Breaking News

ಕರ್ನಾಟಕದ ಪ್ರಖ್ಯಾತ ರಂಗಕರ್ಮಿ, ‘ನಟ ರತ್ನಾಕರ’ ಮಾಸ್ಟರ್ ಹಿರಣ್ಣಯ್ಯ ನಿಧನ.

ಕರ್ನಾಟಕದ ಪ್ರಖ್ಯಾತ ರಂಗಕರ್ಮಿ, ‘ನಟ ರತ್ನಾಕರ’ ಮಾಸ್ಟರ್ ಹಿರಣ್ಣಯ್ಯ ನಿಧನ.

ಹಿರಿಯ ರಂಗಕರ್ಮಿ, ಕಲಾವಿದ, ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಇಂದು 10 ಗಂಟೆ ಸುಮಾರಿಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ..

ಮಾಸ್ಟರ್ ಹಿರಣ್ಣಯ್ಯ ಅವರ ಲಂಚಾವತಾರ ನಾಟಕ ದೊಡ್ಡ ಮಟ್ಟಕ್ಕೆ ಖ್ಯಾತಿಗಳಿದೆ. ರಾಜಕೀಯವನ್ನು ವಿಡಂಬಣಾತ್ಮವಾಗಿ ಹೇಳುತ್ತಿದ್ದ ಲಂಚಾವತಾರ ನಾಟಕ ಸುಮಾರು 1000 ಪ್ರದರ್ಶನಗಳನ್ನು ನೀಡಿದೆ. ಮಾತಿನ ಮೂಲಕವೆ ರಾಜಕಾರಣಿಗಳನ್ನು ತಿವಿಯುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಅವರು ನಾಟಕಗಳ ಜೊತೆಗೆ ಚಿತ್ರರಂಗದಲ್ಲು ಖ್ಯಾತಿ ಗಳಿಸಿದ್ದಾರೆ..
ಲಂಚ ಸಾಮ್ರಾಜ್ಯ, ನಂ.73 ಶಾಂತಿ ನಿವಾಸ, ಗಜ ಸೇರಿದಂತೆ 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ..ಮಾಸ್ಟರ್ ಹಿರಣ್ಣಯ್ಯ ಅವರು ಕೊನೆಯದಾಗಿ ಸುನೀಲ್ ಕುಮಾರ್ ದೇಸಾಯಿ ಅವರ ‘ರೇ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನು ಇಚ್ಚೀತಿಗಷ್ಟೆ ರಮೇಶ್ ಅರವಿಂದ್ ನಿರ್ದೇಶನದ ‘ಬಟರ್ ಫ್ಲೈ’ ಸಿನಿಮಾದ ಹಾಡಿನಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರು ಬರೆದ ಸಾಲುಗಳನ್ನು ಬಳಸಿಕೊಳ್ಳಲಾಗಿದೆ. ಈ ಹಾಡಿಗೆ ಬಿಗ್ ಬಿ ಅಮಿತಾ ಬಚ್ಚನ್ ದ್ವನಿ ನೀಡಿದ್ದಾರೆ…

ಮಾಸ್ಟರ್ ಹಿರಣ್ಣಯ್ಯ ನವರ ಪ್ರಮುಖ ನಾಟಕಗಳು

ಮಕ್ಮಲ್ ಟೋಪಿ, ಕಪಿಮುಷ್ಟಿ, ದೇವದಾಸಿ, ನಡುಬೀದಿ, ನಾರಾಯಣ, ಲಂಚಾವತಾರ
ಪಶ್ಚಾತ್ತಾಪ, ಭ್ರಷ್ಟಾಚಾರ, ಚಪಲಾವತಾರ, ಡಬ್ಬಲ್ ತಾಳಿ, ಲಾಟರಿ ಸರ್ಕಾರ, ಸನ್ಯಾಸಿ ಸಂಸಾರ, ಸದಾರಮೆ, ಎಚ್ಚಮ ನಾಯಕ..

ಹಿರಣ್ಣಯ್ಯ ಮಿತ್ರ ಮಂಡಲಿ ಪ್ರಮುಖ ನಾಟಕಗಳಲ್ಲೊಂದಾದ ದೇವದಾಸಿ ಚಲನಚಿತ್ರವಾಗಿದ್ದು, ಅದರಲ್ಲಿ ಹಿರಣ್ಣಯ್ಯನವರು ಪಾತ್ರ ವಹಿಸಿದ್ದರು. ಸಂಪ್ರದಾಯ, ಆನಂದ ಸಾಗರ ಚಿತ್ರಗಳಲ್ಲಿ ನಟಿಸಿದ್ದಾರೆ.

ಮಾಸ್ಟರ್ ಹಿರಣ್ಣಯ್ಯ ರವರೆಗೆ ದೊರೆತ ಪ್ರಶಸ್ತಿ ಪುರಸ್ಕಾರಗಳು

ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ನವರತ್ನ ರಾಂ ಪ್ರಶಸ್ತಿ, ಕಲಾಗಜ, ಸಿಂಹ – ಬಿರುದು, ನಟ ರತ್ನಾಕರ – ಬಿರುದು..

Leave a Reply

Your email address will not be published. Required fields are marked *

*