cnewstv | 02.10.2024 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ ದಸರಾಕ್ಕೆ ಸಕ್ರೆಬೈಲಿನ ಮೂರು ಆನೆಗಳಿಗೆ ವಿಶೇಷ ಆಹ್ವಾನ: ಅಂಬಾರಿ ಹೊರಲು ಸಾಗರಗೆ ತಾಲೀಮು
ಶಿವಮೊಗ್ಗ : ವಿಶ್ವವಿಖ್ಯಾತ ಮೈಸೂರು ದಸರಾ ಬಿಟ್ಟರೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಅದ್ಧೂರಿ ದಸರಾ ನಡೆಯಲಿದೆ. ದಸರಾ ಅಂದರೆ ಅಲ್ಲಿ ಆನೆಗಳು ಇರಲೇಬೇಕು. ಶಿವಮೊಗ್ಗ ದಸರಾಕ್ಕೆ ಈ ಬಾರಿ ಮೂರು ಆನೆಗಳು ಎಂಟ್ರಕೊಡುತ್ತಿವೆ. ಸಕ್ರೆಬೈಲಿನ ಆನೆ ಬಿಡಾರದಲ್ಲಿ ದಸರಾಕ್ಕೆ ಮೂರು ಆನೆಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ.
ಮೈಸೂರು ಬಿಟ್ಟರೇ ಅದ್ದೂರಿ ದಸರಾ ನೋಡಲು ಸಿಗುವುದು ಶಿವಮೊಗ್ಗ ನಗರದಲ್ಲಿ. ದಶಕಗಳಿಂದ ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿಯು ಅದ್ಧೂರಿಯಾಗಿ ನಡೆಯುತ್ತಿದೆ. ನಾಡದೇವಿ ಚಾಮುಂಡೇಶ್ವರಿಯ ಮೆರವಣಿಗೆ ಮೈಸೂರು ಮಾದರಿಯಲ್ಲಿಯೇ ಆನೆಯನ್ನು ಬಳಸಿಕೊಳ್ಳುವುದು ಶಿವಮೊಗ್ಗ ದಸರಾ ಮತ್ತೊಂದು ವಿಶೇಷವಾಗಿದೆ
ಶಿವಮೊಗ್ಗ ದಸರಾ ಹಬ್ಬಕ್ಕಾಗಿ ಮೂರು ಆನೆಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಶಿವಮೊಗ್ಗದ ಜಂಬೂ ಸವಾರಿಗಾಗಿ ಸಕ್ರೆಬೈಲು ಆನೆಬಿಡಾರದ ಸಾಗರ್, ಬಾಲಣ್ಣ ಹಾಗೂ ಬಹದ್ಹೂರ್ ಆನೆಗಳಿಗೆ ಶಿವಮೊಗ್ಗ ನಗರ ಬಿಜೆಪಿ ಶಾಸಕ ಚೆನ್ನಬಸಪ್ಪ ಹಾಗೂ ಪಾಲಿಕೆ ಆಯುಕ್ತೆ ಕವಿತಾ ನೇತೃತ್ವದಲ್ಲಿ ಸಕ್ರೆಬೈಲು ಆನೆ ಬಿಡಾರದ ಅಧಿಕಾರಿಗಳಿಗೆ ಆಹ್ವಾನ ನೀಡಲಾಗಿದೆ. ಶಿವಮೊಗ್ಗ ದಸರಾದ ಜಂಬೂ ಸವಾರಿ ಹೊರಲು ತಾಲಿಮು ನಡೆಸಲು ಶಿವಮೊಗ್ಗಕ್ಕೆ ಮೂರು ಆನೆಗಳು ಎಂಟ್ರಿಕೊಡುತ್ತಿವೆ.
ಇದೇ ಮೊದಲ ಬಾರಿಗೆ ಆನೆ ಬಿಡಾರದಿಂದ ಮೂರು ಗಂಡಾನೆಗಳನ್ನು ಕಳಿಸಲಾಗುತ್ತಿದೆ. ಈ ಹಿಂದೆ ಸಾಗರ್ , ನೇತ್ರಾವತಿ, ಬಾನುಮತಿ ಆನೆಗಳು ಭಾಗವಹಿಸುತ್ತಿತ್ತು. ಈ ಬಾರಿ ಎರಡು ಆನೆಗಳು ಮರಿ ಹಾಕಿರುವುದರಿಂದ ಮೂರು ಗಂಡಾನೆಗಳು ಆಗಮಿಸಿವೆ. ಅಂಬಾರಿಯನ್ನು ಸಾಗರ್ ಹೊತ್ತು ನಡೆದರೆ ಬಾಬಣ್ಣ ಹಾಗೂ ಬಹದ್ಹೂರ್ ಆನೆಗಳು ಸಾಥ್ ನೀಡಲಿವೆ. ಬಾಲಣ್ಣ 3500 ಕೆ.ಜಿ ತೂಕ ಹೊಂದಿದೆ. ಎತ್ತರ 2.70 ಮೀಟರ್, ಬಾಲಣ್ಣ (28) ಸೌಮ್ಯ ಸ್ವಭಾವ ಹೊಂದಿದೆ. 2017ರಲ್ಲಿ ಉಬ್ರಾಣಿ ಆಭಯಾರಣದ ಚನ್ನಗಿರಿಯಲ್ಲಿ ಸೆರೆಸಿಕ್ಕಿತ್ತು. ಬಹದ್ದೂರ್ (37) ಆನೆ 4000 ಕೆಜಿ ಇದೆ. 2.60 ಮೀಟರ್. ಇದು ಚನ್ನಗಿರಿ ಅರಣ್ಯದಲ್ಲಿ ಸೆರೆಸಿಕ್ಕಿತ್ತು. ಇದರ ಸ್ವಭಾವ ಕೂಡ ಸೌಮ್ಯ ಆಗಿದೆ. ಸಾಗರ ಆನೆ ಕೂಡ ಬಲಿಷ್ಠವಾಗಿದೆ. ಸಾಗರ ಆನೆಯೇ ಶಿವಮೊಗ್ಗದ ದಸರಾದ ಅಂಬಾರಿಯನ್ನು ಹೊರಲಿದೆ. ಸಾಗರ ಆನೆಯು ಈ ವರ್ಷದ ದಸರಾದ ಪ್ರಮುಖ ಆಕರ್ಷಣೆ ಆಗಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399