ಶಿವಮೊಗ್ಗ : ಟಿಪ್ಪು ನಗರದಲ್ಲಿ 15 ದಿನದ ನವಜಾತ ಶಿಶುವನ್ನು ಮಾರಾಟ ಮಾಡಲು ಮುಂದಾಗಿದ್ದ ಆರೋಪಿಗಳನ್ನು ತುಂಗಾ ನಗರ ಪೊಲೀಸ್ ಠಾಣೆಯ ಪೋಲಿಸರು ಹಾಗೂ ಮಕ್ಕಳ ಸಹಾಯವಾಣಿಯ ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ಲಕ್ಷದ 50 ಸಾವಿರ ರೂಪಾಯಿಗೆ ಮಗುವನ್ನು ಮಾರಟ ಮಾಡಲು ಯತ್ನಿಸಿದ್ದ ಶೈಲ, ಸುಮಾ, ತುಳಸಿ, ಉಷಾ ಹಾಗೂ ಷಣ್ಮುಗ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಶ್ರೀನಿವಾಸ್ ಮತ್ತು ಉಷಾ ದಂಪತಿಗಳಿಗೆ ಕಳೆದ 15 ದಿನಗಳ ಹಿಂದೆ ಗಂಡು ಮಗುವಾಗಿದೆ. ಬಡತನದ ಹಿನ್ನೆಲೆಯಲ್ಲಿ ಈ ಮಗುವನ್ನು ನೋಡಿಕೊಳ್ಳಲು ಕಷ್ಟವಾಗಿದ್ದು ಒಂದು ಒಳ್ಳೆಯ ...
Read More »Monthly Archives: July 2020
4ಲಕ್ಷ ಆಯುರ್ವೇದಿಕ್ ಕಿಟ್ ವಿತರಣೆಗೆ ಚಾಲನೆ
ಶಿವಮೊಗ್ಗ : ಕರೋನಾ ನಿಯಂತ್ರಣಕ್ಕೆ ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಶಿವಮೊಗ್ಗ ನಗರದಲ್ಲಿ 4ಲಕ್ಷ ಮಂದಿಗೆ ಆಯುರ್ವೇದಿಕ್ ರೋಗ ನಿರೋಧಕ ಶಕ್ತಿವರ್ಧಕ ಕಿಟ್ ವಿತರಣೆ ಮಾಡುತ್ತಿರುವುದು ಬಹುಶಃ ದೇಶದಲ್ಲಿಯೇ ಪ್ರಥಮ ಪ್ರಯತ್ನವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು ಡಾ.ಗಿರಿಧರ ಕಜೆ ಅವರ ಮಾರ್ಗದರ್ಶನದಲ್ಲಿ ಕಿಟ್ ಸಿದ್ಧಪಡಿಸಲಾಗಿದ್ದು, ಪ್ರಥಮ ಹಂತದಲ್ಲಿ 1ಲಕ್ಷ ಕಿಟ್‍ಗಳು ವಿತರಣೆಗೆ ಸಿದ್ಧವಾಗಿದೆ. ಇನ್ನೂ ಎರಡು ಹಂತಗಳಲ್ಲಿ ಶಿವಮೊಗ್ಗ ನಗರದ ಪ್ರತಿಯೊಬ್ಬರಿಗೂ ಕಿಟ್ ಹಂಚಲಾಗುವುದು. ಇದಕ್ಕಾಗಿ ವಾರ್ಡ್‍ವಾರು ಸಿದ್ಧತೆಗಳನ್ನು ಮಾಡಲಾಗಿದ್ದು, ಕಿಟ್‍ಗಳನ್ನು ...
