Breaking News

justice for madhu ಅಭಿಯಾನಕ್ಕೆ ಸ್ಯಾಂಡಲ್ ವುಡ್ ತಾರೆಯರ ಬೆಂಬಲ..

ರಾಯಚೂರಿ ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧುವಿನಾ ಅನುಮಾನಾಸ್ಪದ ಸಾವಿಗೆ ನ್ಯಾಯ ಸಿಗಬೇಕು. ಅಮಾನುಷ ಕೃತ್ಯವನ್ನು ಎಸಗಿರುವ ಕೀಚಕರಿಗೆ ಕಾನೂನುಬದ್ಧವಾಗಿ ಶಿಕ್ಷೆಯಾಗಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. justice for madhu ಹೆಸರಿನಲ್ಲಿ ಅಭಿಯಾನವು ಸಹ ನಡೆಯುತ್ತಿದೆ. ಇದಕ್ಕೆ ಸ್ಯಾಂಡಲ್ ವುಡ್ ತಾರೆಯರು ಸಹ ಬೆಂಬಲ ಸೂಚಿಸುತ್ತಿದ್ದಾರೆ…ಹಲವು ನಟ- ನಟಿಯರು ಕೃತ್ಯವನ್ನ ಖಂಡಿಸಿದ್ರು.

ಮಧು ಸಾವಿನ ತನಿಖೆ ಅತೀ ಶೀಘ್ರದಲ್ಲಿ ಆಗಬೇಕು..ಅತ್ಯಾಚಾರ ಹಾಗೂ ಕೊಲೆಯ ಕೃತ್ಯಕ್ಕೆ ಇನ್ನಷ್ಟು ಕಠಿಣವಾದ ಕಾನೂನು ರೂಪುಗೊಳ್ಳಬೇಕು ಎಂದು ದರ್ಶನ್ ಟ್ವೀಟ್ ಕೂಡ ಮಾಡಿದ್ದಾರೆ.

ಇವತ್ತು ನಟಿ ಹರ್ಷಿಕಾ ಪೂಣಚ್ಚ ಮಧು ಕುಟುಂಬವನ್ನ ಭೇಟಿ ಮಾಡಿ ಸಾಂತ್ವನ ಹೇಳಿದರು..

 

Leave a Reply

Your email address will not be published. Required fields are marked *

*