ಸದ್ಯ ಕಾಂಗ್ರೇಸ್ ಪಕ್ಷದ ರಾಜಕೀಯದಲ್ಲಿ ಸಕ್ರಿಯರಾಗಿರುವ ರಮ್ಯಾ ಅವರು ಮತ್ತೆ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ರಮ್ಯ ತಮ್ಮ ರಾಜಕೀಯ ಬದುಕಿನಿಂದ ಮತ್ತೆ ಬಣ್ಣದ ಜಗತ್ತಿಗೆ ಜೀಗಿಯಲಿದ್ದಾರೆ. ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ. ದರ್ಶನ್ ಅಭಿನಯದ ಐತಿಹಾಸಿಕ ಮದಕರಿ ನಾಯಕ ಚಿತ್ರದಲ್ಲಿ ರಮ್ಯಾ ನಟಿಸುತ್ತಾರೆ ಎಂಬ ಮಾತುಗಳು ಗಾಂಧಿ ನಗರದಲ್ಲಿ ಕೇಳಿಬರುತ್ತಿದೆ. ದರ್ಶನ್ ಮತ್ತು ರಮ್ಯಾ 2006ರಲ್ಲಿ ತೆರೆ ಕಂಡಿದ್ದ ದತ್ತ ಚಿತ್ರದಲ್ಲಿ ಅಭಿನಯಿಸಿದ್ದರು. ಆ ನಂತರ ಈ ಇಬ್ಬರು ಒಟ್ಟಾಗಿ ಅಭಿನಯಿಸಿರಲಿಲ್ಲ. ಇದೀಗ ಐತಿಹಾಸಿಕ ಚಿತ್ರದ ಮೂಲಕ ರಮ್ಯಾ ಮತ್ತೆ ದರ್ಶನ್ ಜೊತೆ ಅಭಿನಯಿಸುತ್ತಾರೆ ಎಂದು ಹೇಳಲಾಗುತ್ತಿದೆ. ಚಿತ್ರ ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ. ಚಿತ್ರವನ್ನು ಸ್ಯಾಂಡಲ್ವುಡ್ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡುತ್ತಿದ್ದು ರಾಕ್ ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
Recent Comments