Cnewstv / 18.06.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ದುರ್ನಾತದಿಂದ ಕೂಡಿದ್ದ ಕನ್ಸರ್ ವೆನ್ಸಿಗೆ ಹೊಸ ರೂಪ ನೀಡಿದ ಶಿವಮೊಗ್ಗ ಸಂಚಾರಿ ಪೊಲೀಸರು.
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಮಾಡಬೇಕಾದ ಕೆಲಸವನ್ನು ಶಿವಮೊಗ್ಗ ಸಂಚಾರಿ ಪೊಲೀಸರು ಮಾಡುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಕಾರಣರಾಗಿದ್ದಾರೆ.
ಹೌದು,ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಸವಾರ್ ಲೈನ್ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ ಗಾಗಿ ಕನ್ಸರ್ ವೆನ್ಸಿ ನಿರ್ಮಾಣ ಮಾಡಲಾಗಿತ್ತು.ಆದರೆ ಜನೋಪಯೋಗಿ ಆಗದೇ ಗಿಡಗಂಟಿಗಳು ಬೆಳೆದಿದ್ದು, ಮದ್ಯಪಾನ ಬಾಟಲಿ, ಅಸ್ವಚ್ಚತೆ ದುರ್ನಾತದಿಂದ ಕೂಡಿದ್ದ ಈ ಕನ್ಸರ್ ವೆನ್ಸಿಗೆ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸರು ಹೊಸ ರೂಪ ನೀಡಿದ್ದಾರೆ.
ಸವಾರ್ ಲೈನ್ ರಸ್ತೆಯ ಮಲ್ನಾಡ್ ಕೆಫೆಯಲ್ಲಿರುವ ಕನ್ಸರ್ ವೆನ್ಸಿಯನ್ನು ಸ್ವಚ್ವಗೊಳಿಸಿದ್ದಾರೆ.ಈ ಮೂಲಕ ರಸ್ತೆಯಲ್ಲಿ ವಾಹನಗಳನ್ನು ಎಲ್ಲಿ ಬೇಕಲ್ಲಿ ಪಾರ್ಕಿಂಗ್ ಮಾಡಿ ವಾಹನ ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದ ವಾಹನ ಸವಾರರಿಗೆ,ಇದೀಗ ಟ್ರಾಫಿಕ್ ಪೊಲೀಸರು ಜಾಗ ಮಾಡಿಕೊಟ್ಟಿದ್ದಾರೆ.
ಸುಗಮ ಸಂಚಾರ ವ್ಯವಸ್ಥೆಗೆ ಈಗ ವ್ಯವಸ್ಥಿತವಾಗಿದ್ದು,ಸಾರ್ವಜನಿಕರು ಪಶ್ಚಿಮ ಸಂಚಾರಿ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪಶ್ಚಿಮ ಸಂಚಾರಿ ಠಾಣೆ ಸಬ್ ಇನ್ಸ್ ಪೆಕ್ಟರ್ ತಿರುಮಲೇಶ್,ಎಎಸ್ ಐ ಪ್ರಕಾಶ್,ಸಿಬ್ಬಂದಿಗಳಾದ ಸಂದೀಪ್,ಪ್ರಕಾಶ್,ಪ್ರಶಾಂತ್ ಇದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
Recent Comments