Cnewstv / 11.11.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
“ದೀಪಾವಳಿ ಹಬ್ಬ” ಮಣ್ಣಿನ ಹಣತೆಗಳ ಮಾರಾಟ ಜೋರು
ಶಿವಮೊಗ್ಗ : ಶಿವಮೊಗ್ಗ ನಗರ ದೀಪಾವಳಿ ಹಬ್ಬಕ್ಕೆ ಸಜ್ಜಾಗುತ್ತಿದೆ. ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಒಂದು ಕಡೆಯಾದರೆ ಮತ್ತೊಂದೆಡೆ ದೀಪಾವಳಿ ಎಂದ ಕೂಡಲೇ ನೆನಪಾಗುವುದು ಮಣ್ಣಿನ ಹಣತೆಗಳು. ನಗರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮಣ್ಣಿನ ಹಣತೆಗಳ ಮಾರಾಟ ಆರಂಭವಾಗಿದೆ.
ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ, ತಳ್ಳುವ ಗಾಡಿಗಳಲ್ಲಿ ಮಣ್ಣಿನ ಹಣತೆಗಳನ್ನ ಮಾರಾಟ ಜೋರಾಗಿಯೇ ಇದೆ. 5 ರೂಪಾಯಿಯಿಂದ 250 ರೂಪಾಯಿಯವರೆಗೂ ವಿವಿಧ ಆಕಾರದ ವಿವಿಧ ಗಾತ್ರದ ಮನಸೆಳೆಯುವ ಮಣ್ಣಿನ ಹಣತೆಗಳನ್ನ ಮಾರಾಟ ಮಾಡಲಾಗುತ್ತಿದೆ.
ಕೆಲವು ವರ್ಷಗಳಿಂದ ಪಿಂಗಾಣಿ, ಪ್ಲಾಸ್ಟಿಕ್ ಹಣತೆಗಳಿಗೆ ಜನರು ಮೊರೆ ಹೋಗಿದ್ದರು. ಇದರಿಂದ ಕುಂಬಾರಿಕೆಯ ವೃತ್ತಿ ಮಾಡುವವರ ಆದಾಯಕ್ಕೆ ಹೊಡೆತ ಮಾತ್ರವಲ್ಲದೆ ಪರಿಸರಕ್ಕೂ ಮಾರಕವಾಗಿತ್ತು. ಆದರೆ ಇದೀಗ ಮತ್ತೆ ಜನ ಮಣ್ಣಿನ ಹಣತೆಗಳ ಪ್ರಾಮುಖ್ಯತೆಯನ್ನು ತಿಳಿದು ಮಣ್ಣಿನ ಹಣತೆಗಳ ಮೊರೆ ಹೋಗುತ್ತಿದ್ದಾರೆ.
ಕೊರೊನಾ ನಂತರ ಮಣ್ಣಿನ ಹಣತೆಗಳನ್ನ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿತ್ತು. ಜನರು ಫ್ಯಾನ್ಸಿ ಹಾಗೂ ವಿದ್ಯುತ್ ಅಲಂಕಾರಿತಾದೀಪಗಳ ಮೊರೆ ಹೋಗಿದ್ದರು. ಆದರೆ ಈ ಬಾರಿ ಮತ್ತೆ ಮಣ್ಣಿನ ಹಣತೆಗಳನ್ನ ಹಚ್ಚಲು ಮುಂದಾಗಿದ್ದಾರೆ. ಕಳೆದ ಬಾರಿಗಿಂತಲೂ ಜನ ಹೆಚ್ಚಾಗಿ ಮಣ್ಣಿನ ಹಣತೆಗಳನ್ನ ಕೊಳ್ಳಲು ಬರುತ್ತಿದ್ದಾರೆ. ವ್ಯಾಪಾರವೂ ಕೂಡ ಈ ಬಾರಿ ಚೆನ್ನಾಗಿ ನಡೆಯುತ್ತಿದೆ..
ಶ್ರೀ ಲೀಲಾ
#Claylamp #DeepawaliFestival #Saleofclaymoney #ಮಣ್ಣಿನಹಣತೆಗಳಮಾರಾಟ #thepotter #ಕುಂಬಾರಕುಟುಂಬ #Shivamogga
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments