Cnewstv / 09.08.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇಂದು ಸಂಜೆ ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನಾ ಅಂತ್ಯಸಂಸ್ಕಾರ. ಅಂತಿಮ ದರ್ಶನ ಪಡೆಯುತ್ತಿರುವ ಗಣ್ಯರು
ಬೆಂಗಳೂರು : ಸ್ಪಂದನ ವಿಜಯ ರಾಘವೇಂದ್ರ ಅವರ ಪಾರ್ಥಿವ ಶರೀರ ನೆನ್ನೆ ತಡರಾತ್ರಿ ಬೆಂಗಳೂರಿಗೆ ತಲುಪಿದ್ದು, ಮಲ್ಲೇಶ್ವರಂನಲ್ಲಿರುವ ಬಿಕೆ ಶಿವರಾಂ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.
ಸ್ನೇಹಿತರು, ಕುಟುಂಬಸ್ಥರು, ಸಿನಿಮಾ ನಟ ನಟಿಯರು, ರಾಜಕೀಯ ಗಣ್ಯರು ಸ್ಪಂದನ ವಿಜಯ ರಾಘವೇಂದ್ರ ರವರ ಅಂತಿಮ ದರ್ಶನವನ್ನು ಪಡೆಯುತ್ತಿದ್ದಾರೆ. ಸ್ಪಂದನ ಪಾರ್ಥಿವ ಶರೀರದ ಶವಯಾತ್ರೆಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಬಿಜೆಪಿ ಕಚೇರಿ ಮುಂಭಾಗದ ರಸ್ತೆಯಿಂದ ಮಲ್ಲೇಶ್ವರಂ ಕೆ ಸಿ ಜನರಲ್ ಆಸ್ಪತ್ರೆಯ ಮುಖಾಂತರ ಹರಿಶ್ಚಂದ್ರ ಘಾಟ್ ತಲುಪಲಿರುವ ಶವಯಾತ್ರೆ. ಇಂದು ಸಂಜೆ 4 ಗಂಟೆಗೆ ಶ್ರೀರಾಂಪುರದ ಹರಿಶ್ಚಂದ್ರ ಘಾಟಿನ ವಿದ್ಯುತ್ ಚಿತಾಕಾರದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

C News TV Kannada News Online in cnewstv