Cnewstv | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನವರಾತ್ರಿ ಸಂಭ್ರಮ..
ಶಿವಮೊಗ್ಗ : ದಸರಾ ಹಬ್ಬ ಅಂದ್ರೆ ನವರಾತ್ರಿ ಅಷ್ಟೇ ಅಲ್ಲ. ಹಬ್ಬದಲ್ಲಿ ಗೊಂಬೆ ಪ್ರದರ್ಶನ ಸಹ ಮಹತ್ವ ಪಡೆದುಕೊಂಡಿದೆ. ನವರಾತ್ರಿ ಸಂಭ್ರಮ ದೇವಾಲಯಗಳಲ್ಲಿ ನಡೆದರೆ, ಗೊಂಬೆ ಪ್ರದರ್ಶನ ಮನೆ ಮನೆಯಲ್ಲೂ ಇರುತ್ತದೆ. ಗೊಂಬೆ ಪ್ರದರ್ಶನ ಮೈಸೂರು ಭಾಗದ ದಸರಾ ಸಂಸ್ಕೃತಿಯನ್ನು ತೋರುತ್ತದೆ. ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಮೈಸೂರು ರಾಜ್ಯದ ಕಾಲದಿಂದಲೂ ಮನೆ ಮನೆಯಲ್ಲಿ ಗೊಂಬೆ ಪ್ರದರ್ಶನವಿರುತ್ತದೆ.
ದಸರಾ ಪ್ರಾರಂಭವಾಗುತ್ತಿದ್ದಂತೆ ಮನೆಯಲ್ಲಿದ್ದ ಗೊಂಬೆಗಳನ್ನು ಸ್ವಚ್ಛಗೊಳಿಸಿ ಸಿಂಗರಿಸಲಾಗುತ್ತದೆ. ಗೊಂಬೆಗಳಿಗೆ ಬಣ್ಣ ಹಚ್ಚಿ, ಹೊಸ ವಸ್ತ್ರ ಹಾಕಿ ಸಿಂಗಾರ ಮಾಡಲಾಗುತ್ತದೆ. ಅವು ಒಂದಕ್ಕೊಂದು ತಾಕದಂತೆ ಅತ್ಯಂತ ಸುಂದರವಾಗಿ ಕಾಣುವಂತೆ ಜೋಡಿಸಲಾಗುತ್ತದೆ. ಹಿಂದೂ ಧರ್ಮದಲ್ಲಿನ ದೇವತೆಗಳನ್ನು ಒಂದು ಸಾಲಿನಲ್ಲಿ ಜೋಡಿಸಲಾಗುತ್ತದೆ.
ಅದೇ ರೀತಿ ಮೈಸೂರು ದಸರಾದಲ್ಲಿನ ಅಂಬಾರಿಯ ಗೊಂಬೆಗಳು, ರಾಮಾಯಣ, ಮಹಾಭಾರತವನ್ನು ಸಾರುವ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಅವುಗಳಿಗೆ ವಿದ್ಯುತ್ ಲೈಟ್ಗಳನ್ನು ನೀಡಿ ಚೆನ್ನಾಗಿ ಕಾಣುವಂತೆ ಮಾಡಲಾಗುತ್ತದೆ. ಇದೆಲ್ಲದರಿಂದ ಗೊಂಬೆ ಪ್ರದರ್ಶನದ ಅಂದ ಇನ್ನಷ್ಟು ಹೆಚ್ಚಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments