Cnewstv.in / 13.03.2022 / ಚಿಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಚಿಲಿ : ದೇಶದ ಇತಿಹಾಸದಲ್ಲಿ ಅತ್ಯಂತ ಕಿರಿಯ ಅಧ್ಯಕ್ಷರಾಗಿ ಗೇಬ್ರಿಯಲ್ ಬೋರಿಕ್.
ಚಿಲಿ ದೇಶದ ನೂತನ ಅಧ್ಯಕ್ಷರಾಗಿ 36 ವರ್ಷದ ಗೇಬ್ರಿಯಲ್ ಬೋರಿಕ್ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಎಡಪಂಥೀಯ ಮಾಜಿ ವಿದ್ಯಾರ್ಥಿ ಕಾರ್ಯಕರ್ತ ಗೇಬ್ರಿಯಲ್ ಬೋರಿಕ್ ಅವರು ಚಿಲಿಯ ಅತ್ಯಂತ ಕಿರಿಯ ಅಧ್ಯಕ್ಷರಾಗಿದ್ದಾರೆ. ಆರ್ಥಿಕ ಅಸಮಾನತೆಗಳ ಬಗ್ಗೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿತ್ತು. ಇದರ ಮಧ್ಯೆ ಎಡಪಂಥೀಯ ವಿಚಾರವಾದಿ ಗೇಬ್ರಿಯಲ್ ಬೊರಿಕ್ ಪ್ರಮಾಣ ವಚನ ಸ್ವೀಕರಿಸಿದ್ದು ಜನರಿಗೆ ಹೊಸ ಭರವಸೆ ಮೂಡಿದೆ.
ಬೋರಿಕ್ ತನ್ನ ಕ್ಯಾಬಿನೆಟ್ಗೆನಲ್ಲಿ 14 ಮಹಿಳೆಯರನ್ನು ಸೇರ್ಪಡೆಮಾಡಿದ್ದು ತನ್ನದು “ಸ್ತ್ರೀವಾದಿ ಕ್ಯಾಬಿನೆಟ್” ಎಂದು ಗುರ್ತಿಸಿದ್ದಾರೆ. ಜೊತೆಗೆ ಇನ್ನೂ 10 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಗೇಬ್ರಿಯಲ್ ಬೋರಿಕ್ ಅವರು ಶೇ. 56 ರಷ್ಟು ಮತಗಳನ್ನು ಪಡೆದುಕೊಳ್ಳುವ ಮೂಲಕ ಶೇ. 44 ರಷ್ಟು ಮತಗಳನ್ನು ಗಳಿಸಿದ ಸಂಪ್ರದಾಯವಾದಿ ಎದುರಾಳಿ ಜೋಸ್ ಆಂಟೋನಿಯೊ ಕಾಸ್ಟ್ ಅವರನ್ನು ಸೋಲಿಸಿದ್ದಾರೆ.
ಗೇಬ್ರಿಯಲ್ ಬೋರಿಕ್ ಕಿರು ಪರಿಚಯ :
ಬೋರಿಕ್ 1986ರಲ್ಲಿ ಪಂಟಾ ಅರೆನಾಸ್‍ನಲ್ಲಿ ಜನಿಸಿದ್ದು, ಪ್ಯಾಟಗೋನಿಯನ್ ಐಸ್ ಫೀಲ್ಡ್‍ಗಳ ಕೆಳಗಿರುವ ತವರು ಕ್ಷೇತ್ರ ಮ್ಯಾಗಲ್ಲಾನ್ಸ್‍ನ ಬಗ್ಗೆ ಹೆಮ್ಮೆಪಡುತ್ತಾರೆ.
2011ರಲ್ಲಿ, ತನ್ನ ಕಾನೂನು ಪದವಿಯ ಅಂತಿಮ ವರ್ಷಕ್ಕೆ ಪ್ರವೇಶಿಸಿದಾಗ, ಬೋರಿಕ್ ಶಿಕ್ಷಣ ವ್ಯವಸ್ಥೆಯ ದನಿಯಾಗಿದ್ದರು. ಈ ಮೂಲಕ ಹಲವು ಯುವ ನಾಯಕರನ್ನು ಹುಟ್ಟಿಹಾಕಿತು. ಅವರೆಲ್ಲರೂ ಬೋರಿಕ್ ಗೆ ರಾಜಕೀಯ ಪ್ರವೇಶಕ್ಕೆ ಪ್ರೇರಣೆ ನೀಡಿದರು.
ತಮ್ಮ ಕಾನೂನು ಪದವಿಯನ್ನು ಪೂರ್ಣಗೊಳಿಸದ ಗೇಬ್ರಿಯಲ್ ಬೋರಿಕ್ 2013ರಲ್ಲಿ ಚಿಲಿಯ ಕಾಂಗ್ರೆಸ್ ಚುನಾವಣೆಯಲ್ಲಿ ಜಯಶೀಲರಾದರು ಮತ್ತು ಎರಡು ಅವಧಿಗೆ ಉಪನಾಯಕರಾಗಿ ಸೇವೆ ಸಲ್ಲಿಸಿದರು. ನಂತರ ಚಿಲಿಯ ಎರಡು ಸಾಂಪ್ರದಾಯಿಕ ಒಕ್ಕೂಟಗಳನ್ನು ಮೀರಿ ಬಂದ ಮೊದಲ ಕಾಂಗ್ರೆಸ್ಸಿಗರಲ್ಲಿ ಒಬ್ಬರಾದರು.
ಇದನ್ನು ಒದಿ : https://cnewstv.in/?p=8991
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments