Cnewstv / 07.08.2023 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ನಿಧನ.
ಬೆಂಗಳೂರು : ನಟ ವಿಜಯ ರಾಘವೇಂದ್ರ ರವರ ಪತ್ನಿ ಸ್ಪಂದನ ಹೃದಯಘಾತದಿಂದ ನಿಧನರಾಗಿದ್ದಾರೆ.
2007ರಲ್ಲಿ ವಿಜಯ ರಾಘವೇಂದ್ರ ಹಾಗೂ ಸ್ಪಂದನ ಮದುವೆಯಾಗಿದ್ದರು. ದಂಪತಿಗಳಿಗೆ ಶೌರ್ಯ ಎಂಬ ಒಬ್ಬ ಮಗನಿದ್ದಾನೆ. ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದಾಗ ಲೋ ಬಿಪಿಯಿಂದ ಹೃದಯಘಾತವಾಗಿ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ. ನಾಳೆ ಬೆಳಿಗ್ಗೆ ಪಾರ್ಥಿವ ಶರೀರ ಬೆಂಗಳೂರಿಗೆ ಬರುವ ಸಾಧ್ಯತೆಯಿದ್ದು, ವಿಧಿ ವಿಧಾನಗಳೆಲ್ಲವೂ ಬೆಂಗಳೂರಿನಲ್ಲಿಯೇ ಜರುಗಲಿದೆ.
ಸ್ಪಂದನ ರವರು ರವಿಚಂದ್ರನ್ ನಿರ್ದೇಶನದ ಅಪೂರ್ವ ಸಿನಿಮಾದಲ್ಲೂ ಕೂಡ ನಟಿಸಿದ್ದರು. ಇದೀಗ ಸ್ಪಂದನ ರವರ ಸಾವಿನ ಸುದ್ದಿ ಅನೇಕರಿಗೆ ನಂಬಲು ಸಾಧ್ಯವಾಗುತ್ತಿಲ್ಲ. ವಿಜಯ ರಾಘವೇಂದ್ರ ಅವರಿಗೆ ನೋವು ಬರಿಸುವ ಶಕ್ತಿ ದೇವರು ನೀಡಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv