ಬೆಳ್ಳಿ ಅಂಬಾರಿಯ ಜಂಬೂಸವಾರಿಗೆ ಶಿವಪ್ಪನಾಯಕ ಅರಮನೆಯಲ್ಲಿ ಸಕಲ ಸಿದ್ಧತೆ

cnewstv| ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ದಸರಾ (Dasara) ಅಂಗವಾಗಿ ನಗರದಲ್ಲಿ (Shivamogga) ನಡೆಯಲಿರುವ ಬೆಳ್ಳಿ ಅಂಬಾರಿಯ ಜಂಬೂಸವಾರಿಗೆ ಶಿವಪ್ಪನಾಯಕ ಅರಮನೆಯಲ್ಲಿ ಸಕಲ ಸಿದ್ಧತೆ ನಡೆದಿದೆ.

650 ಕೆಜಿ ತೂಕದ ಬೆಳ್ಳಿ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಸಾಗರ್ ಆನೆ ಹೊತ್ತು ಸಾಗಲಿದೆ. ಈ ಆನೆಗೆ ಬಹದ್ದೂರ್, ಬಾಲಣ್ಣ ಆನೆಗಳು ಸಾಥ್ ನೀಡಲಿವೆ. ಕೋಟೆ ರಸ್ತೆಯ ಶಿವಪ್ಪನಾಯಕನ ಅರಮನೆಯಿಂದ ಜಂಬೂ ಸವಾರಿ ಆರಂಭಗೊಳ್ಳಲಿದೆ. 

ಮಧ್ಯಾಹ್ನ 2:30ಕ್ಕೆ ಜಂಬೂಸವಾರಿಗೆ ಚಾಲನೆ ದೊರೆಯಲಿದ್ದು, ಕೋಟೆ ರಸ್ತೆಯಿಂದ ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ, ಎಎ ವೃತ್ತ, ಗೋಪಿ ವೃತ್ತ, ಜೈಲು ರಸ್ತೆ ಮಾರ್ಗವಾಗಿ ಫ್ರೀಡಂ ಪಾರ್ಕ್ ತಲುಪಲಿದೆ. ಸಂಜೆ 6.30ಕ್ಕೆ ಫ್ರೀಡಂ ಪಾರ್ಕ್‍ನಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಲಿದೆ. 

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*