ವೈಯಾಲಿ ಕಾವಲ್’ನಲ್ಲಿರುವ ಶಾಸಕ ಮುನಿರತ್ನ ಅವರ ನಿವಾಸದ ಬಳಿ ಇಂದು ಮುಂಜಾನೆ ಸ್ಫೋಟ ಸಂಭವಿಸಿದೆ. ಯಾವ ರೀತಿಯ ಸ್ಫೋಟ ಎಂದು ಇನ್ನೂ ತಿಳಿದುಬಂದಿಲ್ಲ.. ಸ್ಪೋಟಕ್ಕೆ ಸ್ಥಳೀಯ ನಿವಾಸಿ ವೆಂಕಟೇಶ್ ಎಂಬುವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಅಗ್ನಿ ಶಾಮಕ ದಳ ಭೇಟಿ ನೀಡಿದೆ..FSL ತಂಡದಿಂದ ಪರಿಶೀಲನೆ ನಡೆಯುತ್ತಿದೆ.
Read More »ರಾಜ್ಯ
ಕರ್ನಾಟಕದ ಪ್ರಖ್ಯಾತ ರಂಗಕರ್ಮಿ, ‘ನಟ ರತ್ನಾಕರ’ ಮಾಸ್ಟರ್ ಹಿರಣ್ಣಯ್ಯ ನಿಧನ.
ಕರ್ನಾಟಕದ ಪ್ರಖ್ಯಾತ ರಂಗಕರ್ಮಿ, ‘ನಟ ರತ್ನಾಕರ’ ಮಾಸ್ಟರ್ ಹಿರಣ್ಣಯ್ಯ ನಿಧನ. ಹಿರಿಯ ರಂಗಕರ್ಮಿ, ಕಲಾವಿದ, ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಇಂದು 10 ಗಂಟೆ ಸುಮಾರಿಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.. ಮಾಸ್ಟರ್ ಹಿರಣ್ಣಯ್ಯ ಅವರ ಲಂಚಾವತಾರ ನಾಟಕ ದೊಡ್ಡ ಮಟ್ಟಕ್ಕೆ ಖ್ಯಾತಿಗಳಿದೆ. ರಾಜಕೀಯವನ್ನು ವಿಡಂಬಣಾತ್ಮವಾಗಿ ಹೇಳುತ್ತಿದ್ದ ಲಂಚಾವತಾರ ನಾಟಕ ಸುಮಾರು 1000 ಪ್ರದರ್ಶನಗಳನ್ನು ನೀಡಿದೆ. ಮಾತಿನ ಮೂಲಕವೆ ರಾಜಕಾರಣಿಗಳನ್ನು ತಿವಿಯುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಅವರು ನಾಟಕಗಳ ಜೊತೆಗೆ ಚಿತ್ರರಂಗದಲ್ಲು ...
Read More »ಫೂನಿ ‘ ಸೈಕ್ಲೋನ್ ಎಚ್ಚರ ನೀಡಿದ ಭಾರತ ಹವಾಮಾನ ಇಲಾಖೆ
ಬಂಗಾಳಕೊಲ್ಲಿ ಸಮುದ್ರ ಮಧ್ಯಭಾಗದಲ್ಲಿ ವಾಯುಭಾರ ಕುಸಿತದಿಂದ ಫೋನಿ ಸೈಕ್ಲೋನ್ ಉಂಟಾಗಿ ಇದು ಚಂಡಮಾರುತವಾಗಿ ಪರಿವರ್ತನೆಗೊಂಡು ಸುಮಾರು ಸಾವಿರ ಕಿಲೋಮೀಟರ್ ವೇಗದಲ್ಲಿ ದೇಶದ ಪೂರ್ವ ದಕ್ಷಿಣ ಭಾಗದಲ್ಲಿ ಸಂಚರಿಸಿ ಆಂಧ್ರ ಮತ್ತು ತಮಿಳುನಾಡಿನ ಸಮುದ್ರದ ಹತ್ತಿರಕ್ಕೆ ಸೇರುವ ಸಾಧ್ಯತೆಗಳು ಇರುವುದಾಗಿ ಭಾರತ ಹವಾಮಾನ ಇಲಾಖೆಯು ಸಂದೇಶವನ್ನು ರವಾನಿಸಿದ್ದು, ಹವಾಮಾನ ವೈಪರೀತ್ಯಗಳು ಉಂಟಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯ ಗಂಟೆಯನ್ನು ಸಾರ್ವಜನಿಕರಿಗೆ ನೀಡಿದೆ..
Read More »ಜಿಲ್ಲೆಯಲ್ಲಿ ಮತದಾನ ಮಾಡಿದ ಪ್ರಮುಖ ನಾಯಕರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಯು ಇಂದು ಬೆಳಿಗ್ಗೆ 7ಗಂಟೆಯಿಂದ ಆರಂಭವಾಗಿದ್ದು ಶಾಂತಿಯುತವಾಗಿ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಪ್ರಮುಖ ನಾಯಕರುಗಳು ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಹಾಗೂ ಕುಟುಂಬಸ್ಥರು ಶಿಕಾರಿಪುರದಲ್ಲಿ ಮತ ಚಲಾಯಿಸಿದರು. ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಹಾಗೂ ಕುಟುಂಬಸ್ಥರು ತಮ್ಮ ಸ್ವಗ್ರಾಮ ಕುಬಟೂರಿನಲ್ಲಮತ ಚಲಾಯಿಸಿದರು. ಕೆ ಎಸ್ ಈಶ್ವರಪ್ಪ ಹಾಗೂ ಕುಟುಂಬಸ್ಥರು ಸೈನ್ಸ್ ಮೈದಾನದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತ ಚಲಾಯಿಸಿದರು. ...
Read More »justice for madhu ಅಭಿಯಾನಕ್ಕೆ ಸ್ಯಾಂಡಲ್ ವುಡ್ ತಾರೆಯರ ಬೆಂಬಲ..
ರಾಯಚೂರಿ ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧುವಿನಾ ಅನುಮಾನಾಸ್ಪದ ಸಾವಿಗೆ ನ್ಯಾಯ ಸಿಗಬೇಕು. ಅಮಾನುಷ ಕೃತ್ಯವನ್ನು ಎಸಗಿರುವ ಕೀಚಕರಿಗೆ ಕಾನೂನುಬದ್ಧವಾಗಿ ಶಿಕ್ಷೆಯಾಗಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. justice for madhu ಹೆಸರಿನಲ್ಲಿ ಅಭಿಯಾನವು ಸಹ ನಡೆಯುತ್ತಿದೆ. ಇದಕ್ಕೆ ಸ್ಯಾಂಡಲ್ ವುಡ್ ತಾರೆಯರು ಸಹ ಬೆಂಬಲ ಸೂಚಿಸುತ್ತಿದ್ದಾರೆ…ಹಲವು ನಟ- ನಟಿಯರು ಕೃತ್ಯವನ್ನ ಖಂಡಿಸಿದ್ರು. ಮಧು ಸಾವಿನ ತನಿಖೆ ಅತೀ ಶೀಘ್ರದಲ್ಲಿ ಆಗಬೇಕು..ಅತ್ಯಾಚಾರ ಹಾಗೂ ಕೊಲೆಯ ಕೃತ್ಯಕ್ಕೆ ಇನ್ನಷ್ಟು ಕಠಿಣವಾದ ಕಾನೂನು ರೂಪುಗೊಳ್ಳಬೇಕು ಎಂದು ದರ್ಶನ್ ಟ್ವೀಟ್ ಕೂಡ ಮಾಡಿದ್ದಾರೆ. ಇವತ್ತು ನಟಿ ಹರ್ಷಿಕಾ ಪೂಣಚ್ಚ ...
Read More »ಸಿದ್ಧರಾಮಯ್ಯನಿಗೆ ಸವಾಲು ಹಾಕಿದ ಶಾಸಕ ಕೆ ಎಸ್ ಈಶ್ವರಪ್ಪ..
