತಕ್ಷಣವೇ ಕಾರಿಗೆ ಬೆಂಕಿ ಹತ್ತಿಕೊಂಡು ಧಗ ಧಗನೇ ಉರಿಯಲಾರಂಭಿಸಿದೆ. ಕಾರಿನಲ್ಲಿ ಮೂರು ಜನ ಪ್ರಯಾಣಿಸುತ್ತಿದ್ದು,ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಾಯಗಳಾಗಿದ್ದು, ಅವರಿಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ. ಅದರೆ ಕಾರ್ ಮಾತ್ರ ನಡುರಸ್ತೆಯಲ್ಲೇ ಸುಟ್ಟು ...
Read More »ತಾಳಗುಪ್ಪದಲ್ಲಿ ಸೈಕಲ್ ಸವಾರ ಸ್ಥಳದಲ್ಲೇ ಸಾವು.
ಶಿವಮೊಗ್ಗ: ಸೈಕಲ್ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿಯಾಗಿ ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ಘಟನೆ ನಡೆದಿದ್ದು, ಅಪಘಾತದ ರಭಸಕ್ಕೆ ಸೈಕಲ್ ಸವಾರ ಅಣ್ಣಪ್ಪ ತಿರುಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ- 206 ರಲ್ಲಿ ತಾಳಗುಪ್ಪದ ಬಳಿ ನಡೆದ ಘಟನೆ ನಡೆದಿದ್ದು, ತಾಳಗುಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ಸಹ ದಾಖಲಾಗಿದೆ.
Read More »ಆಯತಪ್ಪಿ ಬಾವಿಗೆ ಬಿದ್ದು ಯುವತಿ ಸಾವು.
ಶಿವಮೊಗ್ಗ:ಆಯತಪ್ಪಿ ಬಾವಿಗೆ ಬಿದ್ದು ನರ್ಸಿಂಗ್ ವಿದ್ಯಾರ್ಥಿನಿಯೋರ್ವಳು ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದ ಅಂಜಲಿ(19) ಮೃತ ದುರ್ದೈವಿ. ದನಗಳಿಗೆ ನೀರು ಕುಡಿಸಲು ಎಂದಿನಂತೆಯೇ ಬೆಳಿಗ್ಗೆ ಬಾವಿಗೆ ಹೋಗಿದ್ದ ಅಂಜಲಿ, ನೀರು ಸೇದುವಾಗ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾಳೆ. ನೀರು ತರಲು ಹೋಗಿದ್ದ ಅಂಜಲಿ ಬಾರದಿದ್ದನ್ನು ಗಮನಿಸಿ, ಮನೆಯವರು ಬಾವಿಯ ಬಳಿಗೆ ಬಂದು ಪರಿಶೀಲಿಸಿದಾಗ ಅಂಜಲಿ ಬಾವಿಗೆ ಬಿದ್ದಿರುವುದು ಗಮನಕ್ಕೆ ಬಂದಿದೆ. ತ್ಯಾಗರ್ತಿ ಗ್ರಾಮಕ್ಕೆ ಸಾಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಈ ಸಂಬಂಧ ಪ್ರಕರಣ ಸಹ ದಾಖಲಾಗಿದೆ.
Read More »ಮರಕ್ಕೆ ಕಾರ್ ಡಿಕ್ಕಿ ಸ್ಥಳದಲ್ಲೇ ಓರ್ವನ ಸಾವು.
ಶಿವಮೊಗ್ಗ : ಶಿವಮೊಗ್ಗ ದಿಂದ N R ಪುರಕ್ಕೆ ತೆರಳುತ್ತಿದ್ದ ಸೆಲೆರಿಯೋ ಕಾರು ಕಾಚಿನಕಟ್ಟೆಯ ಬಳಿ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಹೊಡೆದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರಲ್ಲಿ ಒಬ್ಬ ಸಾವನ್ನಪ್ಪಿದ್ದಾರೆ. ಉಳಿದ ಮೂವರ ಸ್ಥಿತಿ ಗಂಭೀರವಾಗಿದೆ. ಅಪಘಾತದಿಂದಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರನ್ನ ಕಟ್ ಮಾಡುವ ಮೂಲಕ ಕಾರಿನಲ್ಲಿದ್ದ ಜನರನ್ನು ಹೊರಗೆ ತೆಗೆಯಲಾಯಿತು. ಇವರನ್ನೆಲ್ಲ ಎನ್ಆರ್ ಪುರ ನಿವಾಸಿಗಳು ಎಂದು ಹೇಳಲಾಗಿದೆ. ಆದರೆ ಯಾವುದೇ ನಿಖರವಾದ ಮಾಹಿತಿಗಳು ದೊರೆತಿಲ್ಲ. ತುಂಗಾ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ವಿದ್ಯಾನಗರದಲ್ಲಿ ಭೀಕರ ಅಪಘಾತ: ಇಬ್ಬರು ಬೈಕ್ ಸವಾರರ ಸಾವು
ಶಿವಮೊಗ್ಗ: ಇಂದು ಬೆಳ್ಳಗೆ ವಿದ್ಯಾನಗರದ ದುರ್ಗಮ್ಮ ದೇವಾಲಯದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ನಡೆದಿದೆ. ರಸ್ತೆ ಕ್ರಾಸ್ ಮಾಡುತ್ತಿದ್ದ ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಬೈಕ್’ನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ. ಮೃತಪಟ್ಟ ಯುವಕರು ಗೊಂಧಿಚಟ್ನಳ್ಳಿಯವರು ಎಂದು ಹೇಳಲಾಗಿದೆ.
Read More »ಬೈಕ್ ಲಾರಿ ಮುಖಾಮುಖಿ ಢಿಕ್ಕಿ ಇಬ್ಬರು ಸ್ಥಳದಲ್ಲೇ ಸಾವು
ಸಾಗರ : ತಾಳಗುಪ್ಪದ ಚೂರಿಕಟ್ಟೆ ಬಳಿ ಮೀನಿನ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಬೈಕ್ ಸವಾರರು ಸಿದ್ಧಾಪುರ ತಾಲ್ಲೂಕಿನ ಹೊಸೂರು ಗ್ರಾಮದವರು. ಸಂದೀಪ್(22),ವಿನಾಯಕ(25) ಮೃತ ಯುವಕರು. ಸಾಗರ ಗ್ರಾಮಾಂತರ ಪೋಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.. ಇಮ್ರಾನ್ ಸಾಗರ್ Contact For advertisement 7676236690
Read More »
Recent Comments