Read More »ಕೊರೋನಾ ಖರ್ಚು ಲೆಕ್ಕ ಕೊಡಿ : ಅಂಚೆ ಪತ್ರ ಚಳುವಳಿ ನಡೆಸಿದ ಯುವ ಕಾಂಗ್ರೆಸ್
ಕೊರೋನಾ ಮಹಾಮಾರಿಯಿಂದ ರಾಜ್ಯದ ಜನ ತತ್ತರಿಸಿದ್ದು. ಇಂತಹ ಸಂದರ್ಭದಲ್ಲಿ ಆರೋಗ್ಯ ರಕ್ಷಣೆ ನೀಡಬೇಕಾದ ಸರ್ಕಾರ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಸಾವಿರಾರು ಕೋಟಿಗಟ್ಟಲೆ ಲೂಟಿ ಹೊಡೆಯುತ್ತಿರುವುದು ರಾಜ್ಯದ ಸಚಿವರುಗಳು ನೀಡುತ್ತಿರುವ ಹೇಳಿಕೆಗಳಲ್ಲಿ ಮೇಲ್ನೋಟಕ್ಕೆ ಕಾಣಿಸುತ್ತಿದ್ದು. ರಾಜ್ಯ ಸರ್ಕಾರದ “ಕೊರೋನಾ ಖರ್ಚು – ಲೆಕ್ಕ ಕೊಡಿ” ಅಂಚೆ ಪತ್ರ ಚಳುವಳಿಯನ್ನು ಮಾಡುವ ಮೂಲಕ ಶ್ವೇತ ಪತ್ರವನ್ನು ಹೊರಡಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಆಗ್ರಹಿಸಲಾಯಿತು. ಕೊರೋನ ಸಂದರ್ಭದಲ್ಲಿ ಖರೀದಿ ಮಾಡಿದ ವೈದ್ಯಕೀಯ ಪರಿಕರಗಳಾದ ವೆಂಟಿಲೇಟರ್, ಮಾಸ್ಕ್, ಪಿಪಿಇ ಕಿಟ್, ಕೊರೋನಾ ಸೊಂಕಿತರಿಗಾಗಿ ಬಳಸುವ ಬೆಡ್ ...
Read More »ಜಿಲ್ಲೆಯಲ್ಲಿ ಒಂದೇ ದಿನ 126 ಕೊರೊನಾ ಪ್ರಕರಣಗಳು
ಶಿವಮೊಗ್ಗ : ಇಂದು ಜಿಲ್ಲೆಯಲ್ಲಿ ಬರೊಬ್ಬರಿ 126 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 1143 ಕ್ಕೆ ಏರಿಕೆಯಾಗಿದೆ. ಈ ಪೈಕಿ 589 ಜನರು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ 534 ಸಕ್ರಿಯಾ ಪ್ರಕರಣಗಳಿವೆ. ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಶಿವಮೊಗ್ಗ ನಗರದ ಹಳೆ ಶಿವಮೊಗ್ಗ ನಗರವನ್ನು ಸೀಲ್ ಡೌನ್ ಮಾಡಲಾಗಿದ್ದು, ಅದರೆ ಇಂದು ಸಚಿವ ಕೆ ಎಸ್ ಈಶ್ಚರಪ್ಪನವರು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಈ ಆದೇಶವನ್ನು ರದ್ದುಗೊಳಿಸಿದ್ದಾರೆ. ಸ್ಥಳೀಯರಿಂದ ಸೀಲ್ ಡೌನ್ ಗೆ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಇಡೀ ...
Read More »ನಾಳೆಯಿಂದ ಯಾವುದೇ ಪ್ರದೇಶದಲ್ಲಿ ಸೀಲ್ ಡೌನ್ ಇಲ್ಲ. ಶಿವಮೊಗ್ಗ ನಗರದ 7 ವಾರ್ಡ್ ಗಳಲ್ಲಿ ವಿಧಿಸಿದ್ದ ಸೀಲ್ ಡೌನ್ ರದ್ದು : ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ: ಶಿವಮೊಗ್ಗ ನಗರದ ಕೆಲವು ವಾರ್ಡ್ಗಳಲ್ಲಿ ಜಾರಿಗೊಳಿಸಲಾಗಿದ್ದ ಒಂದು ವಾರಗಳ ಕ್ಲಸ್ಟರ್ ಕಂಟೈನ್‌ಮೆAಟ್ ಝೋನ್ ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ರಾಜ್ಯದ ಎಲ್ಲೆಡೆ ಲಾಕ್‌ಡೌನ್ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಹಾಗೂ ಸ್ಥಳೀಯರು ತಾವೇ ಕರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸೀಲ್‌ಡೌನ್ ತೆರವುಗೊಳಿಸಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಕರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬರುವ ಮನೆಗಳನ್ನು ಮಾತ್ರ ಸೀಲ್‌ಡೌನ್ ಮಾಡಲು ನಿರ್ಧರಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಜವಾಬ್ದಾರಿ ...
