Cnewstv / 28.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ವಿಶ್ವಮಾನವರೇ ಇಲ್ಲದ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮ…
ಶಿವಮೊಗ್ಗ : ಶಿವಮೊಗ್ಗ ಒಂದು ಐತಿಹಾಸಿಕ ಕ್ಷಣಕ್ಕೆ ಕಾರಣವಾಗಿತ್ತು. ನೂತನ ಶಿವಮೊಗ್ಗ ವಿಮಾನ ನಿಲ್ದಾಣದವನ್ನು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಉದ್ಘಾಟನೆಗೊಳಿಸಿದರು. ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ಸೇರಿದಂತೆ ಹಲವಾರು ಕಡೆಯಿಂದ ಸಹಸ್ರಾರು ಮಂದಿ ಆಗಮಿಸಿದ್ದರು ಐತಿಹಾಸಿಕಾಕ್ಷಣವನ್ನ ಕಣ್ತುಂಬಿ ಕೊಂಡರು.
ಈ ಕಾರ್ಯಕ್ರಮಕ್ಕಾಗಿ ಎಲ್ಲೆಡೆ ಫ್ಲೆಕ್ಸ್ ಗಳನ್ನ ಹಾಕಲಾಗಿತ್ತು ಇನ್ನು ವಿಮಾನ ನಿಲ್ದಾಣಕ್ಕೆ ಹೋಗುವ MRS circle ನಿಂದ ಎರ್ ಪೂಟ್ ಮುಂಭಾಗದ ತನಕ ರಸ್ತೆಯ ಎಡ ಮತ್ತು ಬಲಭಾಗಗಳಲ್ಲಿ ನೂತನ ವಿಮಾನ ನಿಲ್ದಾಣಕ್ಕೆ ಶುಭಾಶಯಗಳು ಅಣ್ಣ ಕೂರುವಂತಹ ಸಾಕಷ್ಟು ಫ್ಲೆಕ್ಸ್ ಗಳನ್ನ ಹಾಗೆಯೇ ರಾಷ್ಟ್ರ ರಾಜ್ಯ ಸ್ಥಳೀಯ ನಾಯಕರಗಳ ಫ್ಲೆಕ್ಸ್ ಗಳನ್ನು ನಾವು ನೋಡಿದ್ವಿ..
ಆದ್ರೆ ಇದೆಲ್ಲದರ ನಡುವೆ ಐತಿಹಾಸಿಕ ಕ್ಷಣಕ್ಕೆ ಕಾರಣವಾದಂತ ವಿಶ್ವ ಮಾನವನನ್ನೇ ನಾವಿಲ್ಲೊ ಮರೆತೇವು ಅಂತ ಅನ್ಸುತ್ತೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಈಗಾಗಲೇ ವಿಶ್ವಮಾನವ ಕುವೆಂಪು ಅವರ ಹೆಸರು ಅಂತಿಮ ಅಂತ ಹೇಳಲಾಗುತ್ತಿದೆ ಕಾರ್ಯಕ್ರಮದಲ್ಲಿ ಕುವೆಂಪು ಅವರ ಒಂದೇ ಒಂದು ಭಾವಚಿತ್ರವನ್ನು ಕೂಡ ನಾವು ನೋಡಲಿಲ್ಲ..
ವಿಮಾನ ನಿಲ್ದಾಣದ ಮಾರ್ಗದ ಉದ್ದಕ್ಕೂ ಸ್ಥಳೀಯ ಬಿಜೆಪಿ ನಾಯಕರ ಫ್ಲೆಕ್ಸ್ ಗಳು ರಾರಾಜಿಸುತ್ತಿದ್ದವು. ರಾಷ್ಟ್ರ ರಾಜ್ಯ ಜಿಲ್ಲಾ ಹಾಗೂ ಸ್ಥಳೀಯ ಮುಖಂಡರುಗಳು ಓಲೈಕೆ ಇದ್ದ ಈ ಫ್ಲೆಕ್ಸ್ ಗಳಲ್ಲಿ ಕೂಡ ಕುವೆಂಪು ಕಾಣಲಿಲ್ಲ. ಈ ಬಿಜೆಪಿ ನಾಯಕರಿಗೆ ಪಕ್ಷದ ಹಿರಿಯ ನಾಯಕರನ್ನು ಮೆಚ್ಚಿಸುವುದೇ ಮುಖ್ಯವಾಗಿತ್ತೇ ಹೊರತು ರಾಷ್ಟ್ರಕವಿ ಕುವೆಂಪು ಅವರ ಸ್ಮರಣೆ ಮುಖ್ಯವಾಗಲಿಲ್ಲ ಎಂಬುದು ದುರಂತವೇ ಸರಿ. ಕಾರ್ಯಕ್ರಮದ ಜವಾಬ್ದಾರಿ ಹೊತ್ತಂತಹ ಜಿಲ್ಲಾಡಳಿತ ಕೂಡ ಸರ್ವ ಜನಾಂಗದ ಶಾಂತಿಯ ತೋಟ ಎಂದು ಸಾರಿದ, ವಿಶ್ವಮಾನವ ಸಂದೇಶ ನೀಡಿದ ಕುವೆಂಪುರವರನ್ನೇ ಮರೆತಿದ್ದು ವಿಪರ್ಯಾಸ.
ಒಟ್ಟಿನಲ್ಲಿ ಕುವೆಂಪು ವಿಮಾನ ನಿಲ್ದಾಣದಲ್ಲಿ ಕುವೆಂಪು ಅವರೇ ನಿರ್ಲಕ್ಷ್ಯಕ್ಕೆ ಒಳಗಾದರು ಎಂಬುದು ಗಮನಿಸಬೇಕಾದ ಅಂಶ..
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments