Cnewstv / 24.08.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
“ಜೈಲರ್” 550 ಕೋಟಿ ಕಲೆಕ್ಷನ್.
ರಜನಿಕಾಂತ್ ಸಿನಿಮಾಗಳಿಗೆ ರಜನಿಕಾಂತ್ ಸಿನಿಮಾಗಳೇ ಸಾಟಿ ಎನ್ನುವ ಮಾತನ್ನು ಇಂದಿಗೂ ಸಹ ಉಳಿಸಿಕೊಂಡು ಬಂದಿದ್ದಾರೆ. ಆಗಸ್ಟ್ 10 ರಂದು ಬಿಡುಗಡೆಯಾದ ಜೈಲರ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.
ರಜನಿಕಾಂತ್ ವೃತ್ತಿಜೀವನದಲ್ಲಿ ಈ ಸಿನಿಮಾದ ಗೆಲುವು ಗಮನಾರ್ಹವಾಗಿದೆ. 72 ವರ್ಷದ ರಜನಿಕಾಂತ್ ಈ ಪ್ರಾಯದಲ್ಲೂ ಆಕ್ಷನ್ ಹೀರೋ ಆಗಿ ಅಭಿನಯದ ಜೈಲರ್ ಸಿನಿಮಾ ವಿಶ್ವಾದ್ಯಂತ 550 ಕೋಟಿ ರೂಪಾಯಿಗಳಿಗೆ ಮಾಡಿದ್ದು, ಭಾರತದಲ್ಲಿ 295 ಕೋಟಿ ಕಲೆಕ್ಷನ್ ಮಾಡಿದ್ದು ಶೀಘ್ರದಲ್ಲೇ 300 ಕೋಟಿ ರೂಪಾಯಿಗಳಿಗೆ ಮುಟ್ಟಲಿದೆ.
ಕೌಟುಂಬಿಕ ಕಥೆಯ ನಾಧಾರಿತ ಜೈಲರ್ ಸಿನಿಮಾ ನಿವೃತ್ತ ಪೊಲೀಸ್ ಅಧಿಕಾರಿಯು ತನ್ನ ಮಗನಿಗಾಗಿ ಹೋರಾಡುವ ಕಥಾಂದರವು ಅತ್ಯಂತ ಸುಂದರವಾಗಿ ಹೆಣೆಯಲಾಗಿದೆ. ರಜನಿಕಾಂತ್ ಜೊತೆಯಲ್ಲಿ ಮುಖ್ಯ ಭೂಮಿಕೆಯಲ್ಲಿ ರಮ್ಯಾಕೃಷ್ಣ, ಮೋಹನ್ ಲಾಲ್ ಜಾಕಿ ಶ್ರಾಫ್, ಶಿವರಾಜ್ ಕುಮಾರ್ ಮುಂತಾದ ಘಟಾನುಘಟಿ ನಾಯಕರು ನಟಿಸಿದ್ದಾರೆ. ಬೇರೆ ಸಿನಿಮಾಗಳ ಪೈಪೋಟಿಗಳ ನಡುವೆಯೂ ಜೈಲರ್ ಸಿನಿಮಾ ಅಬ್ಬರಿಸುತ್ತಿದೆ. ಅನೇಕ ಚಿತ್ರ ಮಂದಿರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399