ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಅರಳಿ ಸುರಳಿಯ ಯುನಿಯನ್ ಬ್ಯಾಂಕ್ ನ ಮ್ಯಾನೇಜರ್ ಎನ್.ಶ್ರೀವಾಸ್ತವ (38) ಮೃತಪಟ್ಟಿದಾರೆ.
ತೀರ್ಥಹಳ್ಳಿ ಪಟ್ಟಣದ ತುಂಗಾನದಿ ತೀರದ ರಾಮಕೊಂಡದ ಬಳಿ ಶ್ರೀವಾಸ್ತವ ಅವರ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಬ್ಯಾಂಕ್ ಮ್ಯಾನೇಜರ್ ಶ್ರೀವಾಸ್ತವ ಅವರು, ಪಟ್ಟಣದ ತುಂಗಾ ನದಿಯಲ್ಲಿ ಸೋಮವಾರದಿಂದ ಕಣ್ಮರೆಯಾಗಿದ್ದರು. ನದಿಯ ದಡದಲ್ಲಿ ಶ್ರೀವಾಸ್ತವ ಅವರ ಮೊಬೈಲ್, ಬಟ್ಟೆ ಹಾಗೂ ಚಪ್ಪಲಿ ಇದ್ದ ಕಾರಣ ನದಿಯಲ್ಲಿ ಮುಳುಗಿರಬಹುದು ಎಂದು ಶಂಕಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಶೋಧ ಕಾರ್ಯ ಕೂಡ ನಡೆಸಲಾಗಿತ್ತು. ಇಂದು ಬೆಳಿಗ್ಗೆ ಬ್ಯಾಂಕ್ ಮ್ಯಾನೇಜರ್ ಶವ ತುಂಗಾ ನದಿಯಲ್ಲಿ ಪತ್ತೆಯಾಗಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣದ ಶ್ರೀವಾಸ್ತವ ಅವಿವಾಹಿತರಾಗಿದ್ದು, ಕಳೆದ ಜೂನ್ ನಲ್ಲಿ ಅರಳಿಸುರಳಿಯ ಯೂನಿಯನ್ ಬ್ಯಾಂಕ್ ಶಾಖೆಗೆ ಮ್ಯಾನೇಜರ್ ಆಗಿ ವರ್ಗಾವಣೆಗೊಂಡಿದ್ದರು.
ಘಟನೆ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
C News TV Kannada News Online in cnewstv