Read More »ಕೆಲವು ವಾರ್ಡ್‍ಗಳು ಪೂರ್ಣ ಸೀಲ್‍ಡೌನ್
ಶಿವಮೊಗ್ಗ : ರಾಜ್ಯ ಸರ್ಕಾರದ ನಿರ್ದೇಶನದ ಪ್ರಕಾರ ಜಿಲ್ಲೆಯಾದ್ಯಂತ ಇಂದಿನಿಂದ ಲಾಕ್‍ಡೌನ್ ತೆರವುಗೊಳಿಸಲಾಗಿದ್ದು, ರಾತ್ರಿ 9ಗಂಟೆಯಿಂದ ಬೆಳಿಗ್ಗೆ 5ರವರೆಗೆ ಮಾತ್ರ ಲಾಕ್‍ಡೌನ್ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಕರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿರುವ ಹಳೆ ಶಿವಮೊಗ್ಗ ವ್ಯಾಪ್ತಿಯ ಕೆಲವು ವಾರ್ಡ್‍ಗಳಲ್ಲಿ ಜುಲೈ 23ರ ಬೆಳಿಗ್ಗೆ 5ರಿಂದ ಜುಲೈ 29ರ ರಾತ್ರಿ 9ಗಂಟೆಯವರೆಗೆ ಸಂಪೂರ್ಣ ಸೀಲ್‍ಡೌನ್ ಇರಲಿದೆ ಎಂದು ಸ್ಪಷ್ಟಪಡಿಸಿದರು. ಹಳೆ ಶಿವಮೊಗ್ಗ ಕ್ಲಸ್ಟರ್‍ನಲ್ಲಿ ಬರುವ ವಾರ್ಡ್ ಸಂಖ್ಯೆ 22, 23, 29 ಮತ್ತು ...
Read More »ಶಿವಮೊಗ್ಗ ನಗರದ ಕೆಲವು ವಾರ್ಡ್ ಗಳು ಸಂಪೂರ್ಣ ಲಾಕ್ ಡೌನ್
ಶಿವಮೊಗ್ಗ ನಗರದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಅತಿ ಹೆಚ್ಚು ಪತ್ತೆಯಾಗುತ್ತಿದ್ದು, ವಿವಿಧ ವಾಡ್ ಗಳಲ್ಲಿ ಸುಮಾರು ಸಕ್ರಿಯ 148 ಕಂಟೋನ್ಮೆಂಟ್ ಝೊನ್ ಗಳಿದ್ದು, ಅವುಗಳಲ್ಲಿ 250 ಕ್ಕೂ ಹೆಚ್ಚು ಮಂದಿ ಕೋವಿಡ್ 19 ಭಾದಿತರಾಗಿದ್ದಾರೆ. ಕ್ರಮೇಣ ಪ್ರಕರಣಗಳು ಹೆಚ್ಚಾಗುತ್ತಿದೆ ಈ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಕೆಲ ಭಾಗಗಳಲ್ಲಿ ಬಿಗಿ ಲಾಕ್ ಡೌನ್ ನ್ನ ಜಾರಿಗೆ ತರಲು ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಹೊಸ ಆದೇಶವನ್ನ ಹೊರಡಿಸಿದ್ದಾರೆ.ಈ ಹೊಸ ಆದೇಶದ ಅನ್ವಯ ವಾರ್ಡ್ ನಂಬರ್ 22,23,29 ಹಾಗೂ 30 ವಾರ್ಡ್ ನಂಬರ್ 12, 13, 33 ...
Read More »ವಿದ್ಯಾನಗರದಲ್ಲಿ ಭೀಕರ ಅಪಘಾತ: ಇಬ್ಬರು ಬೈಕ್ ಸವಾರರ ಸಾವು
ಶಿವಮೊಗ್ಗ: ಇಂದು ಬೆಳ್ಳಗೆ ವಿದ್ಯಾನಗರದ ದುರ್ಗಮ್ಮ ದೇವಾಲಯದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ನಡೆದಿದೆ. ರಸ್ತೆ ಕ್ರಾಸ್ ಮಾಡುತ್ತಿದ್ದ ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಬೈಕ್’ನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ. ಮೃತಪಟ್ಟ ಯುವಕರು ಗೊಂಧಿಚಟ್ನಳ್ಳಿಯವರು ಎಂದು ಹೇಳಲಾಗಿದೆ.
