Cnewstv / 17.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಪರವಾನಗಿ ರಹಿತ ಆಟೋಗಳ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿದ್ದೀಯಾ !!?
ಶಿವಮೊಗ್ಗ : ವಾಹನ ಪರವಾನಗಿ ಮತ್ತು ವಾಹನ ಚಾಲನಾ ಪರವಾನಗಿ ಇಲ್ಲದೆ ಆಟೋ ಚಲಾಯಿಸುವಂತಿಲ್ಲ. ಒಂದು ವೇಳೆ ವಾಹನ ಚಲಾಯಿಸಿದ್ದೆ ಆದಲ್ಲಿ ದಂಡ ತೆರಬೇಕಾಗುತ್ತದೆ ಆದರೆ ಈ ನಿಯಮ ಶಿವಮೊಗ್ಗ ನಗರದಲ್ಲಿ ಗಾಳಿಗೆ ದೂರಲಾಗಿದೆ.
ಹೌದು ಶಿವಮೊಗ್ಗ ನಗರದಲ್ಲಿ ಸರಿಸುಮಾರು ಐದರಿಂದ ಆರು ಸಾವಿರ ಆಟೋಗಳು ಸಂಚರಿಸುತ್ತಿದ್ದು, ಅದರಲ್ಲಿ ಪರವಾನಗಿ ರಹಿತ ಆಟೋಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ಸರಿ ಸುಮಾರು 1000 ಕ್ಕೂ ಅಧಿಕ ಪರವಾನಗಿ ಪಡೆಯಾದ ಆಟೋಗಳು ಸಂಚರಿಸುತ್ತಿದೆ.
ಒಂದು ಆಟೋ ಪರವಾನಗಿಯನ್ನು ಪಡೆಯಲು ಸುಮಾರು 50 ಸಾವಿರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಪರವಾನಗಿ ಪಡೆಯದೇ ಆಟೋ ಚಲಾಯಿಸುತ್ತಿರುವುದರಿಂದ ಪರವಾನಗಿ ಪಡೆದ ಆಟೋದವರಿಗೆ ಅನ್ಯಾಯವಾಗುತ್ತಿದೆ ಮತ್ತು ಪರವಾನಗಿ ಪಡೆಯದ ಆಟೋದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಏನಾದರೂ ತೊಂದರೆಯಾದರೆ ಯಾವುದೇ ರೀತಿಯಾದಂತಹ ವಿಮೆಯು ಕೂಡ ದೊರೆಯುವುದಿಲ್ಲ.
ಆಟೋ ಮೀಟರ್ ಕಡ್ಡಾಯ ಮಾಡಲಾಗಿದ್ದರು ಕೂಡ ಈ ನಿಯಮವನ್ನ ಸಾಕಷ್ಟು ಆಟೋ ಚಾಲಕರು ಪಾಲನೆ ಮಾಡುತ್ತಿಲ್ಲ. ನಗರದ ಪ್ರಮುಖ ವೃತಗಳಲ್ಲೇ ಆಟೋ ಮೀಟರ್ ಹಾಕದೆ ಸಂಚಾರ ಮಾಡುತ್ತಿದ್ದಾರೆ.
ಸಿಗ್ನಲ್ ಕ್ರಾಸ್, ಹೆಲ್ಮೆಟ್ ಹಾಕಿಲ್ಲ ಎಂದರೆ ತಕ್ಷಣ ಫೈನ್ ಹಾಕುವ ಪೊಲೀಸರಿಗೆ ಈ ನಿಯಮಗಳು ಕಾಣಿಸುತ್ತಿಲ್ಲವಾ ?? ಇದೆಲ್ಲದನ್ನು ಕಂಡರೂ ಕೂಡ ನಮ್ಮ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆಯಾ ಎನ್ನುವುದು ಸಾರ್ವಜನಿಕರ ಆರೋಪ…
#Auto #autometer #auto licence #Shivamogga #traffic
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ
ಜಿಲ್ಲಾ ನ್ಯಾಯಾಲಯದಲ್ಲಿ ಪ್ರೊಸೆಸ್ ಸರ್ವರ್-ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ.
Recent Comments