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಕೆ ಎಸ್ ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಕುರಿತು ಹಗುರವಾಗಿ ಮಾತನಾಡಿದ್ದಾರೆ. ಧಮ್ ಬಗ್ಗೆ ಪ್ರಸ್ತಾಪಿಸಿದ್ದಾರೆ ತಮಗೆ ದಮ್ಮಿದ್ದರೆ ಮುಖ್ಯಮಂತ್ರಿ ನಾನೇ ಎಂದು ಹೇಳಲಿ, ಆದರೆ ನಾನು ಅವರಿಗೆ ಸವಾಲು ಹಾಕುತ್ತೇನೆ. ಸಿದ್ದರಾಮಯ್ಯ ಅವರೇ ಇದು ನಿಮ್ಮ ಸ್ವಂತ ಹೇಳಿಕೆಯೇ ? ಅಥವಾ ಪಕ್ಷದ ಹೇಳಿಕೆಯೇ? ಡಿಕೆ ಶಿವಕುಮಾರ್ ಆಗಲಿ ಜಿ ಪರಮೇಶ್ವರ್ ಆಗಲಿ ಖರ್ಗೆಯವರಾಗಲಿ ಅಥವಾ ರಾಹುಲ್ ಗಾಂಧಿಯವರೇ ಆಗಲಿ ತಾವೇ ಮುಖ್ಯಮಂತ್ರಿಯಾಗಬೇಕು ಎಂದು ಹೇಳಲಿ ಆಗ ಒಪ್ಪಿಕೊಳ್ಳುತ್ತೇನೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ ...
Read More »14 ಲೋಕಸಭಾ ಕ್ಷೇತ್ರಗಳ ಮತದಾನದ ಅಂತಿಮ ಶೇಕಡಾವಾರು.
ಕರ್ನಾಟಕದಲ್ಲಿ, 2019ರ ಲೋಕ ಸಭಾ ಚುನಾವಣೆಗಳು ಎರಡನೇ ಹಂತದಲ್ಲಿ 14 ಕ್ಷೇತ್ರಗಳಾದ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮೀಣ,ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ ಚಿಕ್ಕಬಳ್ಳಾಪುರ ಮತ್ತು ಕೋಲಾರ ಮತದಾನ ನಡೆದಿದೆ. 2.67 ಕೋಟಿ ಮತದಾರರು ಕರ್ನಾಟಕದ ಕೇಂದ್ರ ಮತ್ತು ದಕ್ಷಿಣ ಭಾಗಗಳಲ್ಲಿ 241 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತಾರೆ.. 14 ಲೋಕಸಭಾ ಕ್ಷೇತ್ರಗಳ ಮತದಾನದ ಅಂತಿಮ ಶೇಕಡಾವಾರು. ಉಡುಪಿ – 69.80 % ಚಿಕ್ಕಮಗಳೂರು- 69.80 % ಹಾಸನ – 76.55 % ...
Read More »ರಾಜ್ಯದಲ್ಲಿ ಬಿಜೆಪಿ 22 ಸೀಟುಗಳನ್ನು ಗೆಲ್ಲಲಿದೆ. ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಸಾಧನೆ ಶೂನ್ಯ -ಬಿಎಸ್ ಯಡಿಯೂರಪ್ಪ.
ಈ ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಅಪವಿತ್ರ ಮೈತ್ರಿ ಸರಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪನವರು ಭವಿಷ್ಯ ನುಡಿದಿದ್ದಾರೆ ಇಂದು ಶಿಕಾರಿಪುರದಲ್ಲಿ ಆಯೋಜಿಸಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸರಕಾರ ರೈತರಿಗೆ ಒಂದಲ್ಲ ಒಂದು ರೀತಿ ಯಲ್ಲಿ ದ್ರೋಹವನ್ನು ಮಾಡುತ್ತಿದೆ ಸಾಲ ಮನ್ನಾ ಯೋಜನೆಯನ್ನು ಕೇವಲ ಚುನಾವಣೆ ಗಿಮಿಕ್ ,ರಾಜಕೀಯ ಗಿಮಿಕ್ ಮಾಡುತ್ತಾ ರೈತರಿಗೆ ದ್ರೋಹ ಮಾಡುತ್ತಿದೆ.ಕುಮಾರಸ್ವಾಮಿಯವರೇ ನಾನು ಅಧಿಕಾರಕ್ಕೆ ಬಂದ 24 ಗಂಟೆ ಒಳಗೆ ರೈತರ ಸಾಲ ಮನ್ನಾ ಮಾಡ್ತೀನಿ ಹೇಳಿದ್ರಿ ಆದರೆ ...
Read More »ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಇಲ್ಲಿದೆ ಟಾಪರ್ಸ್ ಲಿಸ್ಟ್.
ದ್ವಿತೀಯ ಪಿಯುಸಿ ಪರೀಕ್ಷೆಯ ಪಲಿತಾಂಶವನ್ನು ಇಂದು ಪದವಿಪೂರ್ವ ಇಲಾಖೆಯ ನಿರ್ದೇಶಕಿ ಸಿ ಶಿಖಾ ಬಿಡುಗಡೆ ಮಾಡಿದ್ದಾರೆ. ಎಂದಿನಂತೆ ಮೂರೂ ವಿಭಾಗಗಳಲ್ಲೂ ವಿದ್ಯಾರ್ಥಿನಿಯರೇ ಟಾಪರ್ಸ್ ಆಗಿದ್ದಾರೆ..ದ್ವಿತೀಯ ಪಿಯು ಪರೀಕ್ಷೆ ಮಾ.1ರಿಂದ ಮಾರ್ಚ್ 18ರವರೆಗೆ ನಡೆದಿತ್ತು. ಪ್ರಸಕ್ತ ಸಾಲಿನಲ್ಲಿ 6.73 ಲಕ್ಷ ವಿದ್ಯಾರ್ಥಿಗಳು ಮಾರ್ಚ್ನಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದರು. ಟಾಪರ್ಸ್ ಲಿಸ್ಟ್ . ವಿಜ್ಞಾನ ವಿಭಾಗ : ಕೃತಿ ಮುತ್ತಗಿ (596/600) : ಬೆಂಗಳೂರು ಮೋಹನ್ ಎಸ್ ಎಲ್ (595/600) : ಹಾಸನ ಎಸ್ ಆರ್ ಅನರ್ಘ್ಯ (595/600) : ಮಂಗಳೂರು ಅಂಕಿತಾ ಪಿ ...
Read More »ಟ್ರೋಲ್ ಅಗಿದ್ದ, ನಿಖಿಲ್ ಎಲ್ಲಿದ್ದೀಯಪ್ಪಾ ಅನ್ನೋ ಪ್ರಶ್ನೆಗೆ ಸಿಎಂ ಉತ್ತರ..!
ನಿಖಿಲ್ ಎಲ್ಲಿದ್ದಿಯಪ್ಪಾ..? ನಿಖಿಲ್ ಎಲ್ಲಿದ್ದಿಯಪ್ಪಾ..? ಫೇಸ್ಬುಕ್ನಲ್ಲೂ ಇದೇ… ವಾಟ್ಸಪ್ನಲ್ಲೂ ಇದೆ.. ಎಲ್ಲಿ ನೋಡಿದ್ರೂ ಇದೇ ವೀಡಿಯೋ..ನಿಖಿಲ್ ಎಲ್ಲಿದ್ದಿಯಪ್ಪ ಅಂತ ಮಂಡ್ಯದ ಜನ ಅಷ್ಟೇ ಅಲ್ಲ, ಇಡೀ ರಾಜ್ಯದ ಜನರೂ ಕೇಳ್ತಿದ್ರು. ಎಲ್ಲಿ ಹೋದ್ರೂ, ಎಲ್ಲಿ ಬಂದ್ರೂ ನಿಖಿಲ್ ಎಲ್ಲಿದ್ದಿಯಪ್ಪ ಅಂತಿದ್ರು..ಈ ಸಂಭಾಷಣೆ ಕೇಳದ ರಾಜ್ಯದ ಜನರೇ ಇಲ್ಲ.. ಅಷ್ಟರ ಮಟ್ಟಿಗೆ ಈ ವರ್ಷ ಟ್ರೋಲ್ ಆಗಿರೋ ವಿಡಿಯೋ ಇದು… ಜಾಗ್ವಾರ್ ಸಿನಿಮಾದ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಸಿಎಂ ಕುಮಾರಸ್ವಾಮಿ, ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಕರೆದಿದ್ದು , ಮಂಡ್ಯ ರಾಜಕಾರಣದಿಂದಾಗಿ ಟ್ರೋಲ್ ಆಗಿತ್ತು.. ವಿರೋಧಿಗಳ ...
Read More »
Recent Comments