ಶಿವಮೊಗ್ಗ ನಗರಕ್ಕೆ ಆಗಮಿಸುವಂತಹ ಮುಖ್ಯಮಂತ್ರಿಗಳಿಗೆ ವೈಯಕ್ತಿಕವಾಗಿ ಹಾಗೂ ಶಿವಮೊಗ್ಗ ಜನತೆಯ ಪರವಾಗಿ ಸ್ವಾಗತವನ್ನು ಕೋರಿದ ಈಶ್ವರಪ್ಪನವರು, ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಶಿವಮೊಗ್ಗದಿಂದ ಹೋಗುವುದರೊಳಗೆ ಉತ್ತರ ನೀಡಲಿ ಎಂದರು.
*ರಾಜ್ಯಾದ್ಯಂತ ಪ್ರಮುಖ ನಗರಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ತಿಂಗಳುಗಳೇ ಕಳೆದರೂ ಇನ್ನೂ ಮೇಯರ್ ಉಪ ಮೇಯರ್ ಚುನಾವಣೆ ನಡೆದಿಲ್ಲ ಆದಷ್ಟು ಬೇಗ ಮೇಯರ್ ಉಪಮೇಯರ್ ಚುನಾವಣೆಯನ್ನು ನಡೆಸುವಂತೆ ಕೋರಲಾಗಿದೆ.
*ವಿವಿಧ ಕಾರ್ಮಿಕರಿಗೆ ವಸತಿ ಕಲ್ಪಿಸಲು ಆದಾಯ ಮಿತಿ ಷರತ್ತನ್ನು ಸಡಿಲಗೊಳಿಸಿ, ಇಲ್ಲದಿದ್ದರೆ ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ನಿಗದಿಸಲಾಗಿರುವ ವಾರ್ಷಿಕ ಆದಾಯ ಮಿತಿಯ ಷರತ್ತಿನಿಂದಾಗಿ ನಗರದ ಬಹುಪಾಲು ಕುಟುಂಬಗಳು ವಸತಿ ರಹಿತವಾಗಿಯೇ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ .
*ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿ ಎರಡು ವರ್ಷಗಳು ಕಳೆದಿದೆ. ಈವರೆಗೆ ಶಿವಮೊಗ್ಗ ನಗರಕ್ಕೆ 210 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದೆ ಆದರೆ ಕೇವಲ ಅಂದಾಜು 4 ಕೋಟಿ ಅನುದಾನ ಮಾತ್ರ ಬಳಕೆಯಾಗಿದೆ ಹೀಗಾಗಿ ಕೂಡಲೇ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಬೇಕು. ಇಲ್ಲವಾದರೆ ಸ್ಮಾರ್ಟ್ ಸಿಟಿ ಯೋಜನೆಗಳು ಅನುಷ್ಠಾನಗೊಳ್ಳುವಲ್ಲಿ ವಿಫಲ ಹಾಗೂ ವಿಳಂಬವಾಗಬಹುದು.
*ಮುಖ್ಯಮಂತ್ರಿಯಾದವರು, ಸಾಯುವ ಹೇಳಿಕೆ ನೀಡಬಾರದು.ಇಸ್ರೇಲ್ ಗೆ ಹೋದಾಗಲೇ ನಾನು ಸಾಯಬೇಕಿತ್ತು ಎಂದು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ವೈಯಕ್ತಿಕವಾಗಿ ನನಗೆ ಬಹಳ ನೋವಾಗಿದೆ. ರೈತರ ಸಾಲ ಮನ್ನಾ ಮಾಡಿ, ಇದರಿಂದ ರಾಜ್ಯದ ರೈತರ ಆಶೀರ್ವಾದ ಸಿಗಲಿದೆ. ಪದೇ ಪದೇ ಸಾಯುವ ಹೇಳಿಕೆ ನೀಡುವ ಬದಲಾಗಿ ರಾಜ್ಯದ ಜನರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಇನ್ನೂ ಮೂವತ್ತು ವರ್ಷ ಅವರು ಬದುಕಲಿ. ಒಳ್ಳೆಯ ಆಡಳಿತ ನೀಡಲಿ ಎಂದು ಈಶ್ವರಪ್ಪ ಆಶಿಸಿದರು.
*ಹೆಣ್ಣುಮಕ್ಕಳ ಬಗ್ಗೆ ಏಕವಚನದಲ್ಲಿ ಹಗುರವಾಗಿ ಮಾತನಾಡಬಾರದು. ಹೆಣ್ಣುಮಕ್ಕಳಿಗೆ ತಾಯಿ ಸ್ಥಾನ ನೀಡಿದ್ದೇವೆ.
ಜಾರಕಿಹೊಳಿ ಸಹೋದರರು, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ, ಕಾಲು ಕಸ ಎಂದಿರುವುದು ಸರಿಯಲ್ಲ, ಅದೇರೀತಿ ಮಾಜಿ ಸಿಎಂ ಸಿದ್ಧರಾಮಯ್ಯ, ಶೋಭಾ ಕರಂದ್ಲಾಜೆ ವಿರುದ್ಧ ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯದ ಸಮನ್ವಯ ಸಮಿತಿ ಅಧ್ಯಕ್ಷರಿಗೆ ಹಾಗೂ ಶಾಸಕರಿಗೆ, ಸರಿಯಾಗಿ ವರ್ತಿಸುವಂತೆ ಆದೇಶ ನೀಡಬೇಕು ಎಂದು ಈಶ್ಚರಪ್ಪನವರು ಹೇಳಿದರು..
C News TV Kannada News Online in cnewstv