ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಕೆ ಎಸ್ ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಕುರಿತು ಹಗುರವಾಗಿ ಮಾತನಾಡಿದ್ದಾರೆ. ಧಮ್ ಬಗ್ಗೆ ಪ್ರಸ್ತಾಪಿಸಿದ್ದಾರೆ ತಮಗೆ ದಮ್ಮಿದ್ದರೆ ಮುಖ್ಯಮಂತ್ರಿ ನಾನೇ ಎಂದು ಹೇಳಲಿ, ಆದರೆ ನಾನು ಅವರಿಗೆ ಸವಾಲು ಹಾಕುತ್ತೇನೆ. ಸಿದ್ದರಾಮಯ್ಯ ಅವರೇ ಇದು ನಿಮ್ಮ ಸ್ವಂತ ಹೇಳಿಕೆಯೇ ? ಅಥವಾ ಪಕ್ಷದ ಹೇಳಿಕೆಯೇ? ಡಿಕೆ ಶಿವಕುಮಾರ್ ಆಗಲಿ ಜಿ ಪರಮೇಶ್ವರ್ ಆಗಲಿ ಖರ್ಗೆಯವರಾಗಲಿ ಅಥವಾ ರಾಹುಲ್ ಗಾಂಧಿಯವರೇ ಆಗಲಿ ತಾವೇ ಮುಖ್ಯಮಂತ್ರಿಯಾಗಬೇಕು ಎಂದು ಹೇಳಲಿ ಆಗ ಒಪ್ಪಿಕೊಳ್ಳುತ್ತೇನೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ ನೀವು ಮುಖ್ಯಮಂತ್ರಿ ಹೇಗೆ ಆಗುತ್ತೀರಾ ಎಂದರು
C News TV Kannada News Online in cnewstv