ಶಿವಮೊಗ್ಗ: ಕೃಷಿ ಕೂಲಿ ಕಾರ್ಮಿಕರ ಕೆಲಸ ಮಾಡುತ್ತಿದ್ದ 10 ಜನ ಮಹಿಳೆಯರು ಶಿವಮೊಗ್ಗ ಏರ್ಪೋರ್ಟ್ ನಿಂದ ಇಂದು ಗೋವಾ ಪ್ರವಾಸಕ್ಕೆ ತೆರಳಿದ್ದಾರೆ.
ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಆಸೆಯನ್ನ ಈಡೇರಿಸಲು ರೈತ ವಿಶ್ವನಾಥ್, ಶಿವಮೊಗ್ಗ ಏರ್ಪೋರ್ಟ್ ನಿಂದ 11 ಜನ ಕೂಲಿ ಕಾರ್ಮಿಕರನ್ನ ಇಂದು ಗೋವಾ ಪ್ರವಾಸಕ್ಕೆ ಕರೆದೊಯ್ದಿದ್ದು, ಫೆಬ್ರವರಿ 20 ರಂದು ವಿಮಾನದ ಮೂಲಕವೇ ಶಿವಮೊಗ್ಗಕ್ಕೆ ಮರಳಲಿದ್ದಾರೆ.
ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಶಿರಗನಹಳ್ಳಿ ಗ್ರಾಮದ ರೈತ ವಿಶ್ವನಾಥ್, ತಮ್ಮ ಅಡಿಕೆ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದ 11 ಜನ ಕೂಲಿ ಕಾರ್ಮಿಕ ಮಹಿಳೆಯರನ್ನ ಅವರ ಅಪೇಕ್ಷೆಯಂತೆ ತಿರುಪತಿಗೆ ಕರೆದೊಯಲು ನಿರ್ಧರಿಸಿದ್ದರು. ಆದರೇ, ಫ್ಲೈಟ್ ಟಿಕೆಟ್ ಸಿಗದ ಕಾರಣ ಗೋವಾ ಪ್ರವಾಸಕ್ಕೆ ಕರೆದೊಯ್ದಿದ್ದಾರೆ.
“ನಾನು ಕೆಲಸದ ನಿಮಿತ್ತ ಆಗಾಗ್ಗೆ ವಿಮಾನದಲ್ಲಿ ಓಡಾಟ ಮಾಡುತ್ತಿರುತ್ತೇನೆ. ನಮ್ಮ ತೋಟದ ಕೆಲಸಕ್ಕೆ ಬರುವ ಕಾರ್ಮಿಕ ಮಹಿಳೆಯರು, ಇದನ್ನ ತಿಳಿದು ತಾವು ವಿಮಾನದಲ್ಲಿ ಸಂಚಾರ ಮಾಡುವ ಆಸೆಯನ್ನು ಹೊರಹಾಕಿದ್ದರು. ಅವರ ಆಸೆಯನ್ನು ಈಡೇರಿಸಲು ವಿಮಾನದಲ್ಲಿ ಗೋವಾ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದೇನೆ.”
– ವಿಶ್ವನಾಥ್ : ರೈತ, ಹರಪ್ಪನಹಳ್ಳಿ.

ರೈತ ವಿಶ್ವನಾಥ್ ಒಟ್ಟು 11 ಜನ ಕೂಲಿ ಕಾರ್ಮಿಕ ಮಹಿಳೆಯರಿಗೆ ಟಿಕೆಟ್ ಬುಕ್ ಮಾಡಿದ್ದರು. ಕೊನೆ ಕ್ಷಣದಲ್ಲಿ ಕೌಟುಂಬಿಕ ಕಾರಣಕ್ಕಾಗಿ ಒಬ್ಬರು ಮಿಸ್ ಆಗಿದ್ದು, 10 ಜನರ ಜೊತೆ ಇಂದು ಗೋವಾಗೆ ತೆರಳಿದ್ದಾರೆ.
ಇನ್ನು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡಿರುವ ಶಿರಗನಹಳ್ಳಿಯ ಕಾರ್ಮಿಕ ಮಹಿಳೆಯರು ಪ್ರವಾಸವನ್ನ ಸಕತ್ ಎಂಜಾಯ್ ಮಾಡಿದ್ದಾರೆ. ಶಿವಮೊಗ್ಗ ಏರ್ಪೋರ್ಟ್, ಫ್ಲೈಟ್ ಹಾಗೂ ಗೋವಾದಲ್ಲಿ ಫೋಟೋ ತೆಗೆಸಿಕೊಂಡಿರುವ ಕಾರ್ಮಿಕ ಮಹಿಳೆಯರು, ಪ್ರವಾಸವನ್ನ ಸಂಭ್ರಮಿಸಿದ್ದಾರೆ.
C News TV Kannada News Online in cnewstv