Read More »ಒಂದು ಗಂಟೆಯ ಮಳೆಗೆ ಪ್ರತಿಷ್ಟಿತರ ಬಡಾವಣೆಗೆ ನುಗ್ಗಿದ ನೀರು
ಶಿವಮೊಗ್ಗ: ಕೇವಲ ಒಂದು ಗಂಟೆ ಸುರಿದ ಮಳೆಗೆ ಶಿವಮೊಗ್ಗದ ಪ್ರತಿಷ್ಟಿತ ಬಡಾವಣೆಯೊಂದರ ಮನೆಯೊಳಗೆ ನೀರು ನುಗ್ಗಿದೆ. ಕೇವಲ ಒಂದು ಗಂಟೆಯ ಮಳೆಗೆ ಪ್ರತಿಷ್ಟಿತ ಬಡಾವಣೆಯ ಮನೆಗಳಿಗೆ ನೀರು ನುಗ್ಗಲು ಕಾರಣವೇನು ಎಂಬ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ. ಹೌದು ಇಂದು ಮಧ್ಯಾಹ್ನದ ಬಳಿಮ ಸುರಿದ ಮಳೆಗೆ ಶಿವಮೊಗ್ಗ ಗೋಪಾಲಗೌಡ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದೆ. ಇದಕ್ಕೆ ಮೂಲ ಕಾರಣ ಬಾಕ್ಸ್ ಚರಂಡಿಗಳು ಸರಿಯಾಗಿ ಇಲ್ಲದಿರುವುದೇ ಕಾರಣವಾಗಿದೆ. ಇಲ್ಲಿ ಪ್ರತಿಷ್ಟಿತರೇ ವಾಸವಾಗಿದ್ದಾರೆ. ಆದರೆ ಬಾಕ್ಸ್ ಚರಂಡಿಗಳನ್ನು ಸರಿಯಾಗಿ ಮಾಡಿಸಬೇಕಾದ ಮಹಾನಗರ ಪಾಲಿಕೆಯ ಈ ವಾರ್ಡ್ ನ ...
Read More »ಶಿವಮೊಗ್ಗ ನಗರದ ಪ್ರತಿ ಮನೆಗೂ ಆಯುರ್ವೇದ ಔಷಧಿ ಕಿಟ್, ಸಚಿವ ಕೆ.ಎಸ್ ಈಶ್ಚರಪ್ಪ
ಕೋವಿಡ್ ಸುರಕ್ಷಾ ಪಡೆ ನೇತೃತ್ವದಲ್ಲಿ ಶಿವಮೊಗ್ಗ ನಗರದ ನಾಲ್ಕು ಲಕ್ಷ ಜನರಿಗೆ ರೋಗ ನಿರೋಧಕ ಮತ್ತು ಶಕ್ತಿವರ್ಧಕ ಔಷಧಿ ಕಿಟ್‍ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಜುಲೈ 29ರಂದು ಆಯುರ್ವೇದ ವೈದ್ಯ ಡಾ.ಗಿರಿಧರ್ ಕಜೆ ಅವರು ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಡಿದ ಸಚಿವ ಈಶ್ವರಪ್ಪ, ಶಿವಮೊಗ್ಗ ನಗರದಲ್ಲಿ ಸುಮಾರು 85 ಸಾವಿರ ಮನೆಗಳಿವೆ. ಪ್ರತಿ ವಾರ್ಡ್‍ನ ಕಾರ್ಪೊರೇಟರ್‍ಗಳು, ಸ್ವಯಂ ಸೇವಕರು ಪ್ರತಿ ಮನೆಗೂ ಔಷಧಿ ಕಿಟ್ ವಿತರಿಸಲಿದ್ದಾರೆ. ಮನೆಯಲ್ಲಿ ಇರುವ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಉಚಿತ ಆರೋಗ್ಯ ...
Read More »
Recent Comments