ಮಂಡ್ಯದಲ್ಲಿ ಕೈ ಅಭ್ಯರ್ಥಿ ಪರ ಪ್ರಚಾರಕ್ಕಿಳಿದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್. ಬಿಜೆಪಿ ಸೇರ್ಪಡೆಯಾದರು ಪ್ರಚಾರಕ್ಕೆ ಬರದ ಸುಮಲತಾ…

Cnewstv / 18.04.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ಮಂಡ್ಯದಲ್ಲಿ ಕೈ ಅಭ್ಯರ್ಥಿ ಪರ ಪ್ರಚಾರಕ್ಕಿಳಿದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್. ಬಿಜೆಪಿ ಸೇರ್ಪಡೆಯಾದರು ಪ್ರಚಾರಕ್ಕೆ ಬರದ ಸುಮಲತಾ…

ಬೆಂಗಳೂರು : ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಕೇಳಿದಿದ್ದಾರೆ ಮತ್ತೊಂದೆಡೆ ಸುಮಲತಾ ಬಿಜೆಪಿ ಸೇರ್ಪಡೆಯಾಗಿ ಹಲವು ದಿನಗಳು ಕಳೆದರೂ ಮಂಡ್ಯದಲ್ಲಿ ಪ್ರಚಾರ ನಡೆಸದೇ ಇರುವುದು ಸಾಕಷ್ಟು ಅನುಮಾನಗಳನ್ನ ಹುಟ್ಟು ಹಾಕಿದೆ.

ಹೌದು 2019ರ ಲೋಕಸಭಾ ಚುನಾವಣೆಯಲ್ಲಿ
ಇಡೀ ರಾಜ್ಯದಲ್ಲಿಯೇ ಮಂಡ್ಯ ಕ್ಷೇತ್ರ ಹೆಚ್ಚು ಗಮನ ಸೆಳೆದಿತ್ತು.‌ ಪ್ರತ್ಯೇಕ ಅಭ್ಯರ್ಥಿ ಸುಮಲತಾ ಪರವಾಗಿ ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ದರ್ಶನ್ ಹಾಗೂ ಯಶ್ ಬಿರುಸಿನ ಪ್ರಚಾರ ನಡೆಸಿದರು. ಜೆಡಿಎಸ್ ಪಕ್ಷದ ಅಭ್ಯರ್ಥಿ ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಯ ವಿರುದ್ಧ ಜೋಡೆತ್ತು ಸಕ್ಕತ್ ಸದ್ದು ಮಾಡಿತ್ತು. ಸಾಕಷ್ಟು ವೈಯಕ್ತಿಕ ಟೀಕೆ ಆರೋಪ ಪ್ರತ್ಯಾರೋಪಗಳು ಮಂಡ್ಯ ಪ್ರಚಾರ ಕಣದಲ್ಲಿ ಸಾಕ್ಷಿಯಾಗಿದ್ದವು.

2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪ್ರತ್ಯೇಕ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಅಲ್ಲಿಂದಲೇ ದರ್ಶನ ರಾಜಕೀಯವಾಗಿ ಮೊದಲು ಗುರುತಿಸಿಕೊಂಡಿದ್ದರು. ಸುಮಲತಾರವರಿಗೆ ಗೆಲುವು ಸಿಕ್ಕಿದ್ದರೂ ಕೂಡ ಅದರ ಹಿಂದೆ ಇರುವಂತಹ ದರ್ಶನ್ ಹಾಗೂ ಯಶ್ ರವರ ಪ್ರಚಾರ ಶ್ರಮವನ್ನ ಮರೆಯುವಂತಿಲ್ಲ.

ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಮಂಡ್ಯದಲ್ಲಿ ಕಣಕ್ಕಿಳಿಸಲಾಗಿದೆ. ಇತ್ತಾ ಸುಮಲತಾರವರು ಬಿಜೆಪಿ ಸೇರ್ಪಡೆಗೊಂಡು ಪಕ್ಷದ ಸೂಚನೆ ಮೇರೆಗೆ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದ್ದು, ಬೆಂಗಳೂರಿನ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಮೋಹನ್ ಪರ ಸುಮಲತಾ ಚುನಾವಣಾ ಪ್ರಚಾರ ನಡೆಸಿದ್ದಾರೆ ಆದರೆ ಮಂಡ್ಯದಲ್ಲಿ ಕುಮಾರಸ್ವಾಮಿ ಪರವಾಗಿ ಪ್ರಚಾರಕ್ಕೆ ಇನ್ನೂ ಇಳಿದಿಲ್ಲ.

ಮತ್ತೊಂದೆಡೆ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಪ್ರಚಾರ ನಡೆಸುತ್ತಿದ್ದು ನಾನು ಪಕ್ಷದ ಪರವಾಗಿ ಬಂದಿಲ್ಲ. ಅಭ್ಯರ್ಥಿಯ ಪರವಾಗಿ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು ಕೂಡ ರಾಜಕೀಯ ವಲಯದಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.‌

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 

ಇದನ್ನು ಒದಿ…

Leave a Reply

Your email address will not be published. Required fields are marked *

*