ಶಿವಮೊಗ್ಗ: ಬಸ್ ಹಾಗೂ ಕಾರು ಮುಖಾಮುಖಿ ಢಿಕ್ಕಿಯಾಗಿ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಮುರುಘಾಮಠ ಕ್ರಾಸ್ ಬಳಿ ಘಟನೆ ನಡೆದಿದ್ದು, ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಖಾಸಗಿ ಬಸ್ ಸಾಗರದಿಂದ ಶಿವಮೊಗ್ಗ ಕಡೆಗೆ ಹಾಗೂ ಎರ್ಟಿಗಾ ಕಾರು ಶಿವಮೊಗ್ಗದಿಂದ ಸಾಗರ ಕಡೆಗೆ ತೆರಳುತ್ತಿತ್ತು. ಈ ವೇಳೆ ಮುರುಘಾಮಠ ಕ್ರಾಸ್ ಬಳಿ ಅಪಘಾತ ನಡೆದಿದ್ದು, ಬಸ್ಸು ಹಾಗೂ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಪ್ರಾಥಮಿಕ ಮಾಹಿತಿಯನುಸಾರ ಕಾರಿನಲ್ಲಿದ್ದವರು ದೊಡ್ಡಬಳ್ಳಾಪುರದವರು ಎನ್ನಲಾಗಿದ್ದು, ಮೃತರ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.
ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- ಕಾರು – ಬಸ್ ಮುಖಾಮುಖಿ ಡಿಕ್ಕಿ- ಇಬ್ಬರು ಸಾವು ...
- ತುಂಗಾ ಚಾನಲ್ ನಲ್ಲಿ ಈಜಲು ಹೋಗಿದ್ದ ಬಾಲಕ ಸಾವು ...
- ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ ...
- ಟಿಟಿ – ಜೀಪ್ ನಡುವೆ ಢಿಕ್ಕಿ- ದೇವರ ದರ್ಶನಕ್ಕೆ ಬಂದವರಿಗೆ ಆಘಾತ ...
- ಲಂಚ ಸ್ವೀಕರಿಸುತ್ತಿದ್ದ ಪಿಡಿಓ ಈಶ್ವರಪ್ಪ ಬಂಧನ ...
- ಶಿವಣ್ಣಗಾಗಿ ಶ್ರೀಕಾಂತ್ ಅಭಿಮಾನಿ ಬಳಗದಿಂದ ವಿಶೇಷ ಪೂಜೆ ...
- ಬಸ್ ಹಾಗೂ ಬೈಕ್ ಢಿಕ್ಕಿ: ಇಬ್ಬರು ಯುವಕರು ಸಾವು ...
- ಗಂಡನಿಂದ ಭೀಕರವಾಗಿ ಹೆಂಡತಿ ಕೊಲೆ: ಆರೋಪಿ ಅಂದರ್ ...
- ಸಕ್ರೆಬೈಲು ಬಳಿ ಧಗಧಗ ಹೊತ್ತಿ ಉರಿದ ಖಾಸಗಿ ಬಸ್ ...
- ರಾಷ್ಟ್ರೀಯ ನೆಟ್ ಬಾಲ್ ತಂಡಕ್ಕೆ ಜಿಲ್ಲೆಯ ಮೂವರು ಆಯ್ಕೆ ...
Recent Comments