Breaking News

ರಾಜ್ಯದಲ್ಲಿ ಬಿಜೆಪಿ 22 ಸೀಟುಗಳನ್ನು ಗೆಲ್ಲಲಿದೆ. ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಸಾಧನೆ ಶೂನ್ಯ -ಬಿಎಸ್ ಯಡಿಯೂರಪ್ಪ.

ಈ ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಅಪವಿತ್ರ ಮೈತ್ರಿ ಸರಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪನವರು ಭವಿಷ್ಯ ನುಡಿದಿದ್ದಾರೆ ಇಂದು ಶಿಕಾರಿಪುರದಲ್ಲಿ ಆಯೋಜಿಸಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸರಕಾರ ರೈತರಿಗೆ ಒಂದಲ್ಲ ಒಂದು ರೀತಿ ಯಲ್ಲಿ ದ್ರೋಹವನ್ನು ಮಾಡುತ್ತಿದೆ ಸಾಲ ಮನ್ನಾ ಯೋಜನೆಯನ್ನು ಕೇವಲ ಚುನಾವಣೆ ಗಿಮಿಕ್ ,ರಾಜಕೀಯ ಗಿಮಿಕ್ ಮಾಡುತ್ತಾ ರೈತರಿಗೆ ದ್ರೋಹ ಮಾಡುತ್ತಿದೆ.ಕುಮಾರಸ್ವಾಮಿಯವರೇ ನಾನು ಅಧಿಕಾರಕ್ಕೆ ಬಂದ 24 ಗಂಟೆ ಒಳಗೆ ರೈತರ ಸಾಲ ಮನ್ನಾ ಮಾಡ್ತೀನಿ ಹೇಳಿದ್ರಿ ಆದರೆ ಈಗ ನೀವು ಯಾಕೆ ಮಾಡಿಲ್ಲ , ದೇಶದಲ್ಲಿ ಎಲ್ಲರೂ ಮೋದಿ ಮೋದಿ ಅಂತ ಹೇಳ್ತಾರೆ ಯಾಕೆ ಅಂದ್ರೆ ಮೋದಿಯವರು ಅಷ್ಟು ಒಳ್ಳೆಯ ಕೆಲಸವನ್ನು ದೇಶದೆಲ್ಲೆಡೆ ಮಾಡಿದ್ದಾರೆ , ಆದರೆ ಈ ಹಿಂದೆ ಹತ್ತು ವರ್ಷ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಸುದ್ದಿ ಯಾರೂ ಹೇಳುವುದಿಲ್ಲ ಕಾರಣ ಎಂದರೆ ಮನಮೋಹನ್ ಸಿಂಗ್ ಕೇವಲ ಸೋನಿಯಾ ಗಾಂಧಿ ರಿಮೋಟ್ ಆಗಿದ್ದರು ಅಷ್ಟೆ ,ಕೇಂದ್ರದಲ್ಲಿ ಈ ಹಿಂದೆ ಮನೋ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ 54 ಲಕ್ಷ ಕೋಟಿಯಷ್ಟು ಸಾಲ ಈ ದೇಶದ ಮೇಲೆ ಹೊರಿಸಿದ್ದರು. …ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಎಲ್ಲ ಸಾಲವನ್ನು ತೀರಿಸಿ ವಿಶ್ವಕ್ಕೆ ಮಾದರಿಯಾಗಿದ್ದಾರೆ ,ಈ ಹಿಂದೆ ನಾನು ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಅನೇಕ ಜನಪರ ಯೋಜನೆಗಳಾದ ,ಸಂಧ್ಯಾ ಸುರಕ್ಷಾ ,ಭಾಗ್ಯಲಕ್ಷ್ಮೀ ಯೋಜನೆ,ರೈತರ ಸಾಲ ಮನ್ನಾ ,ಸುವರ್ಣ ಭೂಮಿ ಯೋಜನೆ ,ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಮುಂದುವರಿಸಿಕೊಂಡು ಬರುವಲ್ಲಿ ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲ , ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಕಲಿತುಕೊಳ್ಳಲಿ ದೇಶದಲ್ಲಿ ನರೇಂದ್ರ ಮೋದಿ ಅವರು ಯಾವ ರೀತಿ ಆಡಳಿತ ಮಾಡುತ್ತಿದ್ದರೆ , ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಿದ್ದಾರೆ,ವಿಶ್ವ ಅವರನ್ನು ಯಾವ ರೀತಿ ಕೊಂಡಾಡುತ್ತಿದೆ ,ಸೈನಿಕರಿಗೆ ರೈತರಿಗೆ, ದೇಶದ ಬಡ ಜನತೆಗೆ ಯಾವ ರೀತಿಯಲ್ಲಿ ಅನುಕೂಲ ಮಾಡಬೇಕು ಎಂಬುದು ನರೇಂದ್ರ ಮೋದಿ ಅವರಿಗೆ ಗೊತ್ತಿದೆ ,ಅದನ್ನು ಅವರು ಚಾಚೂ ತಪ್ಪದೆ ಮಾಡುತ್ತಿದ್ದಾರೆ ,ದೇಶದ ಅಭಿವೃದ್ಧಿಯನ್ನು ಮಾಡಿದ್ದಾರೆ ,ಆಯುಷ್ಮಾನ್ ಭಾರತ್ ಯೋಜನೆ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆ ಮುದ್ರಾ ಸಾಲ ಯೋಜನೆ ಜಾರಿಗೆ ತಂದಿರುವುದು ಹೆಮ್ಮೆಯ ವಿಷಯ .ಆದರೆ ಕಾಂಗ್ರೆಸ್ ಜೆಡಿಎಸ್ ಸರ್ಕಾರಗಳು ಈ ದೇಶದ ಜನತೆಗೆ ಈ ರಾಜ್ಯದ ಜನತೆಗೆ ಒಂದಲ್ಲ ಒಂದು ರೀತಿಯಿಂದ ದ್ರೋಹವನ್ನು ಮಾಡುತ್ತಾ ಬಂದಿದೆ ವಿನಃ ದೇಶದ ರಾಜ್ಯದ ಜನರ ಹಿತಕ್ಕೆ ಯಾವ ರೀತಿಯಿಂದಲೂ ಯೋಚನೆ ಮಾಡಿಲ್ಲ ಇಂಥ ಸರ್ಕಾರ ಮುಂದಿನ ದಿನಗಳಲ್ಲಿ ಉಳಿಯಬಾರದು ,ದೇಶದ ಬಡಜನತೆಯ ರೈತರ ಸೈನಿಕರ ಬಗ್ಗೆ ಕಿಂಚಿತ್ತು ಕಾಳಜಿ ಕಾಳಜಿ ಇಲ್ಲದ ರಾಹುಲ್ ಗಾಂಧಿಯಿಂದ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ ,ಶಿಕಾರಿಪುರಕ್ಕೆ ಯಾವುದೇ ಅಭಿವೃದ್ಧಿ ಇಲ್ಲ ಅಂತ ಹೇಳೋ ಹಾಗಿಲ್ಲ ಎಲ್ಲವೂ ಅಭಿವೃದ್ಧಿಗಳನ್ನು ಮಾಡಿದ್ದೇವೆ ,ಮುಂದಿನ ದಿನಗಳಲ್ಲಿ ಎಲ್ಲ ನೀರಾವರಿ ಯೋಜನೆಗಳನ್ನು ಮಾಡಲಿದ್ದೇವೆ ,ರಾಜ್ಯ ಸರ್ಕಾರ ಹಣ ಕೊಡದೇ ಇದ್ದರೆ ಕೇಂದ್ರದಿಂದ ತಂದು ತಾಲೂಕಿನಾದ್ಯಂತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ ಎಂದರು …

Leave a Reply

Your email address will not be published. Required fields are marked *

*