Monthly Archives: December 2019

ಕುವೆಂಪು ಆಶಿಸಿದ ಭಾರತ ಉಳಿಸಿಕೊಳ್ಳೋಣ: ಬಸವ ಮರಳಸಿದ್ದ ಸ್ವಾಮೀಜಿ

  ಶಿವಮೊಗ್ಗ: ಭಾರತದ ಬಲವೇ ಅನೇಕತೆಯಲ್ಲಿ ಏಕತೆ ಎಂಬುದಾಗಿದೆ. ಕುವೆಂಪು ಅವರಂಥ ಮಹಾಕವಿಗಳು ಹೇಳಿದಂತೆ ಹಿಂದೂ, ಕ್ರೈಸ್ತ, ಮುಸಲ್ಮಾನ ಪಾರಸಿಕ ಜೈನರುದ್ಯಾನವೆಂಬುದೇ ಭಾರತದ ಹೆಗ್ಗಳಿಕೆ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಶರಣರು ಹೇಳಿದರು‌. ನಗರದ ಪತ್ರಿಕಾ ಭವನದಲ್ಲಿ ಕುವೆಂಪು ಜನ್ಮದಿನದ ಅಂಗವಾಗಿ ನಡೆದ ಸಂವಿಧಾನ ಪ್ರಸ್ತಾವನೆಯ ಓದು, ಕುವೆಂಪು ಗೀತಗಾಯನ, ನಾಡಗೀತೆ ವಾಚನ ಮತ್ತು ಸರ್ವಧರ್ಮ ಸಹಭೋಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲ ಮತ-ಧರ್ಮ, ತತ್ವ, ಸಿದ್ಧಾಂತಗಳಿಗೂ ಈ ದೇಶ ನೆಲೆಯಾಗಿದೆ. ಎಲ್ಲವನ್ನೂ ಪೊರೆದಿದೆ. ಎಲ್ಲರ ಸಹಬಾಳ್ವೆಯ, ಸಾಮರಸ್ಯದಲ್ಲೇ ಎಲ್ಲರ ಹಿತವಿದೆ. ಏಳಿಗೆ ...

Read More »

ಅವನೇ ಶ್ರೀಮನ್ ನಾರಾಯಣ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ ?? ಚಿತ್ರರಂಗವೇ ಶಾಕ್ ಆಗಿದೆ !!!

ಕನ್ನಡದ KGF ಚಿತ್ರದ ನಂತರ ಅಮರಾವತಿ ಅನ್ನುವ ಕಾಲ್ಪನಿಕ ಪ್ರದೇಶದ ಒಳಗೆ ಪ್ರೇಕ್ಷರನ್ನ ಕರೆದುಕೊಂಡು ಹೋಗುವ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ಇಡೀ ಕರ್ನಾಟಕದಾದ್ಯಂತ ಸುಮಾರು 500 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ತೆರೆಕಂಡಿದೆ. ಇನ್ನು ಈ ಚಿತ್ರ ಫ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ಪಂಚ ಭಾಷೆಗಳಲ್ಲಿ ತೆರೆಕಂಡಿದ್ದು ಈಗ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿ ಎಲ್ಲಾ ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನ ಕಾಣುತ್ತಿದೆ. ಇನ್ನು ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ರಾಜ್ಯದಲ್ಲಿ ಬಹಳ ಒಳ್ಳೆಯ ಪ್ರಶಂಸೆ ಸಿಕ್ಕಿದ್ದು ಜನರು ಚಿತ್ರವನ್ನ ...

