Cnewstv.in / 27.08.2021 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನವದೆಹಲಿ : ದೇಶದಲ್ಲಿ ಡ್ರೋಣ್ ಉದ್ಯಮಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಈ ಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಡ್ರೋನ್ ನಿಯಮಗಳಲ್ಲಿ ಸಾಕಷ್ಟು ಸರಳೀಕರಣ ಮಾಡಲಾಗಿದೆ.
2021ರನ್ನು ಕೇಂದ್ರ ಸರ್ಕಾರದ ನಾಗರೀಕ ವಿಮಾನಯಾನ ಸಚಿವಾಲಯ ಪರಿಷ್ಕರಣೆ ಮಾಡಿ ಹೊಸ ನಿಯಮಗಳನ್ನು ರೂಪಿಸಿದೆ. ಡ್ರೋಣ್ ನಿಯಮಾವಳಿಗಳು ಈ ವರ್ಷದ ಮಾ.12ರಿಂದ ಜಾರಿಗೆ ಬಂದಿವೆ. ಡ್ರೋಣ್‍ಗಳ ಗಾತ್ರದ ಮೇಲೆ ಶುಲ್ಕವನ್ನು ನಿಗದಿ ಮಾಡಲಾಗಿದೆ.
ಹೊಸ ನಿಯಮಗಳು :
* ಹಸಿರು ವಲಯಗಳಲ್ಲಿ, ನೆಲದಿಂದ 400 ಅಡಿಗಳವರೆಗೆ ಹಾರಾಟ ನಡೆಸಬಹುದಾದ ಡ್ರೋನ್‌ಗಳಿಗೆ ಫ್ಲೈಟ್ ಅನುಮತಿ ಕಡ್ಡಾಯವಾಗಿರುವುದಿಲ್ಲ.
*ವಿಮಾನನಿಲ್ದಾಣದಿಂದ 8ರಿಂದ 12 ಕಿಲೋ ಮೀಟರ್ ಅಂತರದಲ್ಲಿ 200 ಅಡಿ ಎತ್ತರದವರೆಗೂ ಡ್ರೋಣ್ ಹಾರಾಟಕ್ಕೆ ಅವಕಾಶ ನೀಡಲಾಗಿದೆ.
*ದೇಶದ ಒಳಗೆ ಡ್ರೋಣ್ ಬಳಕೆ ಮಾಡಲು ಈ ಮೊದಲು 25 ಅರ್ಜಿ ನಮೂನೆಯಲ್ಲಿ ಮಾಹಿತಿ ನೀಡಬೇಕಿತ್ತು, ಅದನ್ನು 5ಕ್ಕೆ ಇಳಿಸಲಾಗಿದೆ.
*ಡ್ರೋನ್ ಹಾರಾಟಕ್ಕಾಗಿ ಪಡೆಯಬೇಕಾದ ರಿಮೋಟ್ ಪೈಲಟ್ ಲೈಸನ್ಸ್‌ಗಾಗಿ ವಿಧಿಸಲಾಗಿದ್ದ ಶುಲ್ಕವನ್ನು 3,000 ರೂ.ಗಳಿಂದ 100 ರೂ.ಗೆ ಇಳಿಸಲಾಗಿದೆ.
*ನಾನಾ ಕಡೆಗಳಿಂದ ಒಪ್ಪಿಗೆ ಪಡೆಯುವ ಪ್ರಕ್ರಿಯೆಗೆ ಬ್ರೇಕ್ ಹಾಕಿ, ಸರಳವಾಗಿ, ಸುಲಭವಾಗಿ ಒಪ್ಪಿಗೆ ಅಥವಾ ಪ್ರಮಾಣಪತ್ರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
*ನೋಂದಣಿ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ಕಟ್ಟಬೇಕಿದ್ದ 74 ರೀತಿಯ ಶುಲ್ಕಗಳನ್ನು 4ಕ್ಕೆ ಇಳಿಸಲಾಗಿದೆ.
ಇದನ್ನು ಒದಿ : https://cnewstv.in/?p=5606
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments