Cnewstv / 11.06.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಕೊಲೆ ಆರೋಪ ನಟ ದರ್ಶನ್ ಹಾಗೂ 10 ಜನರ ಬಂಧನ.. ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ
ಬೆಂಗಳೂರು : ಕೊಲೆ ಆರೋಪದ ಅಡಿಯಲ್ಲಿ ಸ್ಯಾಂಡಲ್ ವುಡ್ ಡಿ ಬಾಸ್ ನಟ ದರ್ಶನ್ ಹಾಗೂ 10 ಜನರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂದಿದ್ದಾರೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದ ರೇಣುಕಾ ಸ್ವಾಮಿ ಅವರ ಆತ್ಮಹತ್ಯೆ ಪ್ರಕರಣ ತನಿಖೆ ಬಳಿಕ ಕೊಲೆ ಎಂದು ದೃಢಪಟ್ಟಿದೆ. ಈ ಪ್ರಕರಣದಲ್ಲಿ ಇದುವರೆಗೂ 10 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂಬಂಧ ನಟ ದರ್ಶನ್ ರವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ದರ್ಶನ್ ಗೆಳತಿ ಪವಿತ್ರ ಗೌಡ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಅಶ್ಲೀಲಕರವಾಗಿ ಕಾಮೆಂಟ್ ಹಾಕುತ್ತಿದ್ದ ರೇಣುಕಾ ಸ್ವಾಮಿ ಎಂದು ಅವರನ್ನು ಕೊಲೆ ಮಾಡಲಾಗಿದ್ದು ಈ ಕೊಲೆಗೆ ದರ್ಶನ್ ರವರು ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ..
ಯಾರು ರೇಣುಕಾ ಸ್ವಾಮಿ ?? ಹೇಗಾಯಿತು ಹತ್ಯೆ ??
ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ದರ್ಶನ್ ಗೆಳತಿ ಪವಿತ್ರ ಗೌಡ ಅವರಿಗೆ ಅಶ್ಲೀಲವಾಗಿ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದರು. ಈ ವಿಚಾರವನ್ನು ಪವಿತ್ರ ರವರು, ದರ್ಶನ್ ರವರಿಗೆ ತಿಳಿಸಿದ್ದು, ದರ್ಶನ್ ರವರು ಚಿತ್ರದುರ್ಗದ ತನ್ನ ಅಭಿಮಾನಿ ಸಂಘದ ರಾಘವೇಂದ್ರ ಎಂಬವರಿಗೆ ಕರೆ ಮಾಡಿ ರೇಣುಕಾ ಸ್ವಾಮಿಯವರನ್ನು ಬೆಂಗಳೂರಿಗೆ ಕರೆ ತರಲು ತಿಳಿಸಿದ್ದಾರೆ. ಜೂನ್ 8 ರಂದು ವಿನಯ್ ಎಂಬುವರ ಕಾರ್ ಶೆಡ್ ನಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಅಲ್ಲಿ ನಾಲ್ಕು ಜನರು ರೇಣುಕಾ ಸ್ವಾಮಿಯ ಮೇಲೆ ಹಲ್ಲೆ ನಡೆಸಿದ್ದು, ಈ ಎಲ್ಲಾ ಘಟನೆ ನಡೆಯುವಾಗ ದರ್ಶನ್ ರವರು ಸ್ಥಳದಲ್ಲೇ ಇದ್ದು ಅವರ ಸೂಚನೆಯಂತೆ ಎಲ್ಲಾ ಕೃತ್ಯಗಳನ್ನು ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಗುರುತು ಪತ್ತೆಯಾಗದ ಸ್ಥಿತಿಯಲ್ಲಿ ಶವ…
ಜುನ್ 9 ರಂದು ಬೆಂಗಳೂರಿನ ಕಾಮಾಕ್ಷಿಪಾಳ್ಯದ ಮೋರಿ ಸಮೀಪ ನಾಯಿಗಳು ಕಿತ್ತಾಡುತ್ತಿದ್ದ ಅನಾಥ ಶವವನ್ನು ನೋಡಿ ಅಪಾರ್ಟ್ಮೆಂಟಿನ ಸೆಕ್ಯೂರಿಟಿ ಗಾರ್ಡ್ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿ 30 ರಿಂದ 35 ವರ್ಷದೊಳಗಿನ ವ್ಯಕ್ತಿಯ ಶವ ಎಂದು ಮಹಜರು ನಡೆಸಲು ಕಳುಹಿಸಿದ್ದಾರೆ. ಆರಂಭದಲ್ಲಿ ಅವರಿಗೆ ಶವದ ಗುರುತು ಪತ್ತೆಯಾಗಲಿಲ್ಲ ಅದು ಸಹಜ ಸಾವು ಎಂದು ದಾಖಲೆಸಿ, ಆತ್ಮಹತ್ಯೆ ಎಂದು ಅನುಮಾನಿಸಲಾಗಿತ್ತು. ಬಳಿಕ ಅದು ಚಿತ್ರದುರ್ಗದ ರೇಣುಕಾ ಸ್ವಾಮಿಯವರ ದೇಹ ಎಂದು ದೃಢಪಟ್ಟಿದೆ. ನಂತರ ತನಿಖೆ ಚುರುಕುಗೊಳಿಸಿದಾಗ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ದೃಢಪಟ್ಟಿದ್ದು, ಗಿರಿನಗರದ ಮೂಲದ ಮೂರು ವ್ಯಕ್ತಿಗಳು ಈ ಕೃತ್ಯವನ್ನು ತಾವೇ ಮಾಡಿರುವುದಾಗಿ ಒಪ್ಪಿಕೊಂಡು ಕಾಮಾಕ್ಷಿಪಾಳ್ಯ ಪೊಲೀಸರಿಗೆ ಶರಣಾಗಿದ್ದಾರೆ.
ಸದ್ಯ ನಟ ದರ್ಶನ್ ದರ್ಶನ್, ಗೆಳತಿ ಪವಿತ್ರ ಗೌಡ ಹಾಗೂ 10 ಜನರನ್ನು ಬಂಧಿಸಿದ್ದು , ತನಿಖೆ ನಡೆಸುತ್ತಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಇದನ್ನು ಒದಿ…