Read More »

ಒಂದೇ ಕಡೆ 50 ದೇವತೆಗಳ ಸಮಾಗಮ ಸಂಭ್ರಮ

  ನಾಳೆ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಶಕ್ತಿ ದೇವತೆಗಳ ಸಮಾಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಶಕ್ತಿ ದೇವತೆಗಳ ಸಮಾಗಮ ಸಮಿತಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಪ್ರತಿ ವರ್ಷ ಎಳ್ಳಮವಾಸೆ ದಿನದಂದು ನಡೆಯುತ್ತಿತ್ತು, ಅದೇ ಈ ಬಾರಿ 21ನೆ ವರ್ಷದ ಆಚರಣೆಯಲ್ಲಿ ಸೂರ್ಯಗ್ರಹಣದ ಪ್ರಯುಕ್ತ ನಾಳೆ ಬೆಳಗ್ಗೆ ಸುಮಾರು 11 ಗಂಟೆಗೆ ನಗರದ 50 ದೇವತೆಗಳ ಸಮಾಗಮವಿದ್ದು, ಮದ್ಯಾಹ್ನ 12:30 ರಿಂದ 1:00 ಗಂಟೆಯ ಸಮಯದಲ್ಲಿ ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ,ಅನ್ನ ಸಂತರ್ಪಣೆ ಕಾರ್ಯಕ್ರಮವಿರುತ್ತದೆ.. ಸಂಜೆ ಸಂಜೆ ಸಾವಿರಾರು ಮಾತೆಯರು ...

Read More »

ಆಶ್ರಯ ಕಚೇರಿಯ ಎಫ್.ಡಿ.ಎ ಎಸಿಬಿ ಬಲೆಗೆ

ಶಿವಮೊಗ್ಗ: ಮಹಾನಗರ ಪಾಲಿಕೆ ಆಶ್ರಯ ಕಚೇರಿಯಲ್ಲಿ ಎಫ್.ಡಿ.ಎ ಆಗಿ ಕಾರ್ಯನಿರ್ವಹಿಸುವ ಸುನೀಲ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ನಿವೇಶನ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಮಧ್ಯಾಹ್ನ ದೂರುದಾರ ನಾಗರಾಜ್ ಅವರಿಂದ ಎಫ್.ಡಿ.ಎ ಸುನೀಲ್ ತನ್ನ ಮನೆಯಲ್ಲಿ 10.000 ರೂ.ಹಣ ಪಡೆಯುತ್ತಿದ್ದಾಗ ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹದ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಕಾರ್ಯಾಚರಣೆಯಲ್ಲಿ ಡಿ.ವೈ.ಎಸ್.ಪಿ ಮನೋಜ್,ಇನ್ಸ್ ಪೆಕ್ಟರ್ ಗಳಾದ ತಿಪ್ಪೇಸ್ವಾಮಿ, ವಿರೇಂದ್ರ,ಸಿಬ್ಬಂದಿಗಳಾದ ವಸಂತ್,ನಾಗರಾಜ್,ರಘುನಾಯ್ಕ್,ಯೇಗೇಶಪ್ಪ,ಹರೀಶ್, ಶ್ರೀನಿವಾಸ ಪಾಲ್ಗೊಂಡಿದ್ದರು. ವರದಿ : ಇಮ್ರಾನ್ ಸಾಗರ್

Read More »

ನಾಗರಹಾವಿನೊಂದಿಗೆ ಚೆಲ್ಲಾಟ ತಂದ ಸಂಕಟ.

  ನಾಗರಹಾವಿನೊಂದಿಗೆ ಚೆಲ್ಲಾಟವಾಡಲು ಹೋಗಿದ್ದ ಸ್ನೇಕ್ ಡ್ಯಾನಿ ನಾಗರಹಾವಿನ ಕಡಿತಕ್ಕೆ ಒಳಗಾಗಿದ್ದಾರೆ. ಇಂದು ಸಂಜೆ ಭದ್ರಾವತಿಯ ಹೊಸಮನೆಯಲ್ಲಿ ಸ್ನೇಕ್ ಡ್ಯಾನಿ ನಾಗರಹಾವೊಂದನ್ನು ಹಿಡಿದ್ದಾರೆ. ಅದರ ಹೆಡಗೆ ಮುತ್ತಿಕ್ಕಲು ಹೋದಾಗ ಡ್ಯಾನಿಯ ತುಟಿಗೆ ನಾಗರ ಹಾವು ಕಚ್ಚಿದ್ದು, ಗಂಭೀರವಾಗಿ ಗಾಯವಾಗಿದ್ದು ಸ್ನೇಕ್ ಡ್ಯಾನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. https://youtu.be/S7nQBuPobpk https://youtu.be/S7nQBuPobpknbsp;

Read More »

ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಆಫರ್

ಶಿವಮೊಗ್ಗ: ಸರ್ಕಾರಿ ನೌಕರರಿಗೆ ಬಂಪರ್ ಆಫರ್ ನೀಡಲು ರಾಜ್ಯ ಸರ್ಕಾರಿ ನೌಕರರ ಸಂಘ ಮುಂದಾಗಿದೆ. ಇದುವರೆಗೆ ಸೈನಿಕರಿಗೆ ಮಿಲಿಟರಿ ಕ್ಯಾಂಟೀನ್, ಪೊಲೀಸರಿಗೆ ಪೊಲೀಸ್ ಕ್ಯಾಂಟೀನ್ ಮೂಲಕ ರಿಯಾಯಿತಿ ದರದಲ್ಲಿ ದಿನಬಳಕೆ ವಸ್ತುಗಳನ್ನು ನೀಡಲಾಗಿತ್ತು. ಇದೇ ಮಾದರಿಯಲ್ಲಿ ಸರ್ಕಾರಿ ನೌಕರರ ಕ್ಯಾಂಟೀನ್ ಆರಂಭಿಸಿ ಸರ್ಕಾರಿ ನೌಕರರಿಗೆ ಶೇಕಡಾ 10 ರಿಂದ 40ರಷ್ಟು ರಿಯಾಯಿತಿ ದರದಲ್ಲಿ ದಿನಬಳಕೆ ವಸ್ತುಗಳನ್ನು ನೀಡಲು ಸರ್ಕಾರಿ ನೌಕರರ ಸಂಘ ತೀರ್ಮಾನಿಸಿದೆ. ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿರುವ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಪ್ರಯೋಗಿಕವಾಗಿ ಆರಂಭದಲ್ಲಿ ಶಿವಮೊಗ್ಗದಲ್ಲಿ ...

Read More »

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಿಕ್ತು ನ್ಯಾಷನಲ್ ಅವಾರ್ಡ್

  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ಕಳೆದ ಆಗಸ್ಟ್ ನಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ಅವರು ಗಡಿನಾಡಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸಲು ಹೋರಾಡುವ ಮಕ್ಕಳ ಕಥೆಯನ್ನು ಅದ್ಭುತವಾಗಿ ಚಿತ್ರ ತಯಾರಿಸಿದ್ದರು. ಇದಕ್ಕೆ ಪ್ರೇಕ್ಷಕರು ಫುಲ್ ಖುಷಿಯಾಗಿದ್ದರು. ಇದು ದೆಹಲಿಯಲ್ಲಿ ನಡೆದ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಢು ರವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ನೀಡಿ ...

Read More »

ಮಂಗಳೂರು ಘಟನೆ -ಸಿಓಡಿ ತನಿಖೆಗೆ ಆದೇಶ

  ಶಿವಮೊಗ್ಗ: ಮಂಗಳೂರಿನಲ್ಲಿ ನಡೆದ ಘಟನೆಯನ್ನು ನ್ಯಾಯಾಂಗ ಮತ್ತು ಸಿಓಡಿ ತನಿಖೆಗೆ ವಹಿಸಲು ಆದೇಶಿಸ ಲಾಗಿದೆ ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಹೆಲಿಪ್ಯಾಡ್‌ನಲ್ಲಿ ಇಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕೇರಳದಿಂದ ಬಂದವರು ಪ್ರತಿಭಟನೆ ನೆಪದಲ್ಲಿ ಹಿಂಸಾಚಾರ ನಡೆಸಿ ಗಲಭೆಗೆ ಕಾರಣರಾಗಿದ್ದಾರೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ತಿಳಿದು ಕೊಳ್ಳುವ ಪ್ರಯತ್ನ ಮಾಡದೇ ಹಿಂಸಾಚಾರನಡೆಸಲಾಗಿದೆಎಂದುದೂರಿದರು. ಸಾವಯವ ಕೃಷಿಗೆ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಸಾವಯವ ಕೃಷಿ ಉತ್ತೇಜನಕ್ಕಾಗಿ ಹಲವು ಯೋಜನೆ ಕೈಗೊಳ್ಳಲಾಗಿದೆ. ಪೊಲೀಸರ ವೇತನ ಭತ್ಯೆ ಹೆಚ್ಚಳಕ್ಕೆ ...

Read More »

ಸುಭಿಕ್ಷಾ ಲೋಕಾರ್ಪಣೆ – ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

  ಶಿವಮೊಗ್ಗ : ಮುಂದಿನ ಬಜೆಟ್ ನಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಕೃಷಿ ವಲಯದ ಬಲವರ್ಧನೆಗೆ ಹಾಗೂ ನೀರಾವರಿ ಕ್ಷೇತ್ರದ ಬಲವರ್ಧನೆಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು. ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತ ಕುಟುಂಬಕ್ಕೆ ವಾರ್ಷಿಕ ಆರು ಸಾವಿರ ರೂ.ಗಳ ಜೊತೆಗೆ ರಾಜ್ಯ ಸರಕಾರ ಹೆಚ್ಚುವರಿಯಾಗಿ 4ಸಾವಿರ ರೂ. ಗಳ ಆರ್ಥಿಕ ಸಹಾಯವನ್ನು ಒದಗಿಸುತ್ತಿದೆ ಇದಕ್ಕಾಗಿ ರಾಜ್ಯ ಸರಕಾರ 2,200 ಕೋಟಿ ರೂ ಅನುದಾನವನ್ನು ನಿಗದಿಪಡಿಸಿದೆ. ರೈತರಿಗೆ ಉತ್ತೇಜನ ನೀಡಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಪ್ರಧಾನಮಂತ್ರಿ ...

Read More »

ಮಧ್ಯವರ್ತಿಗಳನ್ನು ನಂಬಿ ಮೋಸ ಹೋಗಬೇಡಿ: ತಹಸೀಲ್ದಾರ್ ಗಿರೀಶ್

ಶಿವಮೊಗ್ಗ: ಕಳೆದ ನಾಲ್ಕು ತಿಂಗಳ ಹಿಂದೆ ಬಂದ ನೆರೆಯಲ್ಲಿ ಮನೆ ಕಳೆದುಕೊಂಡವರಿಗೆ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ನಿಂದ ಸೂಕ್ತ ಪರಿಹಾರ ನೀಡಲಾಗುತ್ತದೆ. ಸಂತ್ರಸ್ತರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳನ್ನು ನಂಬಿ ಮೋಸ ಹೋಗಬಾರದು ಎಂದು ತಹಸೀಲ್ದಾರ್ ಗಿರೀಶ್ ಮನವಿ ಮಾಡಿದ್ದಾರೆ. ಕೆಲ ಸಂತ್ರಸ್ತರ ದಾಖಲೆಗಳು ಸರಿ ಇಲ್ಲದಿರುವುದರಿಂದ ಅವರಿಗೆ ಪರಿಹಾರ ಬಂದಿಲ್ಲ. ನಮ್ಮ ಪಕ್ಕದ ಮನೆಯವರಿಗೆ ಪರಿಹಾರ ಬಂದಿದೆ. ಆದರೆ ನಮಗೆ ಪರಿಹಾರ ಬಂದಿಲ್ಲ ಎಂದು ಕೆಲ ಸಂತ್ರಸ್ಥರು ತಿಳಿದುಕೊಂಡಿದ್ದಾರೆ. ಈ ರೀತಿಯ ಸಂತ್ರಸ್ಥರು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡರೆ ಪರಿಹಾರ ಸಿಕ್ಕೇ ಸಿಗುತ್ತದೆ. ಅದನ್ನು ...

Read More »

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments